More

    ತೆರಿಗೆ ಏರಿಕೆಗೆ ಜಯಪುರ ಗ್ರಾಮಸ್ಥರ ಆಕ್ರೋಶ

    ಜಯಪುರ: ಜಯಪುರ ಗ್ರಾಪಂ ಕಟ್ಟಡ ಮತ್ತು ಆಸ್ತಿ ತೆರಿಗೆಯನ್ನು ಏಕಾಏಕಿ ಶೇ.10ವರೆಗೆ ಏರಿಕೆ ಮಾಡಿರುವುದು ಖಂಡನೀಯ ಎಂದು ಜಿಪಂ ಮಾಜಿ ಅಧ್ಯಕ್ಷ ಎಚ್.ಎಮ್.ಸತೀಶ್ ದೂರಿದರು.
    ಜಯಪುರ ಗ್ರಾಪಂ ತೆರಿಗೆ ಏರಿಕೆ ವಿರುದ್ಧ ಗ್ರಾಪಂ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಸ್ಥರ ಗಮನಕ್ಕೆ ಬಾರದೆ ಏಕಾಏಕಿ ವಾಣಿಜ್ಯ ಹಾಗೂ ಕಟ್ಟಡ ತೆರಿಗೆ ಏರಿಕೆ ಮಾಡಿರುವುದರಿಂದ ಮಾಲೀಕರು ಕಂಗಾಲಾಗಿದ್ದಾರೆ. ಮೂರು ಸಾವಿರ ತೆರಿಗೆ ಇದ್ದ ಕಟ್ಟಡಕ್ಕೆ ಈ ಬಾರಿ 29 ಸಾವಿರ ತೆರಿಗೆ ವಿಧಿಸಲಾಗಿದೆ. ಇದು ಹಗಲು ದರೋಡೆ ಎಂದು ದೂರಿದರು.
    ಸಣ್ಣ ಪಟ್ಟಣದಲ್ಲಿ ವ್ಯಾಪಾರ ಕುಸಿತವಾಗಿದ್ದು, ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಕೂಡಲೇ ಗ್ರಾಪಂ ಆಡಳಿತ ಮಂಡಳಿ ತೆರಿಗೆ ಕಡಿಮೆ ಮಾಡಬೇಕು. ತೆರಿಗೆ ಏರಿಕೆ ಮಾಡುವಾಗ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಗ್ರಾಮಸ್ಥರ ಅಭಿಪ್ರಾಯ ಪಡೆದು ಮುಂದುವರಿಯ ಬೇಕು ಎಂದು ಗ್ರಾಮಸ್ಥರು ಗ್ರಾಪಂ ಅಧ್ಯಕ್ಷ ಸಂಪತ್ ಕುಮಾರ್‌ಗೆ ಮನವಿ ಸಲ್ಲಿಸಿದರು.
    ಕಟ್ಟಡ ಮಾಲೀಕರಾದ ಪರಮೇಶ್ವರ ಶಾಸ್ತ್ರಿ, ಕಬೀರ್, ಪ್ರಭಾಕರ್, ಮಹೇಶ್, ನರೇಂದ್ರ, ಅನಂತ, ಗಣೇಶ್ ಹಾಗೂ ಇತರ ವರ್ತಕರು ಕಟ್ಟಡ ಮಾಲೀಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts