More

    ರೂಹಿಗಾಗಿ ಜಾಹ್ನವಿ ಐಟಂ ಡಾನ್ಸ್!; ರಿಮಿಕ್ಸ್ ಗೀತೆಗೆ ಮಾಡರ್ನ್ ಟಚ್

    ಶ್ರೀದೇವಿ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸವಾಲೆನಿಸುವ ಪಾತ್ರಗಳನ್ನೂ ಒಪ್ಪಿಕೊಂಡು, ನಟಿಸಿ ಸೈ ಎನಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಹಿಂದೆಂದೂ ಮಾಡದ ಸಾಹಸ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಂದರೆ, ಮೊದಲ ಬಾರಿ ‘ರೂಹಿ’ ಚಿತ್ರದ ಸಲುವಾಗಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ! ಹಾರ್ದಿಕ್ ಮೆಹ್ತಾ ನಿರ್ದೇಶನದಲ್ಲಿ ಸಿದ್ಧವಾಗಿರುವ ‘ರೂಹಿ’ ಚಿತ್ರದಲ್ಲಿ ರಾಜ್​ಕುಮಾರ್ ರಾವ್ ನಾಯಕನಾಗಿ ನಟಿಸಿದರೆ, ಅವರಿಗೆ ಜಾಹ್ನವಿ ಕಪೂರ್ ಜೋಡಿಯಾಗಿದ್ದಾರೆ. ಹಾರರ್ ಥ್ರಿಲ್ಲರ್ ಶೈಲಿಯ ಈ ಸಿನಿಮಾ ಇದೇ 11ರಂದು ಬಿಡುಗಡೆ ಆಗುತ್ತಿದೆ. ಆ ಚಿತ್ರದ ಪ್ರಚಾರಾರ್ಥವಾಗಿ ಇದೀಗ ಜಾಹ್ನವಿ ಕಾಣಿಸಿಕೊಂಡ ಮೊದಲ ಐಟಂ ಹಾಡನ್ನು ಬಿಡುಗಡೆ ಮಾಡಲಾಗಿದೆ.

    ಮೈಚಳಿ ಬದಿಗಿಟ್ಟು ಗ್ಲಾಮರ್ ಅವತಾರದಲ್ಲಿ ಜಾಹ್ನವಿ ಹಾಡಿಗೆ ಹೆಜ್ಜೆಹಾಕಿದ್ದಾರೆ. ವಿಶೇಷ ಏನೆಂದರೆ, 2010ರಲ್ಲಿ ‘ಶಮುರ್; ಲೆಟ್ ದಿ ಮ್ಯೂಸಿಕ್ ಪ್ಲೇ’ ಅನ್ನೋ ಆಲ್ಬಂ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿತ್ತು. ಇಲ್ಲಿಯವರೆಗೂ ಬರೋಬ್ಬರಿ 3 ಕೋಟಿ ಮಂದಿ ಆ ಹಾಡನ್ನು ಕಣ್ತುಂಬಿಕೊಂಡಿದ್ದಾರೆ. ಇದೀಗ ಅದೇ ಹಾಡಿಗೆ ಮತ್ತಷ್ಟು ಮೆರುಗು ತುಂಬಿ, ಸಂಗೀತ ಮತ್ತು ಸಾಹಿತ್ಯದಲ್ಲಿಯೂ ಬದಲಾವಣೆ ಮಾಡಿ ರಿಲೀಸ್ ಮಾಡಲಾಗಿದೆ. ಬಿಡುಗಡೆಯಾದ ಕೆಲವೇ ಗಂಟೆಯಲ್ಲಿ ಲಕ್ಷಾಂತರ ಮಂದಿ ಹಾಡನ್ನು ವೀಕ್ಷಣೆ ಮಾಡಿದ್ದಾರೆ.

    ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…

    ಒಂದೇ ದಿನ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ನ ಇಬ್ಬರು ವಿದ್ಯಾರ್ಥಿಗಳ ಸಾವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts