More

    ಬೀಜೋಪಚಾರ ತರಲಿದೆ ಉತ್ತಮ ಇಳುವರಿ

    ಜಗಳೂರು: ಬಿತ್ತನೆ ಮೊದಲು ಬೀಜೋಪಚಾರ ರೂಢಿಸಿಕೊಂಡರೆ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದು ಕೆವಿಕೆ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ ಸಲಹೆ ನೀಡಿದರು.

    ತಾಲೂಕಿನ ಕಟ್ಟಿಗೆಹಳ್ಳಿ ಗ್ರಾಮದಲ್ಲಿ ಬುಧವಾರ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ರೈತ ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ 25 ಕೆಜಿ ಕಡಲೆ ಬಿತ್ತನೆ ಬೀಜ ವಿತರಿಸಿ ಮಾತನಾಡಿದರು.

    ತಾಲೂಕಿನಲ್ಲಿ ಕಡಲೆ ಬಿತ್ತನೆಗೆ ಅಕ್ಟೋಬರ್ ಸಕಾಲವಾಗಿದೆ. ದ್ವಿದಳ ಧಾನ್ಯಗಳಿಗೆ ಈ ಮಣ್ಣು ಪೂರಕವಾಗಿದೆ. ಈ ಭಾಗದಲ್ಲಿ ರೈತರು ಹೆಚ್ಚು ಕಡಲೆ ಬೆಳೆಯುವ ಕಾರಣ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೆ ರೋಗ ಬಾಧೆ ನಿಯಂತ್ರಿಸ ಬಹುದು ಎಂದರು.

    ಸ್ಥಳೀಯ ಭೂಮಿ, ಹವಾಗುಣಕ್ಕೆ ಸೂಕ್ತವಾದ ಬೀಜ ಬಿತ್ತನೆ ಮಾಡಬೇಕು. ಟ್ರೈಕೋಡರ್ಮ ನಾಲ್ಕು ಗ್ರಾಂನ್ನು ಪ್ರತಿ ಕೆಜಿ ಬೀಜಕ್ಕೆ ಲೇಪಿಸಬೇಕು. ನಂತರ ಜೈವಿಕ ಗೊಬ್ಬರಗಳಾದ ರೈಬೋಜಿಯಂ ಹಾಗೂ ರಂಜಕ ಗೊಬ್ಬರವನ್ನು ಎಕರೆಗೆ 1 ಚೀಲ ಹಾಕಬೇಕು. ಒಂದು ಎಕರೆಗೆ 25 ಕೆಜಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂದು ಸಲಹೆ ನೀಡಿದರು.

    ಸಹಾಯಕ ಕೃಷಿ ಅಧಿಕಾರಿ ಬೀರಪ್ಪ, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ಕೂಬಾ ನಾಯ್ಕ, ಎಫ್‌ಪಿಒ ಅಧ್ಯಕ್ಷ ಮೆದಗಿನಕೆರೆ ಮಂಜುನಾಥ್, ಅರಿಶಿಣಗುಂಡಿ ನಾಗರಾಜ್, ರಸ್ತೆಮಾಕುಂಟೆ ಕವಿತಾ ಸ್ವಾಮಿ, ಗುತ್ತಿದುರ್ಗ ಗ್ರಾಮದ ಬಸವನಗೌಡ, ಸಸ್ಯ ಸಂರಕ್ಷಣಾ ವಿಜ್ಞಾನಿ ಅವಿನಾಶ್, ಕಂಪನಿ ಸಿಇಒ ಮನೋಜ್‌ಕುಮಾರ್, ನಿರ್ದೇಶಕ ಕಲ್ಲೇದೇವರಪುರ ಕೃಷ್ಣಮೂರ್ತಿ,ಪವನ್ ಪಾಟೀಲ್, ಗ್ರಾಪಂ ಸದಸ್ಯರಾದ ಭಾರತಿ ಮಂಜುನಾಥ್, ಈರಣ್ಣ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts