More

    ಜಡ್ಕಲ್ ವಿದ್ಯುತ್ ಸಮಸ್ಯೆ ಶೀಘ್ರ ಮುಕ್ತಿ: ಶಾಸಕ ಸುಕುಮಾರ ಶೆಟ್ಟಿ ಭರವಸೆ

    ಕುಂದಾಪುರ: ಜಡ್ಕಲ್, ಮುದೂರು, ಹೊಸೂರು, ಹಾಲ್ಕಲ್ ಪರಿಸರದ ವೋಲ್ಟೇಜ್ ಸಮಸ್ಯೆಗೆ ಯಲ್ಲೂರು ವಿದ್ಯುತ್ ಸರಬರಾಜು ಘಟಕ ಪರಿಹಾರ ನೀಡಲಿದೆ. ವನ್ಯಜೀವಿ ರಕ್ಷಿತಾರಣ್ಯದಲ್ಲಿ 3.8 ಕಿ.ಮೀ. ವಿದ್ಯುತ್ ಲೈನ್ ಹಾದುಹೋಗಲಿದ್ದು, ಒಪ್ಪಿಗೆಗಾಗಿ ಬೆಂಗಳೂರು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿದೆ. ಇನ್ನು ಮೂರು ದಿನದಲ್ಲಿ ಕ್ಲಿಯರೆನ್ಸ್ ಮಾಡಿಕೊಡುವ ಭರವಸೆ ಅಧಿಕಾರಿ ತಿಳಿಸಿರುವುದಾಗಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.
    ಜಡ್ಕಲ್ ವೋಲ್ಟೇಜ್ ಸಮಸ್ಯೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಜತೆ ಗೋಳಿಹೊಳೆ ಯಲ್ಲೂರು ವಿದ್ಯುತ್ ವಿತರಣೆ ಘಟಕಕ್ಕೆ ಶುಕ್ರವಾರ ಭೇಟಿ ನೀಡಿ, ಸ್ಥಳದಿಂದಲೇ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ದೂರವಾಣಿಯಲ್ಲಿ ಮಾತನಾಡಿ, ತಕ್ಷಣ ವಿದ್ಯುತ್ ಲೈನ್ ಕೆಲಸಕ್ಕೆ ಮೂರು ದಿನದಲ್ಲಿ ಒಪ್ಪಿಗೆ ನೀಡುವಂತೆ ಒತ್ತಾಯಿಸಿದರು.

    ವನ್ಯಜೀವಿ ಅರಣ್ಯ ವಿಭಾಗದಲ್ಲಿ ವಿದ್ಯುತ್ ಲೈನ್ ಸಾಗಲು ಪರವಾನಗಿ ಸಿಕ್ಕರೆ ಮತ್ತಾವ ಪ್ರದೇಶದಲ್ಲೂ ಲೈನ್ ಸಾಗಲು ಸಮಸ್ಯೆಯಾಗುವುದಿಲ್ಲ. ಈ ವಿದ್ಯುತ್ ಪ್ರಸರಣ ಘಟಕ ಆರಂಭವಾದರೆ ವೋಲ್ಟೇಜ್ ಸಮಸ್ಯೆ ಪರಿಹಾರವಾಗಲಿದೆ ಎಂದು ಶಾಸಕರು ತಿಳಿಸಿದರು.

    ಕುಂದಾಪುರ ತಾಪಂ ಉಪಾಧ್ಯಕ್ಷ ರಾಮ್ ಕಿಶನ್ ಹೆಗ್ಡೆ, ಜಡ್ಕಲ್ ಗ್ರಾಪಂ ಸದಸ್ಯ ನಾರಾಯಣ ಶೆಟ್ಟಿ, ಸ್ಥಳೀಯ ಪ್ರಮುಖ ಎಂ.ಆರ್.ಶೆಟ್ಟಿ, ರಘು ಶೆಟ್ಟಿ, ವಿಜಯವಾಣಿ ವಿತರಕ ಚಂದ್ರ ಪೂಜಾರಿ, ಮೆಸ್ಕಾಂ ಎಇ ರಾಕೇಶ್, ಎಇಇ ಹರೀಶ್ ಇದ್ದರು. ಜಡ್ಕಲ್ ವಿದ್ಯುತ್ ಸಮಸ್ಯೆ ಬಗ್ಗೆ ವಿಜಯವಾಣಿ ಶುಕ್ರವಾರ ವಿಶೇಷ ವರದಿ ಪ್ರಕಟಿಸಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts