More

    ಕಾನ್ಪುರ ಟೆಸ್ಟ್‌ನಲ್ಲಿ ತಂದೆಯ ಕನಸು ನನಸಾಗಿಸಿದ ಶ್ರೇಯಸ್ ಅಯ್ಯರ್

    ಕಾನ್ಪುರ: ಮುಂಬೈ ಬ್ಯಾಟರ್ ಶ್ರೇಯಸ್ ಅಯ್ಯರ್ ಭಾರತ ಪರ ಟೆಸ್ಟ್ ಕ್ರಿಕೆಟ್ ಆಡಬೇಕೆಂಬುದು ಅವರ ತಂದೆ ಸಂತೋಷ್ ಅವರ ಮಹದಾಸೆಯಾಗಿತ್ತು. ಹೀಗಾಗಿ 2017ರಲ್ಲಿ ಶ್ರೇಯಸ್ ಬಾರ್ಡರ್-ಗಾವಸ್ಕರ್ ಟ್ರೋಫಿ ಜತೆಗೆ ತೆಗೆಸಿಕೊಂಡಿದ್ದ ಚಿತ್ರವನ್ನು ಅವರು ಕಳೆದ 4 ವರ್ಷಗಳಿಂದಲೂ ವಾಟ್ಸಾಪ್ ಡಿಪಿ ಮಾಡಿಕೊಂಡಿದ್ದರು. ಗುರುವಾರ ಕಾನ್ಪುರದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಶ್ರೇಯಸ್ ಅಯ್ಯರ್ ಪದಾರ್ಪಣೆ ಮಾಡುವುದರೊಂದಿಗೆ ಕೊನೆಗೂ ತಂದೆಯ ಕನಸು ನನಸಾಗಿಸಿದರು.

    2017ರಲ್ಲಿ ಆಸೀಸ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಬಾರ್ಡರ್-ಗಾವಸ್ಕರ್ ಟ್ರೋಫಿ ಸರಣಿಯ ಧರ್ಮಶಾಲಾ ಟೆಸ್ಟ್ ವೇಳೆ ವಿರಾಟ್ ಕೊಹ್ಲಿ ಗಾಯಗೊಂಡಾಗ ಶ್ರೇಯಸ್ ಬದಲಿ ಆಟಗಾರರಾಗಿ ತಂಡದಲ್ಲಿದ್ದರು. ಆಗ 11ರ ಬಳಗದಲ್ಲಿ ಸ್ಥಾನ ಪಡೆಯದಿದ್ದರೂ, ಸರಣಿ ಗೆಲುವಿನ ಬಳಿಕ ಅವರು ಟ್ರೋಫಿ ಜತೆ ಪೋಸ್ ನೀಡಿ ಸಂಭ್ರಮಿಸಿದ್ದರು. ಅದು ಅವರ ತಂದೆಗೆ ಇದುವರೆಗೆ ಮಗನ ವೃತ್ತಿಜೀವನದ ವಿಶೇಷ ಕ್ಷಣವಾಗಿತ್ತಂತೆ.

    ಶ್ರೇಯಸ್ ಟೆಸ್ಟ್ ಆಡಲಿದ್ದಾರೆ ಎಂದು ನಾಯಕ ರಹಾನೆ ಬುಧವಾರವೇ ಘೋಷಿಸಿದಾಗ ಅದು ನನ್ನ ಜೀವನದ ಅತ್ಯಂತ ಸಂತೋಷದ ದಿನವಾಗಿತ್ತು. ಮಗ ಐಪಿಎಲ್, ಟಿ20, ಏಕದಿನ ಆಡಿದ್ದಕ್ಕಿಂತ ಅದುವೇ ನನಗೆ ಹೆಮ್ಮೆಯ ಕ್ಷಣವಾಗಿತ್ತು ಎಂದು ಸಂತೋಷ್ ಅಯ್ಯರ್ ಹೇಳಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟಿಗ ಸುನೀಲ್ ಗಾವಸ್ಕರ್‌ರಿಂದ ಮಗ ಟೆಸ್ಟ್ ಕ್ಯಾಪ್ ಪಡೆದ ಖುಷಿಯನ್ನೂ ಕೂಡ ಬಣ್ಣಿಸಲಾಗದು ಎಂದಿದ್ದಾರೆ. ಶ್ರೇಯಸ್ ಅವರ ತಾಯಿ ರೋಹಿಣಿ ಮಂಗಳೂರು ಮೂಲದವರಾಗಿದ್ದಾರೆ.

    ಕಾನ್ಪುರ ಟೆಸ್ಟ್‌ನಲ್ಲಿ ಕುಸಿದ ಭಾರತಕ್ಕೆ ಶ್ರೇಯಸ್-ಜಡೇಜಾ ಆಸರೆ

    ಐಪಿಎಲ್‌ನ ಹೊಸ ತಂಡ ಲಖನೌಗೆ ಕನ್ನಡಿಗ ಕೆಎಲ್ ರಾಹುಲ್ ನಾಯಕ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts