More

    ಅಂತೂ ಇಂತು… ಅನುದಾನ ಬಂತು..

    ವಿಕ್ರಮ ನಾಡಿಗೇರ ಧಾರವಾಡ

    ನಗರದ ಕೋರ್ಟ್ ವೃತ್ತದ ಬಳಿ ನಿರ್ವಿುಸುತ್ತಿರುವ ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾ ಸಂಕೀರ್ಣ(ಸ್ಪೋರ್ಟ್ಸ್ ಕಾಂಪ್ಲೆಕ್ಸ್)ದ ಕಾಮಗಾರಿಗೆ ಎದುರಾಗಿದ್ದ ವಿಘ್ನಗಳು ಅಂತೂ ದೂರವಾಗಿದೆ. ಆದರೆ, ಕೆಲಸ ಆಮೆಗತಿಯಲ್ಲಿ ಸಾಗಿರುವುದು ನಿರಾಸೆ ಮೂಡಿಸಿದೆ.

    ಈಜುಗೊಳದ ಸಮರ್ಪಕ ನಿರ್ವಹಣೆ ಇಲ್ಲದೇ ತೊಂದರೆ ಎದುರಾಗಿತ್ತು. ಹೀಗಾಗಿ ಹೊಸ ಕ್ರೀಡಾ ಸಂಕೀರ್ಣ ನಿರ್ವಣಕ್ಕೆ ಯೋಜನೆ ರೂಪಿಸಲಾಗಿತ್ತು. 2018ರಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಶಿಲಾನ್ಯಾಸ ನೆರವೇರಿಸಿದ್ದರು. ಕಾಮಗಾರಿ ಆರಂಭವಾದ ಕೆಲ ತಿಂಗಳಲ್ಲೇ ಕರೊನಾದಿಂದ ಸ್ಥಗಿತವಾಗಿತ್ತು.

    ದೆಹಲಿಯ ಐಐಟಿ ಹಾಗೂ ಪ್ರತಿಷ್ಠಿತ ಸ್ಕೂಲ್ ಆಫ್ ಪ್ಲಾನಿಂಗ್ ಆಂಡ್ ಆರ್ಕಿಟೆಕ್ಟ್​ನ ತಾಂತ್ರಿಕ ಸಲಹೆ ಈ ಯೋಜನೆಗಿದೆ. ಒಎನ್​ಜಿಸಿ ಕಂಪನಿಯ ಕಾರ್ಪೆರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ (ಸಿಎಸ್​ಆರ್) ಮೂಲಕ ಒಟ್ಟು 14 ಕೋಟಿ ರೂ. ವೆಚ್ಚದಲ್ಲಿ ಸಂಕೀರ್ಣ ನಿರ್ವಿುಸಲು ಯೋಜನೆ ರೂಪಿಸಲಾಗಿತ್ತು. ಬಳಿಕ ನೀಲಿ ನಕ್ಷೆಯಲ್ಲಿ ಕೆಲ ಬದಲಾವಣೆ ಮಾಡಿದ ಪರಿಣಾಮ ಅಂದಾಜು ವೆಚ್ಚದಲ್ಲಿ ಭಾರಿ ಏರಿಕೆಯಾಗಿ ಅನುದಾನ ಕೊರತೆ ಕಾಡಿತ್ತು. ಹೀಗಾಗಿ ಕೆಲಸ ನನೆಗುದಿಗೆ ಬಿದ್ದಿತ್ತು. ಇದೀಗ ಎಲ್ಲ ಅಡೆತಡೆ ನಿವಾರಣೆಯಾಗಿದೆ. ಕಾಮಗಾರಿ ಮತ್ತೆ ಆರಂಭವಾಗಿದೆ.

    14 ಕೋಟಿ ರೂ. ನೀಡಲು ಒಎನ್​ಜಿಸಿ ಒಪ್ಪಿ ಮೊದಲ ಹಂತದ 5 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ, ಪರಿಷ್ಕೃತ ಅಂದಾಜುಪತ್ರದ ಪ್ರಕಾರ ವೆಚ್ಚ 33 ಕೋಟಿ ರೂ.ಗೆ ಏರಿಕೆಯಾಗಿತ್ತು. ಹೆಚ್ಚುವರಿ 19 ಕೋಟಿ ರೂ.ಗಳನ್ನು ಹೊಂದಿಸುವುದು ಸವಾಲಾಗಿತ್ತು. ಹೀಗಾಗಿ ಬೇರೆ ಬೇರೆ ಕಂಪನಿಗಳೊಂದಿಗೆ ಪತ್ರ ವ್ಯವಹಾರ ನಡೆಸುವಂತೆ ಸಚಿವರು, ಶಾಸಕರು ಸೂಚಿಸಿದ್ದರು. ಅದರನ್ವಯ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದರಿಂದ, ಕೆಲವು ಕಂಪನಿಗಳು ನೆರವು ನೀಡಲು ಒಪ್ಪಿಗೆ ಸೂಚಿಸಿವೆ.

    ಅಂತಾರಾಷ್ಟ್ರೀಯ ಕ್ರೀಡಾ ಸಂಕೀರ್ಣವು ಯಾವೆಲ್ಲ ವೈಶಿಷ್ಟ್ಯೆ ಹೊಂದಿರಬೇಕು ಎಂಬ ಬಗ್ಗೆ ಕ್ರೀಡಾಪಟುಗಳು, ತರಬೇತುದಾರರು, ತಜ್ಞರ ಜತೆ ಚರ್ಚೆ ನಡೆಸದೇ ನೀಲಿನಕ್ಷೆ ಸಿದ್ಧಪಡಿಸಲಾಗಿತ್ತು. ಹೆಚ್ಚುವರಿ ಮತ್ತು ಆಧುನಿಕ ಸೌಲಭ್ಯಗಳ ಬಗ್ಗೆ ಕೆಲವರು ಗಮನ ಸೆಳೆದ ನಂತರ ಜನಪ್ರತಿನಿಧಿಗಳ ಸೂಚನೆ ಮೇರೆಗೆ ನೀಲಿನಕ್ಷೆಯನ್ನು ಪರಿಷ್ಕರಿಸಿದ್ದು, ಅದರಂತೆಯೇ ಕಾಮಗಾರಿ ಆರಂಭವಾಗಿದೆ. ಆದರೂ, ಬೃಹತ್ ಸಂಕೀರ್ಣ ನಿರ್ಮಾಣ ಪೂರ್ಣಗೊಂಡು, ವಿವಿಧ ಸಾಧನ ಸಲಕರಣೆಗಳ ಅಳವಡಿಕೆ ಮುಗಿಯಲು 2 ವರ್ಷ ಬೇಕಾಗುವ ಸಾಧ್ಯತೆ ಇದೆ.

    ಕ್ರೀಡಾ ಸಂಕೀರ್ಣದಲ್ಲಿನ ಸೌಲಭ್ಯ: ಹೆಸರಿಗೆ ತಕ್ಕಂತೆ ಬಹು ಉಪಯೊಗಿ ಕ್ರೀಡಾ ಸಂಕೀರ್ಣ ಇದಾಗಿದೆ. ನೆಲ ಅಂತಸ್ತು ಮತ್ತು 3 ಮಹಡಿ(ಜಿ+3) ನಿರ್ವಣವಾಗಲಿದೆ. ನೆಲಮಹಡಿಯಲ್ಲಿ ಕಾರ್, ಬೈಕ್​ಗಳಿಗೆ ಪ್ರತ್ಯೇಕ ನಿಲುಗಡೆ ಸೌಲಭ್ಯ ಕಲ್ಪಿಸಲಾಗುತ್ತದೆ. ಉಳಿದ ಕಡೆಗಳಲ್ಲಿ ಕ್ಯಾಂಟೀನ್, ಕ್ರೀಡಾ ಸಾಮಗ್ರಿಗಳ ಮಳಿಗೆಗಳು, ವೀಕ್ಷಕರ ಗ್ಯಾಲರಿ, ಮಕ್ಕಳು ಹಾಗೂ ವಯಸ್ಕರಿಗೆ ಪ್ರತ್ಯೇಕ ಈಜುಗೊಳ, ಕಬಡ್ಡಿ ಅಂಕಣ, ಬ್ಯಾಡ್ಮಿಂಟನ್, ಸ್ಕಾ್ವಷ್, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್ ತರಬೇತುದಾರರು ಹಾಗೂ ವೈದ್ಯರ ಕೊಠಡಿ ಸೇರಿ ಹಲವು ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

    ಕ್ರೀಡಾ ಸಂಕೀರ್ಣ ಕಾಮಗಾರಿಗೆ ಎದುರಾಗಿದ್ದ ಅನುದಾನ ಕೊರತೆ ನೀಗಿಸಲು ವಿವಿಧ ಕಂಪನಿಗಳನ್ನು ಸಂರ್ಪಸಲಾಗಿತ್ತು. ಕೆಲವು ಕಂಪನಿಗಳು ಅನುದಾನ ನೀಡಲು ಒಪ್ಪಿವೆ. ಕಾಮಗಾರಿಯನ್ನು ಚುರುಕುಗೊಳಿಸಲು ಸೂಚಿಸಲಾಗಿದೆ. 2 ವರ್ಷದಲ್ಲಿ ಸಂಪೂರ್ಣ ಸಂಕೀರ್ಣ ಸಿದ್ಧವಾಗಲಿದ್ದು, ಧಾರವಾಡದ ಹೆಮ್ಮೆಗೆ ಕಾರಣವಾಗಲಿದೆ.

    | ಅರವಿಂದ ಬೆಲ್ಲದ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts