More

    ಎಸ್​ಡಿಪಿಐನಿಂದ ವೃತ್ತದ ಹೆಸರು ಬದಲಾವಣೆ

    ಶಿವಮೊಗ್ಗ: ಎಸ್​ಡಿಪಿಐ ಸಂಘಟನೆ ಕರಪತ್ರವೊಂದರಲ್ಲಿ ಮಹಾವೀರ ವೃತ್ತ ಹೆಸರಿನ ಬದಲು ಶಾ ಅಲೀಂ ದಿವಾನ್ ದರ್ಗಾ ವೃತ್ತ ಎಂದು ಕಾನೂನುಬಾಹಿರವಾಗಿ ನಮೂದಿಸಿದ್ದನ್ನು ವಿರೋಧಿಸಿ ಜೈನ ಸಮಾಜದ ಪ್ರಮುಖರು, ವಿಎಚ್​ಪಿ, ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಪ್ರಮುಖರು ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಎಸ್​ಡಿಪಿಐ ಸಂಘಟನೆ ಅ.31ರಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭ ಕರಪತ್ರ ಹಂಚಿತ್ತು. ಇದರಲ್ಲಿ ಮಹಾವೀರ ವೃತ್ತ ಎಂದು ಹೆಸರಿಸುವ ಬದಲು ಶಾ ಅಲೀಂ ದಿವಾನ್ ದರ್ಗಾ ಎಂದು ನಮೂದಿಸಲಾಗಿತ್ತು. ಇದು ಕಾನೂನಿಗೆ ವಿರೋಧವಾಗಿದೆ. 50 ವರ್ಷಗಳ ಹಿಂದೆಯೇ ಸರ್ಕಾರ ಈ ವೃತ್ತವನ್ನು ಭಗವಾನ್ ಮಹಾವೀರ ವೃತ್ತ ಎಂದು ಘೊಷಿಸಿದೆ. ಆದರೆ ಎಸ್​ಡಿಪಿಐ ಸಂಘಟನೆ ಈ ಹೆಸರನ್ನು ಬದಲಾವಣೆ ಮಾಡಿಕೊಂಡು ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.

    ಈಗಾಗಲೇ ಮುಸ್ಲಿಂ ಸಂಘಟನೆಗಳು ಅನೇಕ ಬಡಾವಣೆಗಳ ಹೆಸರನ್ನು ಅನಧಿಕೃತವಾಗಿ ಬದಲಾಯಿಸುತ್ತಿವೆ. ಇದು ಹಿಂದು ಸಮಾಜದವರಿಗೆ ಭಾವನಾತ್ಮಕವಾಗಿ ನೋವು ತಂದಿದೆ. ಕೋಮುಭಾವನೆ ಕೆರಳಿಸುತ್ತದೆ. ಶಾಂತಿ ಸೌಹಾರ್ದತೆ ಹಾಳು ಮಾಡಲು ಹೊರಟಿರುವ ಎಸ್​ಡಿಪಿಐ ಮುಸ್ಲಿಮ್ ಸಂಘಟನೆಯನ್ನು ನಿಷೇಧಿಸಬೇಕು. ಆ ಸಂಘಟನೆ ಕಾರ್ಯಕರ್ತರ ಮೇಲೆ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದರು.

    ವಿಎಚ್​ಪಿ ಜಿಲ್ಲಾಧ್ಯಕ್ಷ ರಮೇಶ್​ಬಾಬು, ಪ್ರಮುಖರಾದ ದೀನದಯಾಳ್, ಎಸ್.ಆರ್.ನಟರಾಜ್, ನಾರಾಯಣ್ ಜಿ.ವರ್ಣೆಕರ್, ರಾಜೇಶ್ ಗೌಡ, ಸತೀಶ್ ಮಂಚೇಮನೆ, ಎಸ್.ಆರ್.ಸುಧಾಕರ್, ಅಂಕುಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts