More

    ಸಮುದ್ರದ ಮಧ್ಯದಲ್ಲಿಯೇ ಎರಡು ಭಾಗವಾದ ದೋಣಿ, 60 ಮಂದಿ ಮೃತ್ಯು!

    ಇಟಲಿ: ಕ್ಯಾಲಬ್ರಿಯಾ ಪ್ರದೇಶದ ಪೂರ್ವ ಕರಾವಳಿಯಲ್ಲಿ 200 ವಲಸಿಗರು ಪ್ರಯಾಣ ಮಾಡುತ್ತಿದ್ದ ದೋಣಿ ದುರಂತ ಸಂಭವಿಸಿದೆ. ಈ ದುರಂತದಲ್ಲಿ 60 ಮಂದಿ ಮೃತಪಟ್ಟಿದ್ದಾರೆ.

    ಹವಾಮಾನ ವೈಪರೀತ್ಯದಿಂದಾಗಿ ದೋಣಿ ಬಂಡೆಗಳಿಗೆ ಡಿಕ್ಕಿಯಾಗಿದೆ. ಇದರಿಂದ ದೋಣಿ ಸಮುದ್ರದ ಮಧ್ಯದಲ್ಲಿಯೇ ಎರಡು ಭಾಗವಾಗಿದ್ದು, ಜನರು ನೀರಿಗೆ ಬಿದ್ದಿದ್ದಾರೆ. ಈ ಅಪಘಾತದಲ್ಲಿ 28 ಮಂದಿ ಪಾಕಿಸ್ತಾನಿ ನಿವಾಸಿಗಳು ಸೇರಿ 60 ಮಂದಿ ಮೃತಪಟ್ಟಿದ್ದಾರೆ. ಈಗಾಗಲೇ ಹಲವು ಶವಗಳು ಸಮುದ್ರದ ತೀರದಲ್ಲಿ ಸಿಕ್ಕಿವೆ. ಕೆಲವರನ್ನು ರಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

    ‘ಅನಿಯಮಿತ ವಲಸೆ ಮಾರ್ಗಗಳ ವಿರುದ್ಧ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ. ವಲಸಿಗರಿಗೆ ಯುರೋಪ್‌ನಲ್ಲಿ ಉತ್ತಮ ಜೀವನ ಸಿಗುತ್ತಿಲ್ಲ. ಹೀಗಾಗಿ ಬೇರೆಡೆ ಹೋಗುತ್ತಿದ್ದಾರೆ. ಸಮುದ್ರ ಮೂಲಕ ಹಾದು ಹೋಗುವುದನ್ನು ನಿಲ್ಲಿಸಬೇಕು’ ಎಂದು ಇಟಾಲಿಯನ್ ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೋಸಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇದನ್ನೂ ಓದಿ: ಆರ್ಥಿಕ ದುಸ್ಥಿತಿ; ಪಾಕಿಸ್ತಾನದಲ್ಲಿ ಇದೀಗ ಔಷಧಕ್ಕೂ ಹಾಹಾಕಾರ!

    ಮೆಡಿಟರೇನಿಯನ್‌ ಸಮುದ್ರದ ಮಧ್ಯ ಭಾಗದಲ್ಲಿ ದೋಣಿ ಮುಳುಗಡೆಯಾಗುವ ದುರಂತ ನಿರಂತರವಾಗಿ ನಡೆಯುತ್ತಲೇ ಇರುತ್ತದೆ . ಬಡತನ ಹಾಗೂ ಬದುಕಿನ ಸಂಘರ್ಷದಿಂದ ಬೇಸತ್ತ ಆಫ್ರಿಕಾ ಜನರು ಯುರೋಪ್‌ನಲ್ಲಿ ತಮ್ಮ ಜೀವನ ಕಂಡುಕೊಳ್ಳಲು ಇಟಲಿ ಮೂಲಕ ಹಾದು ಹೋಗುತ್ತಾರೆ. ಈ ಜಲಮಾರ್ಗ ವಿಶ್ವದಲ್ಲೇ ಅತ್ಯಂತ ಅಪಾಯಕರ ಎಂದು ಯುರೋಪ್‌ ಜನ ಹೇಳುತ್ತಿದ್ದಾರೆ.

    VIDEO| ಶಿಕ್ಷಕಿಗೆ ಹಿಗ್ಗಾಮುಗ್ಗಾ ಹೊಡೆದ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts