More

    ಭಾರತೀಯ ಸಂಸ್ಕೃತಿಗೆ ಜೈನರ ಕೊಡುಗೆ

    ಕೊಕ್ಕರ್ಣೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅನೇಕ ದೇವಸ್ಥಾನಗಳಿದ್ದು ಇವುಗಳಲ್ಲಿ ಸೂರಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜೈನರ ಕೊಡುಗೆಗಳಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದು ಮೂಡುಬಿದಿರೆ ಜೈನಕಾಶಿ ಶ್ರೀ ಡಾ.ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮಿ ಹೇಳಿದರು.

    ಪ್ರಥಮ ಬಾರಿ ಸೂರಾಲು ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದರು. ಸೂರಾಲು ದೇವಸ್ಥಾನ ಸಂಪೂರ್ಣ ಶಿಲಾಮಯವಾಗಿದ್ದು ಶಿಲೆಯಲ್ಲಿ ಮಾಡಿದ ಬಲೀಂದ್ರನನ್ನು ಪೂಜಿಸುತ್ತಾರೆ. ಅನೇಕ ಸಮುದಾಯದವರು ಪೂಜಿಸುವ ದೇವಸ್ಥಾನ ಸೂರಾಲು. ಜೈನರು ಆದಿನಾಥ ದೇವರನ್ನು ಪೂಜಿಸಿದರೆ ಇತರ ಸಮುದಾಯದವರು ಈಶ್ವರ ಎಂದು ಪೂಜಿಸುತ್ತಾರೆ. ಮುಂದಿನ ದಿನಗಳಲ್ಲಿ ಜಗತ್ತನ್ನು ದಿವ್ಯ ಪುರುಷರು ಆಳಲಿದ್ದಾರೆ ಎಂದು ಹೇಳಿದರು.

    ಸೂರಾಲು ಅರಮನೆಯ ಸಂತೋಷ್ ಕುಮಾರ್, ಅಶೋಕ್ ಕುಮಾರ್, ಡಾ.ಅನಿಲ್ ಕುಮಾರ್, ಕೊಕ್ಕರ್ಣೆ ಅರಮನೆಯ ರಾಜೇಶ್, ರಾಕೇಶ್, ದೇವಸ್ಥಾನದ ಅರ್ಚಕ ಚಂದ್ರಶೇಖರ ಅಡಿಗ, ಅರ್ಚಕ ವೃಂದ, ಊರವರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts