More

    ಶಾಸಕ ರಾಜು ಕಾಗೆ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಪ್ರತಿಭಟನೆ

    ಮೈಸೂರು: ‘ಪ್ರಧಾನಿ ಮೋದಿ ಸತ್ತರೆ ಮುಂದೆ ಯಾರೂ ಪ್ರಧಾನಿ ಆಗುವುದಿಲ್ಲವೇ?’ ಎಂದು ಕಾಂಗ್ರೆಸ್ ಶಾಸಕ ರಾಜು ಕಾಗೆ ನೀಡಿರುವ ಹೇಳಿಕೆ ಖಂಡಿಸಿ ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ನಗರದ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಗುರುವಾರ ಪ್ರತಿಭಟನೆ ನಡೆಯಿತು.

    ಪ್ರತಿಭಟನೆಗೂ ಮುನ್ನ ಮೋದಿಗೆ ದೀರ್ಘಾಯುಷ್ಯ ಕರುಣಿಸುವಂತೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಹಿಳಾ ಮೋರ್ಚಾ ನಗರಾಧ್ಯಕ್ಷೆ ರೇಣುಕಾ ರಾಜು ಮಾತನಾಡಿ, ಪ್ರಧಾನಿ ಕುರಿತು ಶಾಸಕ ರಾಜು ಕಾಗೆ ಹಗುರವಾಗಿ ಹೇಳಿಕೆ ನೀಡಿರುವುದು ಖಂಡನೀಯ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ದಿರುವ ನರೇಂದ್ರ ಮೋದಿ ಅವರ ಸಾವನ್ನು ಬಯಸಿರುವುದು ಖಂಡನೀಯ ಎಂದರು.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಾಣಲಿದ್ದು, ಇದರಿಂದ ಹತಾಶೆಗೊಂಡು ಕಾಂಗ್ರೆಸ್ ನಾಯಕರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಟೀಕಿಸುವ ಭರದಲ್ಲಿ ಪ್ರಧಾನಿಯ ಸಾವನ್ನು ಬಯಸುವುದು ಉತ್ತಮ ಸಂಸ್ಕೃತಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರತಿಭಟನೆಯಲ್ಲಿ ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಂದ್ರಕಲಾ, ಪದಾಧಿಕಾರಿಗಳಾದ ಸವಿತಾ ಗೌಡ, ಸೌಭಾಗ್ಯಮ್ಮ, ಮಾಲಿನಿ, ಪುಷ್ಪಾ, ಮೀನಾಕ್ಷಿ, ಚಂದ್ರಕಲಾ, ಜ್ಯೋತಿ, ರಶ್ಮಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts