More

    ಮೂಲ ಸೌಕರ್ಯಕ್ಕೆ ಮನವಿ

    ಜಗಳೂರು: ಕುಡಿವ ನೀರು, ಮಾಸ್ಕ್ ಸೇರಿ ಮೂಲ ಸೌಕರ್ಯ ಕಲ್ಪಿಸಲು ತಾಲೂಕು ಆಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯ ಇಲಾಖೆ ಸಿಬ್ಬಂದಿ ಆಗ್ರಹಿಸಿದ್ದಾರೆ.

    ಕೆಲಸ ಮಾಡುವ ಸ್ಥಳದಲ್ಲಿ ಸರಿಯಾದ ನೆರಳಿನ ವ್ಯವಸ್ಥೆ ಇಲ್ಲ, ಕುಡಿವ ನೀರು ಇಲ್ಲ, ಕೆಲವು ಕಡೆ ಇದ್ದರೂ ಕ್ಯಾನ್‌ಗಳಷ್ಟೇ ಕೊಟ್ಟಿದ್ದಾರೆ. ಕುಡಿಯಲು ಲೋಟಗಳಿರುವುದಿಲ್ಲ. ಸೋಂಕಿತ ಪ್ರದೇಶಗಳಲ್ಲಿರುವ ಸಿಬ್ಬಂದಿಗೆ ಕನಿಷ್ಠ ಎನ್ 95 ಮಾಸ್ಕ್ ನೀಡಿಲ್ಲ. ಕೈಗಳಿಗೆ ಗ್ಲೌಸ್‌ಗಳು ಪೂರೈಕೆಯಾಗುತ್ತಿಲ್ಲ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಕೆಲಸ ಮಾಡಲು ಸಾಧ್ಯವಿಲ್ಲ. ಸೋಮವಾರದಿಂದ ಕೆಲಸಕ್ಕೆ ಹೋಗುವುದಿಲ್ಲವೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ್ ಅವರ ಬಳಿ ಅಳಲು ತೋಡಿಕೊಂಡರು.

    ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಪಟ್ಟಣದಲ್ಲಿ ಮಧ್ಯಾಹ್ನ ಸ್ವಯಂಪ್ರೇರಿತರಾಗಿ ಬಂದ್ ಮಾಡುತ್ತಿರುವುದರಿಂದ ಹೋಟೆಲ್‌ಗಳು ಬಾಗಿಲು ಮುಚ್ಚುತ್ತಿವೆ. ಈ ವೇಳೆ ಊಟವಿಲ್ಲದೇ ಅಲೆದಾಡುವಂತಾಗಿದೆ ಎಂದರು.

    ಆರೋಗ್ಯ ಇಲಾಖೆ ಸಿಬ್ಬಂದಿ ಸುನಿಲ್, ಸೋಮಶೇಖರ್, ಬಸವರಾಜ್, ನಾಗರಾಜ್ ಇತರರಿದ್ದರು.

    ಕಂಟೇನ್ಮೆಂಟ್ ವಲಯಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಊಟ ಮಾಡಿ ಬರಲು ತೊಂದರೆಯಾಗುತ್ತಿದೆ. ಮಧ್ಯಾಹ್ನದ ಊಟ ಕೊಡುವಂತೆ ಪಪಂ ಮುಖ್ಯಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಆದರೆ ನಮ್ಮಲ್ಲಿ ಅನುದಾನವಿಲ್ಲ ಎಂದು ತಿಳಿಸಿದ್ದಾರೆ. ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ
    > ಡಾ.ನಾಗರಾಜ್ ತಾಲೂಕು ಆರೋಗ್ಯಾಧಿಕಾರಿ

    ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಮೂಲ ಸೌಕರ್ಯ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಕಲ್ಪಿಸಲಾಗುವುದು, ಸಿಬ್ಬಂದಿಯಲ್ಲಿ ಗೊಂದಲ ಬೇಡ, ಕರ್ತವ್ಯಕ್ಕೆ ಹಾಜರಾಗಲಿ.
    > ನಾಗವೇಣಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts