More

    ದೆಹಲಿ ಮೆಟ್ರೋ ನಿಲ್ದಾಣದಿಂದ ಮತ್ತೊಂದು ವಿಡಿಯೋ ವೈರಲ್; ಇಲ್ಲಿ ಏನಾಗುತ್ತಿದೆ ಎಂದು ಪ್ರಶ್ನಿಸಿದ ಜನರು

    ದೆಹಲಿ: ದೆಹಲಿ ಮೆಟ್ರೋದ ಮತ್ತೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮೆಟ್ರೋ ನಿಲ್ದಾಣದಲ್ಲಿ ಡ್ಯಾನ್ಸ್ ಮಾಡುತ್ತಿರುವುದು ಕಂಡುಬರುತ್ತದೆ. ಮಹಿಳೆಯ ಡ್ಯಾನ್ಸ್ ನೋಡಿ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.  

    ವೈರಲ್ ವಿಡಿಯೋ ಯಾವ ಮೆಟ್ರೋ ನಿಲ್ದಾಣದ್ದು ಎಂಬ ಮಾಹಿತಿ ಕಂಡುಬಂದಿಲ್ಲ, ಆದರೆ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವಿಡಿಯೋ ನೋಡಿ ಕೋಪಗೊಂಡಿರುವುದಂತು ಸತ್ಯ. ಕೆಲವರು ನೃತ್ಯ ಚೆನ್ನಾಗಿದೆ. ಆದರೆ ಸ್ಥಳ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ಈ ವಿಡಿಯೋ ನಿಜವೇ ಅಥವಾ AI ನಿಂದ ಮಾಡಲ್ಪಟ್ಟಿದೆಯೇ ಎಂಬುದನ್ನು ಕನ್ ಫರ್ಮ್ ಮಾಡಿಲ್ಲ.      

    ಮಹಿಳೆಯ ವಿಡಿಯೋ ಹಲವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್‌ಸ್ಟಾಗ್ರಾಮ್, ಎಕ್ಸ್, ಯೂಟ್ಯೂಬ್ ಸೇರಿದಂತೆ ಹಲವೆಡೆ ವಿಡಿಯೋ ಶೇರ್ ಆಗಿದೆ. ವಿಡಿಯೋ ಕುರಿತು ಪ್ರತಿಕ್ರಿಯಿಸಿದ ಸಾಮಾಜಿಕ ಮಾಧ್ಯಮ ಬಳಕೆದಾರರು, “ದೆಹಲಿ ಮೆಟ್ರೋದಲ್ಲಿ ಏನು ನಡೆಯುತ್ತಿದೆ?” ಇಂತಹ ಚಟುವಟಿಕೆಗಳನ್ನು ಏಕೆ ನಿಯಂತ್ರಿಸಲಾಗುತ್ತಿಲ್ಲ” ಎಂದು ಪ್ರಶ್ನಿಸುತ್ತಿದ್ದಾರೆ.

    “ಈ ದಿನಗಳಲ್ಲಿ ಜನರು ಜನಪ್ರಿಯರಾಗಲು ಏನೂ ಮಾಡುತ್ತಿಲ್ಲ ಹೇಳಿ”, ” ದಿಲ್ಲಿ ಮೆಟ್ರೋದ ಧೋರಣೆ ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಈ ಜನ ದೊಡ್ಡ ಹಗರಣವನ್ನೇ ಸೃಷ್ಟಿಸುತ್ತಾರೆ”, “ನಾವು ಕೇವಲ ಪ್ರಯಾಣಿಕರಿಗೆ ಮನರಂಜನೆ ನೀಡುತ್ತಿದ್ದೇವೆ”, “ಮೆಟ್ರೋ ನಿಲ್ದಾಣದಲ್ಲಿ ಈ ರೀತಿ ಕುಣಿಯಬಾರದು” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ ಬಳಕೆದಾರರು.  

    ಮಾಹಿತಿಯ ಪ್ರಕಾರ, ವಿಡಿಯೋವನ್ನು @amisha_malik_professional_id ಹೆಸರಿನ Instagram ID ಯೊಂದಿಗೆ ಹಂಚಿಕೊಳ್ಳಲಾಗಿದೆ, ನಂತರ ಅದು ವೈರಲ್ ಆಗಿದ್ದು, ಇದೀಗ ಅದರ ಮೇಲೆ ಚರ್ಚೆ ಶುರುವಾಗಿದೆ.

    ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ ಇಬ್ಬರು ಹುಡುಗಿಯರು ಹೋಳಿ ಆಡುತ್ತಿರುವ ವಿಡಿಯೋ ವೈರಲ್ ಆಗಿತ್ತು.  ಆ ನಂತರ ಹುಡುಗಿಯರು ಸ್ಕೂಟರ್‌ನಲ್ಲಿ ಸಾಹಸ ಪ್ರದರ್ಶಿಸಿದ್ದರು. ನಂತರ ನೋಯ್ಡಾ ಪೊಲೀಸರು ಕ್ರಮ ಕೈಗೊಂಡು 32 ಸಾವಿರ ರೂ. ದಂಡ ವಿಧಿಸಿದ್ದರು.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts