More

    ಚಾರ್ಲಿ ಅಲ್ಲ.. ಇದು ಸುಹಾನಿ…

    |ಪಿ.ಎನ್. ಹೇಮಗಿರಿಮಠ ಗುತ್ತಲ

    ಮುಂಗುಸಿ ಹಾವಿನ ಸೆಣಸಾಟ ಸಹಜ. ಆದರೆ, ಇಲ್ಲೊಂದು ಶ್ವಾನ ಹಾವುಗಳೊಂದಿಗೆ ಸೆಣಸಾಡಿ ಕೂಲಿ ಕಾರ್ವಿುಕರನ್ನು, ತೋಟಿಗರನ್ನು ರಕ್ಷಿಸುತ್ತಿರುವ ಅಪರೂಪದ ವಿದ್ಯಮಾನ ಶ್ಲಾಘನೆಗೆ ಪಾತ್ರವಾಗಿದೆ. ಸಮೀಪದ ಅಕ್ಕೂರ ಗ್ರಾಮದ ಎರಡೂವರೆ ವರ್ಷದ ಸುಹಾನಿ (ಶ್ವಾನದ ಹೆಸರು) ಇಲ್ಲಿಯವರೆಗೆ 28 ಹಾವುಗಳೊಂದಿಗೆ ಸೆಣಸಾಡಿ ಎಲ್ಲವನ್ನೂ ಕೊಂದು ಹಾಕಿ ಜನರನ್ನು ರಕ್ಷಣೆ ಮಾಡುತ್ತಿದೆ. ಭಾನುವಾರ ನಾಗರ ಹಾವಿನಿಂದ ಕಚ್ಚಿಸಿಕೊಂಡಿದ್ದ ಸುಹಾನಿ, ಮಂಗಳವಾರ 7 ಮರಿಗಳಿಗೆ ಜನ್ಮ ನೀಡಿದೆ. ಬುಧವಾರ ಮತ್ತೆ ಸೆಣಸಾಟದ ವೇಳೆ ಉರಗನಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದು ಮರುಹುಟ್ಟು ಪಡೆದಿದೆ.

    ಇದೀಗ ಎಲ್ಲೆಡೆ ಚಾರ್ಲಿ 777 ಚಲನಚಿತ್ರದಲ್ಲಿನ ಶ್ವಾನದ ಕನವರಿಕೆಯಲ್ಲಿರುವಾಗಲೇ, ಹಾವೇರಿ ತಾಲೂಕಿನ ಗುತ್ತಲ ಹೋಬಳಿಯ ಅಕ್ಕೂರಿನ ಮಾಜಿ ಶಾಸಕ ದಿ. ಡಾ. ಚಿತ್ತರಂಜನ ಕಲಕೋಟಿ ಅವರ ಪುತ್ರ ದಯಾನಂದ ಕಲಕೋಟಿ ತೋಟದಲ್ಲಿ ಸಾಕಿರುವ ‘ಸುಹಾನಿ’ ಹೆಸರಿನ ಶ್ವಾನ ಹೆಸರು ಮಾಡುತ್ತಿದೆ. ಸುಹಾನಿ, ಇಲ್ಲಿಯವರೆಗೆ 12 ನಾಗರ, 11 ಕೆರೆ ಹಾವು (ಕೆರೆಗೊಡ್ಡ/ರ್ಯಾಕ್​ಸ್ನೇಕ್) ಹಾಗೂ 5 ಕಂದಲಿಕೆ-ಕೊಳಕ ಮಂಡಲ ಎಂದು ಕರೆಯುವ ವೈಪರ್ ಹಾವನ್ನು ಕೊಂದು ತೋಟದ ರಕ್ಷಣೆಗೆ ನಿಂತಿದೆ. 28 ಬಾರಿ ಸೆಣಸಾಟದಲ್ಲಿ 2 ಬಾರಿ ನಾಗರ ಹಾವಿನೊಂದಿಗೆ ಕಚ್ಚಿಸಿಕೊಂಡು ಬದುಕುಳಿದಿದೆ.

    ಸುಹಾನಿ ನಮ್ಮ ತೋಟ ಹಾಗೂ ಹಾವುಗಳಿಂದ ನಮ್ಮನ್ನು ಸದಾ ರಕ್ಷಣೆ ಮಾಡುತ್ತಿರುವ ಪ್ರೀತಿಯ ಶ್ವಾನ. ಸರ್ಕಾರದವರು ಮೊಬೈಲ್ ಪಶು ಚಿಕಿತ್ಸಾ ವಾಹನ ಇದೆ ಎನ್ನುತ್ತಾರೆ. ಆದರೆ, ಅದು ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸರ್ಕಾರ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ.

    | ದಯಾನಂದ ಕಲಕೋಟಿ ಕೃಷಿಕ, ಅಕ್ಕೂರ

    ಕ್ರಿಕೆಟ್ ಪ್ರಿಯರಿಗೆ ಬಂಪರ್ ಆಫರ್​ ನೀಡಿದ ‘ನಮ್ಮ ಮೆಟ್ರೋ’; ಆದ್ರೆ ಈ ನಿಯಮ ಕಡ್ಡಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts