More

    ಹೊರ ರಾಜ್ಯದವರನ್ನು ಸ್ವಸ್ಥಳಕ್ಕೆ ಕಳುಹಿಸಿಕೊಟ್ಟ ತಾಲೂಕಾಡಳಿತ

    ಜಗಳೂರು: ಪಟ್ಟಣದ ಕೆರೆಯ ಸಮೀಪದ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರ, ತೆಲಂಗಾಣ, ಒರಿಸ್ಸಾ ಮೂಲದ ಕೂಲಿ ಕಾರ್ಮಿಕರನ್ನು ಬುಧವಾರ ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಸರ್ಕಾರಿ ಬಸ್ ಮೂಲಕ ಸ್ವಸ್ಥಳಕ್ಕೆ ಕಳಿಸಿಕೊಟ್ಟರು.

    ಕಾರ್ಮಿಕರ ಸ್ಥಿತಿಗತಿಯ ಬಗ್ಗೆ ಏಪ್ರಿಲ್ 4ರಂದು ವಿಜಯವಾಣಿ ‘ಲಾಕ್‌ಡೌನ್ ಮಧ್ಯೆ ಇಟ್ಟಿಗೆ ಭಟ್ಟಿ ಸದ್ದು’ ಶಿರ್ಷೀಕೆಯಡಿ ವರದಿ ಮಾಡಿ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತ ಅಧಿಕಾರಿಗಳು ಏಪ್ರಿಲ್ 14ರಂದು ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಅವರ ಸಮ್ಮುಖದಲ್ಲಿ ಕಾರ್ಮಿಕರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿತ್ತು.

    ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಕಾರ್ಮಿಕ ಇಲಾಖೆ ಸ್ಥಳಕ್ಕೆ ಹೋಗಿ ಆಹಾರ ಸೌಲಭ್ಯ ಕಲ್ಪಿಸಿತ್ತು ಎಂದು ಪತ್ರಿಕೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts