More

    ಗುಣಪಾಲ ಕಡಂಬಗೆ ರತ್ನಾಕರವರ್ಣಿ ಪ್ರಶಸ್ತಿ

    ಬೆಂಗಳೂರು: ಬೆಂಗಳೂರು ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ 37ನೇ ವಾರ್ಷಿಕೋತ್ಸವದಲ್ಲಿ ತಮಿಳುನಾಡು ತಿರುಮಲೈ ಶ್ರೀಕ್ಷೇತ್ರ ಅರಹಂತಗಿರಿಯ ಡಾ.ಧವಲಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅವರು, ವಿಶ್ರಾಂತ ಪ್ರಾಚಾರ್ಯ ಕೆ.ಗುಣಪಾಲ ಕಡಂಬಗೆ ‘ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ’ ಪ್ರದಾನ ಮಾಡಿದರು.

    ನಗರದ ಬಸವನಗುಡಿಯಲ್ಲಿ ಕೂಟದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಕೆ.ಗುಣಪಾಲ ಕಡಂಬ ಅವರು, ಆ ಕಾಲಘಟ್ಟದಲ್ಲಿ ಛಂದಸ್ಸಿನ ಮೂಲಕ ಮಹಾಕಾವ್ಯ ರಚಿಸಿದವರು ಮಹಾಕವಿ ರತ್ನಾಕರವರ್ಣಿ. ಅವರ ಹೆಸರಿನಲ್ಲಿ ಪ್ರಶಸ್ತಿ ಸ್ವೀಕರಿಸಿರುವುದು ಮತ್ತಷ್ಟು ಪ್ರೇರಣೆ ನೀಡಿದೆ ಎಂದರು.

    ಇದೇ ವೇಳೆ ರತ್ನಾಕರ ಶತಕವನ್ನು ಶಿಲೆಯಲ್ಲಿ ತೆತ್ತಿಸಬೇಕು. ಪ್ರೇಕ್ಷಕರೆಲ್ಲ ಇದನ್ನು ನೋಡಬೇಕು ಎಂಬ ಕನಸಿದೆ. ಈ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

    ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸ್ಥಾಪಕ ಅಧ್ಯಕ್ಷ ಡಿ. ಸುರೇಂದ್ರ ಕುಮಾರ್ ಮಾತನಾಡಿ, ಕೆ.ಗುಣಪಾಲ ಕಡಂಬ ಅವರದು ಸರಳ- ಸಜ್ಜನಿಕೆಯ ವ್ಯಕ್ತಿತ್ವ. ಕಂಬಳದಲ್ಲಿ ಹಲವು ವರ್ಷಗಳ ಕಾಲ ಬಹಳಷ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

    ಸಮಾರಂಭದಲ್ಲಿ ಪತ್ರಕರ್ತೆ ನವಿತಾ ಜೈನ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕ ಅಧ್ಯಕ್ಷ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್, ಅವರ ಪತ್ನಿ ಅನಿತಾ, ಸಂಘದ ಸ್ಥಾಪಕ ಕಾರ್ಯಾಧ್ಯಕ್ಷ ಕೆ.ಬಿ. ಯುವರಾಜ್ ಬಲ್ಲಾಳ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts