More

    ಚಪ್ಪಲಿಯಲ್ಲಿ ಹೊಡೆಯಬೇಕೆನಿಸಿತ್ತು ಎಂದು ಜಗ್ಗೇಶ್ ಆಕ್ರೋಶ

    ಬೆಂಗಳೂರು: ಕರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಧನದಾಹಿಗಳ ಅಮಾನವೀಯ ವರ್ತನೆಯನ್ನು ಕಲಾವಿದ ಜಗ್ಗೇಶ್ ಖಂಡಿಸಿದ್ದಾರೆ.


    ಇಬ್ಬರು ಬಂಧುಗಳು, ಮೂವರು ಸ್ನೇಹಿತರು ಕರೊನಾದಿಂದ ಶುಕ್ರವಾರ ತೀರಿಕೊಂಡರು, ಮೂವರು ನರಳುತ್ತಿದ್ದಾರೆ. ಎದ್ದು ಹೋಗಿ ಸಹಾಯ ಮಾಡಲು ಆಗದು ಅಂತಹ ದರಿದ್ರ ಈ ಖಾಯಿಲೆಯಾಗಿದೆ. ನನ್ನ ಬಂಧು ಹೆಣಸಂಸ್ಕಾರಕ್ಕೆ ಆಂಬ್ಯುಲೆನ್ಸ್ ಹಾಗೂ ಸ್ಮಶಾನದವರು ನಾಯಿಗಳಂತೆ 30 ಸಾವಿರ ರೂ. ಪೀಕಿದ್ದಾರೆ, ಇವರಿಗೆ ಹೋಗಿ ಚಪ್ಪಲಿಯಲ್ಲಿ ಹೊಡೆಯಬೇಕು ಅನ್ನಿಸಿತು. ಇಂಥವರಿಂದ ಸರ್ಕಾರಕ್ಕೆ ಕೆಟ್ಟಹೆಸರು ಎಂದು ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.


    ಇಂಥ ಸಮಯದಲ್ಲೆ ಇಂಥ ಕ್ರೂರಿಗಳು ಹೆಚ್ಚಾಗೋದು. ಕೀಳು ಜನರಿಂದ ಮನುಷ್ಯರಿಗೆ ಮನುಷ್ಯರ ಮೇಲೆ ನಂಬಿಕೆ ಸತ್ತು ಹೋಗಿದೆ, ನಾನು ಇಷ್ಟು ನೊಂದದ್ದು ಇತ್ತೀಚಿನ ಈ ಕ್ರೂರ ವರ್ತನೆಯಿಂದ. ನನಗೆ ಅರಿಯದಂತೆ ಕೆಟ್ಟ ಬೈಗುಳ ಕೋಪ ಅನಾವಶ್ಯಕ ಬರುತ್ತಿದೆ, ತಪ್ಪು ಎಂದು ನನ್ನನ್ನು ನಾನೆ ಸರಿಪಡಿಸಿಕೊಳ್ಳುತ್ತಿರುವೆ. ಇಂಥ ದಿನಗಳ ಎಣಿಸಲಿಲ್ಲಾ ನಾನು ಎಂದು ಬೇಸರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts