More

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!

    ಕರೊನಾ ಮಹಾಮಾರಿ ಜಗತ್ತಿನಲ್ಲಿ ಹಾವಳಿ ಶುರುವಾಗಿ ವರ್ಷ ಕಳೆದಿದೆ. ಈ ಅವಧಿಯಲ್ಲಿ ಜನಜೀವನವೇ ಬದಲಾಗಿ ಹೋಗಿದ್ದು, ಆತಂಕದ ನೆರಳಲ್ಲೇ ಜೀವಿಸುವಂತಾಗಿದೆ. ಆರ್ಥಿಕ ನಷ್ಟ, ಉದ್ಯೋಗ ನಷ್ಟದ ಪ್ರಮಾಣವಂತೂ ಶ್ರೀಸಾಮಾನ್ಯರನ್ನು ಹೈರಾಣಾಗಿಸಿದೆ. ಇನ್ನೂ ಕೆಲ ಕಾಲ ಕರೊನಾದೊಂದಿಗೆ ಜೀವಿಸುವುದು ಅನಿವಾರ್ಯ ಎಂಬ ತಜ್ಞರ ಎಚ್ಚರಿಕೆ ನಡುವೆಯೇ ಲಸಿಕೆ ತಯಾರಿಕೆ ಯೋಜನೆಗಳು ಅಂತಿಮ ಹಂತಕ್ಕೆ ತಲುಪಿರುವುದು ಒಂದಿಷ್ಟು ಭರವಸೆ ಮೂಡಿಸಿದೆ. ಈ ಎಲ್ಲ ಸಂಗತಿಗಳ ಕುರಿತು ವಿವರಿಸಿದ್ದಾರೆ ರವೀಂದ್ರ ಎಸ್. ದೇಶಮುಖ್.

    ಚೀನಾದ ವುಹಾನ್ ನಗರದಲ್ಲಿ 2019ರ ನವೆಂಬರ್ 17ರಂದು ಮೊದಲ ಕರೊನಾ ಸೋಂಕು ಪ್ರಕರಣ ಪತ್ತೆಯಾಗಿತ್ತು. ಆದರೆ, ಈ ವಿಷಯವನ್ನು ಗೌಪ್ಯವಾಗಿರಿಸಿದ ಚೀನಾ, ವಿಶ್ವ ಆರೋಗ್ಯ ಸಂಸ್ಥೆಗೂ ತಪು್ಪಮಾಹಿತಿ ನೀಡಿ ದಾರಿ ತಪ್ಪಿಸಿತು. ಹುವೈ ಆಸ್ಪತ್ರೆಯ ವೈದ್ಯರೊಬ್ಬರು ಡಿಸೆಂಬರ್ 27ರಂದು ಮಾಧ್ಯಮಗಳೊಂದಿಗೆ ಮಾತನಾಡಿ, ‘ಕರೊನಾ ಎಂಬ ವೈರಸ್ ವೇಗವಾಗಿ ಹರಡುತ್ತಿರುವುದರಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ’ ಎಂದು ಬಹಿರಂಗ ಪಡಿಸಿದರು. ವಿಶ್ವ ಆರೋಗ್ಯ ಸಂಸ್ಥೆಗೆ ಮತ್ತು ಹೊರದೇಶಗಳಿಗೆ ಕೂಡಲೇ ಮಾಹಿತಿ ನೀಡದೆ ಮೋಸ ಎಸಗಿದ ಚೀನಾ, ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದಂತೆ, ಪಿಪಿಇ ಕಿಟ್, ಮಾಸ್ಕ್​ಗಳನ್ನು ತಯಾರಿಸಿ, ರಫ್ತು ಮಾಡುತ್ತ, ಅದರಲ್ಲೂ ಆರ್ಥಿಕ ಲಾಭ ಮಾಡಹೊರಟಿತು. ಆದರೆ, ಅದಕ್ಕೂ ಮುಂಚೆ ಬೃಹತ್ ಪ್ರಮಾಣದಲ್ಲಿ ಈ ವಸ್ತುಗಳನ್ನು ಆಮದು ಮಾಡಿಕೊಂಡು ಸಂಗ್ರಹಿಸಿಕೊಂಡಿತ್ತು. ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಚೀನಾಮೂಲದ ನಾಗರಿಕರು ಹೊಸ ವರ್ಷಾಚರಣೆಗೆಂದು ಸ್ವದೇಶಕ್ಕೆ ತೆರಳಿ, ಮತ್ತೆ ಯುಎಸ್​ಗೆ ಮರಳಿದಾಗ ತಮ್ಮ ಜತೆ ಕರೊನಾವನ್ನೂ ತೆಗೆದುಕೊಂಡು ಬಂದರು. ಹಾಗಾಗಿಯೇ, ಅಮೆರಿಕದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಸೋಂಕು ವೇಗವಾಗಿ ವ್ಯಾಪಿಸಿತು. ‘ಚೀನಾ ವೈರಸ್ ಇಷ್ಟು ದೂರ ಹೇಗೆ ಬರುತ್ತೆ’ ಎಂದು ಕೆಲವರು ಭಾರತದಲ್ಲಿ ನಿರುಮ್ಮಳರಾಗಿದ್ದರು. ಆದರೆ, 2020ರ ಫೆಬ್ರವರಿ-ಮಾರ್ಚ್ ಹೊತ್ತಿಗೆ ಭಾರತಕ್ಕೂ ಕರೊನಾ ವಕ್ಕರಿಸಿತು. ಕಳೆದೊಂದು ವರ್ಷದಲ್ಲಿ ಇಡೀ ಜಗತ್ತೇ ಈ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೂ, ಸಮಸ್ಯೆಯ ಗಂಭೀರತೆ ಮಾತ್ರ ತಗ್ಗಿಲ್ಲ. ಜಾಗತಿಕವಾಗಿ 6 ಕೋಟಿಗೂ ಅಧಿಕ ಜನ ಸೋಂಕಿತರಾಗಿದ್ದು, 14.50 ಲಕ್ಷಕ್ಕಿಂತ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.

    ಭಾರತದ ಸ್ಥಿತಿ: ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ 2ನೇ ದೇಶ; ಮರಣ ಪ್ರಮಾಣದಲ್ಲಿ 3ನೇ ದೇಶ; ಸಕ್ರಿಯ ಪ್ರಕರಣಗಳಲ್ಲಿ 7ನೇ ದೇಶ.

    ಹೆಚ್ಚು ಸಕ್ರಿಯ ಪ್ರಕರಣಗಳು ಎಲ್ಲಿವೆ?: ಅಮೆರಿಕ, ಫ್ರಾನ್ಸ್, ಇಟಲಿ, ಬೆಲ್ಜಿಯಂ, ಬ್ರೆಜಿಲ್, ರಷ್ಯಾ, ಭಾರತ

    ಕರೊನಾದಿಂದಾದ ಪರಿಣಾಮ

    • ಕರೊನಾದಿಂದಾಗಿ, ಚೀನಾ ಹೊರತುಪಡಿಸಿ ಬಹುತೇಕ ಎಲ್ಲ ದೇಶಗಳ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಕುಸಿದಿದೆ.
    • ಜಾಗತಿಕವಾಗಿ ಕೋಟ್ಯಂತರ ಉದ್ಯೋಗನಷ್ಟವಾಗಿದೆ.
    • ಕರೊನಾ ಹರಡುವಿಕೆಗೆ ಕಾರಣವಾಗಿರುವುದರಿಂದ ಚೀನಾದಿಂದ ನಷ್ಟಭರ್ತಿ ಮಾಡಬೇಕೆಂದು ಅಮೆರಿಕದ ಹಲವು ನ್ಯಾಯಾಲಯಗಳಲ್ಲಿ ಅಲ್ಲಿನ ಜನರು ಪ್ರಕರಣಗಳನ್ನು ದಾಖಲಿಸಿದ್ದಾರೆ.
    • ಅಮೆರಿಕದ ನಿರ್ಗಮಿಸುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಂತೂ ಚೀನಾ ಮೇಲೆ ಕೆಂಡಕಾರುತ್ತಿದ್ದಾರೆ.

    ಮೊದಲ ಅಲೆಗಿಂತ ಭೀಕರ ಎರಡನೇ ಅಲೆ

    ಕರೊನಾ ಆರಂಭಕ್ಕಿಂತಲೂ, ಅದರ ಎರಡನೇ ಅಲೆ ಅಪಾಯಕಾರಿಯಾಗಿದೆ. ಏಕೆಂದರೆ ರೋಗಿಗಳ ಸಂಖ್ಯೆ ಮತ್ತು ಮೃತರ ಸಂಖ್ಯೆ ಎರಡೂ ಗಣನೀಯವಾಗಿ ಹೆಚ್ಚುತ್ತಿದೆ.
    • ಅಮೆರಿಕದಲ್ಲಿ ಕರೊನಾದ ಮೊದಲ ಅಲೆ ಕಾಣಿಸಿಕೊಂಡಿದ್ದು ಜುಲೈ 24ಕ್ಕೆ. ಆಗ ಒಂದು ದಿನಕ್ಕೆ 79,440 ಪ್ರಕರಣ ದಾಖಲಾಗಿದ್ದವು. ಆದರೆ, ನವೆಂಬರ್ ತಿಂಗಳಲ್ಲಿ ಅಂದರೆ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ದಿನಕ್ಕೆ 2 ಲಕ್ಷಕ್ಕಿಂತಲೂ ಅಧಿಕ ಪ್ರಕರಣ ದಾಖಲಾಗುತ್ತಿವೆ.
    • ಬ್ರೆಜಿಲ್​ನಲ್ಲಿ ಕರೊನಾದ ಮೊದಲ ಅಲೆ ತೀವ್ರ ಸ್ವರೂಪದಲ್ಲಿದ್ದಾಗ ಒಂದು ದಿನಕ್ಕೆ ಗರಿಷ್ಠ 70,896 ಪ್ರಕರಣ ದಾಖಲಾಗಿದ್ದವು. ಆ ಬಳಿಕ ಹೊಸ ಕೇಸುಗಳು ತಗ್ಗುತ್ತ ದಿನಕ್ಕೆ ಕೇವಲ 8 ಸಾವಿರಕ್ಕೆ ತಲುಪಿತ್ತು. ಈಗ ಎರಡನೇ ಅಲೆಯಲ್ಲಿ ಪ್ರತಿನಿತ್ಯ ಸರಾಸರಿ 30-40 ಸಾವಿರ ಹೊಸ ರೋಗಿಗಳು ಪತ್ತೆಯಾಗುತ್ತಿದ್ದಾರೆ. 
    • ಕರೊನಾ ಮೊದಲ ಅಲೆಯಲ್ಲಿ ರಷ್ಯಾದಲ್ಲಿ ಕಾಣಿಸಿಕೊಳ್ಳುತ್ತಿದ್ದ ದೈನಂದಿನ ಕೇಸುಗಳು 11 ಸಾವಿರ. ಎರಡನೇ ಅಲೆಯಲ್ಲಿ ಈ ಸಂಖ್ಯೆ 25 ಸಾವಿರಕ್ಕೆ ಹೆಚ್ಚಿದೆ. 
    • ಫ್ರಾನ್ಸ್​ನಲ್ಲಿ ಕರೊನಾ ಮೊದಲ ಅಲೆಯಲ್ಲಿ ನಿತ್ಯ ಸರಾಸರಿ 5 ಸಾವಿರ ಪ್ರಕರಣಗಳಿರುತ್ತಿದ್ದವು. ಎರಡನೇ ಅಲೆಯಲ್ಲಿ ಈ ಸಂಖ್ಯೆ 88 ಸಾವಿರಕ್ಕೆ ಹೆಚ್ಚಿದೆ. 
    • ನವೆಂಬರ್​ನಲ್ಲಿ ಭಾರತದ 20ಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಕರೊನಾದ ಎರಡನೇ ಅಲೆ ಕಾಣಿಸಿಕೊಂಡಿದೆ. ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್, ಮಹಾರಾಷ್ಟ್ರ, ಕೇರಳ ಸೇರಿದಂತೆ 20 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚುತ್ತಿವೆ. ಪಂಜಾಬಿನಲ್ಲಿ ಮತ್ತೆ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗಿದೆ. ಕರೊನಾ ಸುರಕ್ಷಾ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವ ನಿಯಮವನ್ನು ಅನೇಕ ರಾಜ್ಯಗಳು ತಂದಿವೆ.

    54 ದೇಶಗಳಲ್ಲಿ ಎರಡನೇ ಅಲೆ

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!

    ಮೂರ್ನಾಲ್ಕು ತಿಂಗಳಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತದೆ ಎಂಬ ತಜ್ಞರ ಅಂದಾಜುಗಳು ಹುಸಿಯಾದವು. ಅಮೆರಿಕ, ಭಾರತದಲ್ಲಿ ಒಂದಿಷ್ಟು ಅವಧಿಗೆ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದರೂ, ಚಳಿಗಾಲ ಆರಂಭವಾಗುತ್ತಿದ್ದಂತೆ ಮತ್ತೆ ರೋಗಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಅದರಲ್ಲೂ, ಅಮೆರಿಕ, ಬ್ರೆಜಿಲ್, ಫ್ರಾನ್ಸ್, ರಷ್ಯಾ, ಭಾರತ (ಭಾರತದ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಮಾಣ ಕಡಿಮೆಯಾಗಿದ್ದರೆ ಕೆಲ ರಾಜ್ಯಗಳಲ್ಲಿ ಮತ್ತೆ ಹೆಚ್ಚಿಗೆಯಾಗಿದೆ) ಸೇರಿ 54 ದೇಶಗಳಲ್ಲಿ ಕರೊನಾ ಎರಡನೇ ಅಲೆ ಕಾಣಿಸಿಕೊಂಡಿರುವುದರಿಂದ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ. 54 ದೇಶಗಳ ಪೈಕಿ 25 ಯುರೋಪಿಯನ್, ಏಷ್ಯಾದ 11, ಉತ್ತರ ಅಮೆರಿಕದ 7, ಆಫ್ರಿಕಾದ 6, ದಕ್ಷಿಣ ಆಫ್ರಿಕಾದ 5 ದೇಶಗಳಿವೆ. ಸೆಪ್ಟೆಂಬರ್​ವರೆಗೆ ಜಾಗತಿಕವಾಗಿ ಪ್ರತಿನಿತ್ಯ ಸರಾಸರಿ 3 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿದ್ದವು. ಆದರೆ, ಪ್ರಸಕ್ತ ಈ ಸಂಖ್ಯೆ 6 ಲಕ್ಷಕ್ಕೆ ಏರಿಕೆಯಾಗಿದೆ.

    ಲಸಿಕೆ @ 2021

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!

    ಪ್ರಪಂಚದಾದ್ಯಂತ 100ಕ್ಕೂ ಹೆಚ್ಚು ವ್ಯಾಕ್ಸಿನ್ ತಯಾರಿಕೆಯ ಯೋಜನೆಗಳು ಪ್ರಗತಿಯಲ್ಲಿವೆ. ಈ ಪೈಕಿ 5 ಲಸಿಕೆಗಳು ಪ್ರಮುಖವಾಗಿವೆ. ಪರೀಕ್ಷಾ ಫಲಿತಾಂಶಗಳು ಉತ್ತಮವಾಗಿವೆ ಎಂದು ಈ ಐದೂ ಕಂಪನಿಗಳು ವಿಶ್ವಾಸ ವ್ಯಕ್ತಪಡಿಸಿವೆ. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜೆನೆಕಾ ಕಂಪನಿ ಭಾರತದಲ್ಲಿ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆ ಭಾರತಕ್ಕೆ ಪರಿಣಾಮಕಾರಿಯಾಗಬಲ್ಲದು ಎಂಬುದು ತಜ್ಞರ ಅನಿಸಿಕೆ. 2021 ಫೆಬ್ರವರಿ ಕೊನೆಯ ವಾರದ ಹೊತ್ತಿಗೆ 10 ಕೋಟಿ ಡೋಸೇಜ್ ತಯಾರಾಗಲಿವೆ ಎಂದು ಕಂಪನಿ ಹೇಳಿಕೊಂಡಿದೆ. 2021ರ ಮೊದಲ ಮೂರು ತಿಂಗಳೊಳಗೆ ಲಸಿಕೆ ಬರುವ ವಿಶ್ವಾಸವನ್ನು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಕೂಡ ವ್ಯಕ್ತಪಡಿಸಿದ್ದಾರೆ.

    ನೀಲಿನಕ್ಷೆ ತಯಾರು: ಲಸಿಕೆ ವಿತರಣೆಗೆ ಭಾರತ ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ. ಮೊದಲ ಹಂತದಲ್ಲಿ 31 ಕೋಟಿ ಜನರಿಗೆ ಲಸಿಕೆ ಸಿಗಲಿದೆ. ಇದರಲ್ಲಿ ವೈದ್ಯರು, ಇತರ ಆರೋಗ್ಯ ಕಾರ್ಯಕರ್ತರು, 50 ವರ್ಷ ಮೇಲ್ಪಟ್ಟ ಹಿರಿಯರು ಸೇರಿದ್ದಾರೆ. ಜುಲೈ-ಆಗಸ್ಟ್ ವೇಳೆಗೆ 40-50 ಕೋಟಿ ಡೋಸೇಜ್ ಲಭ್ಯವಾಗುವ ನಿರೀಕ್ಷೆ ಇದೆ.

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!

    ಲಸಿಕೆ ಅಭಿವೃದ್ಧಿ ಪರಿಶೀಲಿಸಿದ ಪ್ರಧಾನಿ ಮೋದಿ

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!
    ಹೈದರಾಬಾದ್​ನಲ್ಲಿ ಭಾರತ್ ಬಯೋಟೆಕ್ ಕಂಪನಿ ಅಧಿಕಾರಿಗಳ ಜತೆ ಮೋದಿ ಮಾತುಕತೆ

    ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ನಿರ್ಣಾಯಕ ಹಂತಕ್ಕೆ ಪ್ರವೇಶಿಸಿರುವ ಹಿನ್ನೆಲೆಯಲ್ಲಿ ದೇಶದ 3 ಕಡೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಿವಿಧ ಲಸಿಕೆಗಳ ಪ್ರಗತಿ ಪರಿಶೀಲನೆಯನ್ನು ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈಗೊಂಡರು. ಅಹಮದಾಬಾದ್​ನ ಜೈಡುಸ್ ಕ್ಯಾಡಿಲಾ, ಹೈದರಾಬಾದ್​ನ ಭಾರತ್ ಬಯೋಟೆಕ್ ಹಾಗೂ ಪುಣೆಯ ಸೆರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಭೇಟಿ ನೀಡಿ, ಲಸಿಕೆಗಳ ಅಭಿವೃದಿ, ಕ್ಲಿನಿಕಲ್ ಪ್ರಯೋಗಗಳ ವರದಿ ಪಡೆದರು.

    ಅಹಮದಾಬಾದ್

    ಶನಿವಾರ ಬೆಳಗ್ಗೆ 10ಕ್ಕೆ ಅಹಮದಾ ಬಾದ್​ನ ಜೈಡುಸ್ ಕ್ಯಾಡಿಲಾಗೆ ಮೋದಿ ಭೇಟಿ ನೀಡಿದರು. ಜೈಕೋವಿಡ್ ಎಂಬ ಲಸಿಕೆಯನ್ನು ಜೈಡುಸ್ ಕ್ಯಾಡಿಲಾ ಅಭಿವೃದ್ಧಿಪಡಿಸುತ್ತಿದ್ದು, ತಜ್ಞರು ಹಾಗೂ ವಿಜ್ಞಾನಿಗಳ ಪ್ರಯತ್ನಕ್ಕೆ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು. ಜೈಡುಸ್ ಬಯೋಟೆಕ್ ಪಾರ್ಕ್​ಗೂ ಭೇಟಿ ನೀಡಿದ ಪ್ರಧಾನಿ, ‘ಲಸಿಕೆ ತಯಾರಿಕೆಯಲ್ಲಿ ಸರ್ಕಾರ ನಿಮ್ಮೊಂದಿಗಿದೆ’ ಎಂದು ಭರವಸೆ ನೀಡಿದರು.

    ಹೈದರಾಬಾದ್

    ಮಧ್ಯಾಹ್ನದ ವೇಳೆಗೆ ಹೈದರಾಬಾದ್​ಗೆ ತೆರಳಿದ ಪ್ರಧಾನಿ, ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಮೊದಲ ದೇಶೀಯ ಲಸಿಕೆ ಕೋವ್ಯಾಕ್ಸಿನ್​ನ ಪ್ರಗತಿ ಪರಿಶೀಲಿಸಿ ದರು. ಕೋವ್ಯಾಕ್ಸಿನ್ ಲಸಿಕೆಯ ಪ್ರಯೋಗಗಳಲ್ಲಿ ಈವರೆಗೆ ದೊರೆತಿರುವ ಯಶಸ್ಸನ್ನು ಪ್ರಶಂಸಿಸಿದರು. ಭಾರತ್ ಬಯೋಟೆಕ್​ನ ಸಂಶೋಧನಾಕಾರು, ಪ್ರಮೋಟರ್​ಗಳು ಹಾಗೂ ಎಕ್ಸಿಕ್ಯೂಟಿವ್​ಗಳ ಜತೆ ಸಭೆ ನಡೆಸಿ ಲಸಿಕೆ ಲಭ್ಯತೆಯ ಸಮಯ, ಫಲಿತಾಂಶ ಸೇರಿ ಪ್ರಮುಖ ವಿಷಯಗಳ ಕುರಿತು ರ್ಚಚಿಸಿದರು.

    ಪುಣೆ

    ವಿಶ್ವದ ಅತಿ ದೊಡ್ಡ ಲಸಿಕೆ ಉತ್ಪಾದಕ ಸಂಸ್ಥೆ ಪುಣೆಯ ಸೆರಂ: ಇನ್​ಸ್ಟಿಟ್ಯೂಟ್​ಗೆ ಸಂಜೆ 4.30ರ ವೇಳೆಗೆ ಭೇಟಿ ನೀಡಿದ ಮೋದಿ, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಹಾಗೂ ಉತ್ಪಾದನಾ ಕಾರ್ಯಗಳನ್ನು ಪರಿಶೀಲಿಸಿ ದರು. ಸಂಶೋಧಕರ ಜತೆ ಸಭೆ ನಡೆಸಿ ಕ್ಲಿನಿಕಲ್ ಪ್ರಯೋಗಗಳ ಪ್ರಗತಿಯ ಮಾಹಿತಿ ಪಡೆದರು. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆಸ್ಟ್ರಾಜೆನಿಕಾ ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದಿಸಲು ಸೆರಂ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ.

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!

    ಕರೊನಾ ಅಟ್ಟಹಾಸಕ್ಕೆ ನಲುಗಿದ ಜಗತ್ತು; ಭೀಕರವಾಗಿರಲಿದೆ ಎರಡನೇ ಅಲೆ!

    ಪಿಪಿಇ ಕಿಟ್ ಧರಿಸಿದರು: ಅಹಮದಾಬಾದ್​ನ ಜೈಡುಸ್ ಕ್ಯಾಡಿಲಾ ಕೇಂದ್ರದೊಳಗೆ ಪ್ರಧಾನಿ ನರೇಂದ್ರ ಮೋದಿ ಪಿಪಿಇ ಕಿಟ್ ಧರಿಸಿದ್ದರು. ಕೇಂದ್ರದ ಮುಖ್ಯಸ್ಥರು ಲಸಿಕೆ ಅಭಿವೃದ್ಧಿ ಬಗ್ಗೆ ಪ್ರತಿಯೊಂದು ವಿಭಾಗದಲ್ಲಿ ನಡೆಯುತ್ತಿರುವ ಕೆಲಸಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts