ತೆಲಂಗಾಣದಲ್ಲಿ ಕಾಂಗ್ರೆಸ್​ ಸರ್ಕಾರ ನೋಡುವುದೇ ನನ್ನ ಕನಸು: ಸೋನಿಯಾ ಗಾಂಧಿ

Sonia Gandhi
Published on

ಹೈದರಾಬಾದ್​: ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡಿರುವ​ ಪಕ್ಷದ ಸರ್ಕಾರವನ್ನು ತೆಲಂಗಾಣದಲ್ಲಿ ನೋಡುವುದು ತಮ್ಮ ಕನಸು ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಹೈದರಾಬಾದ್​ನ ತುಕ್ಕುಗುಡ್ಡದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸೋನಿಯಾ ನಾವು ಈಗಾಗಲೇ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ನಾವು ಮಾತುಕೊಟ್ಟಂತೆ ಪ್ರತಿಯೊಂದನ್ನು ಈಡೇರಿಸಲಿದ್ದೇವೆ. ಮುಂಬರುವ ವಿಧಾನಸಭೆ ಚುನಾವನೆಯಲ್ಲಿ ಜನರು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.

Sonia Gandhi

ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿತಿಂಗಳು 2,500 ರೂಪಾಯಿ ಹಣವನ್ನು ನೀಡಲಾಗುವುದು. ರಾಜ್ಯಾದ್ಯಂತರ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ, ಪ್ರತಿ ಸಿಲಿಂಡರ್​ಅನ್ನು 500ರೂಪಾಯಿಗೆ ನೀಡಲಾಗುವುದು. ದಯವಿಟ್ಟು ನೀವೆಲ್ಲರೂ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಬೇಕು ಎಂದಿದ್ದಾರೆ.

ತಲೆಂಗಾಣ ರಾಜ್ಯ ಉದಯವಾದ ಸಂದರ್ಭದಲ್ಲಿ ನಾನು ಮತ್ತು ಪಕ್ಷದ ಸಹೋದ್ಯೋಗಿಗಳು ಭಾಗಿಯಾಗಿದ್ದೆವು. ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಕರ್ತವ್ಯವಾಗಿದೆ. ಸಮಾಜದ ಎಲ್ಲಾ ವರಗದ ಜನರಿಗಾಗಿ ದುಡಿದಿರುವ ಕಾಂಗ್ರೆಸ್​ ಪಕ್ಷದ ಸರ್ಕಾರವನ್ನು ತೆಲಂಗಾಣದಲ್ಲಿ ನೋಡುವುದೆ ನನ್ನ ಗುರಿ ಎಂದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net