More

    ಕೋವಿಡ್​ ಸೋಂಕು ತಗುಲಿತೆಂದು ಗರ್ಭಿಣಿ ಸೇರಿ ಕುಟುಂಬದ ಮೇಲೆ ಹಲ್ಲೆ

    ಕೋಲ್ಕತ: ಇಲ್ಲಿನ ದಕ್ಷಿಣ ಭಾಗದ ಪಟೌಲಿ ಬಡಾವಣೆಯಲ್ಲಿ ಕೋವಿಡ್​-19 ಸೋಂಕು ತಗುಲಿದೆ ಎಂಬ ಕಾರಣಕ್ಕಾಗಿ ಗರ್ಭಿಣಿ ಹಾಗೂ ಮಗು ಸೇರಿ ಕುಟುಂಬದ ಮೂವರ ಮೇಲೆ ನೆರೆಹೊರೆಯವರು ಹಲ್ಲೆ ಮಾಡಿದ್ದಾರೆ.

    ಐಟಿ ಉದ್ಯೋಗಿಯಾಗಿರುವ ಆ ವ್ಯಕ್ತಿ, ಆತನ ಪತ್ನಿ ಮತ್ತು ಮೂರು ವರ್ಷದ ಮಗು ಹಲ್ಲೆಗೆ ಒಳಗಾದವರು. ಈತನ ಪತ್ನಿ ಮೂರು ತಿಂಗಳು ಗರ್ಭಿಣಿಯಾಗಿದ್ದಾಳೆ. ಕೋವಿಡ್​-19 ಕ್ವಾರಂಟೈನ್​ ನಿಯಮದನ್ವಯ ಮನೆಯಲ್ಲೇ ಕ್ವಾರಂಟೈನ್​ಗೆ ಒಳಗಾಗಿದ್ದರು. ಆದರೂ ಇವರ ಮನೆಯೊಳಗೆ ನುಗ್ಗಿದ ನೆರೆಹೊರೆಯವರು ಕ್ವಾರಂಟೈನ್​ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದಾರೆ ಎಂದು ಆರೋಪಿಸಿ ಇವರ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.

    ಮನೆಯೊಳಗೆ ನುಗ್ಗಿದ ನೆರೆಹೊರೆಯವರು ಈ ಪ್ರದೇಶನವನ್ನು ಬಿಟ್ಟುಹೋಗುವಂತೆ ಹೇಳಿ ನನ್ನ ಪತ್ನಿಯನ್ನು ನೆಲಕ್ಕೆ ಕೆಡವಿ ಹೊಡೆದರು. ಅಲ್ಲದೆ ನನ್ನ ಮೇಲೆ ಶೂಗಳಿಂದ ಹಲ್ಲೆ ಮಾಡಿದರು ಎಂದು ಐಟಿ ಉದ್ಯೋಗಿ ಇಮೇಲ್​ ಮೂಲಕ ಪಟೌಲಿ ಪೊಲೀಸ್​ ಠಾಣೆಯಲ್ಲಿ ದಾಖಲಿಸಿರುವ ದೂರಿನಲ್ಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ಹಾಡುಹಗಲೇ ನಡೆಯಿತು ರಾಬರಿ: ಮಾಸ್ಕ್ ಧರಿಸಿದವರು 3 ಲಕ್ಷಕ್ಕೂ ಅಧಿಕ ಮೌಲ್ಯದ ನಗ,ನಗದು ದೋಚಿದ್ರು!

    ಆದರೆ, ಐಟಿ ಉದ್ಯೋಗಿಯ ಹೇಳಿಕೆಯನ್ನು ಅಲ್ಲಗಳೆದಿರುವ ನೆರೆಹೊರೆಯವರು, ಈ ಕುಟುಂಬದವರು ಕ್ವಾರಂಟೈನ್​ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದರು. ಹಾಗೆ ಮಾಡದಂತೆ ಸಾಕಷ್ಟು ಬಾರಿ ತಿಳಿಸಿದೆವು. ಆದರೂ ಅವರು ತಮ್ಮ ತಪ್ಪನ್ನು ಸುಧಾರಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

    ಐಟಿ ಉದ್ಯೋಗಿ ಕಳೆದ ವಾರ ಕೋವಿಡ್​-19 ಪರೀಕ್ಷೆಗೆ ಒಳಪಟ್ಟಿದ್ದಾರೆ. ಇವರ ಪರೀಕ್ಷಾ ವರದಿ ಇನ್ನೂ ಬಂದಿಲ್ಲ ಎನ್ನಲಾಗಿದೆ. ಇವರ ಪತ್ನಿ ಮತ್ತು ಮಗುವನ್ನು ಕೂಡ ಕೋವಿಡ್​-19 ಪರೀಕ್ಷೆಗೆ ಒಳಪಡಿಸಿದ್ದು, ಅವರಿಬ್ಬರ ವರದಿ ನೆಗೆಟಿವ್​ ಬಂದಿರುವುದಾಗಿ ಹೇಳಲಾಗಿದೆ.

    ರಾಜಕೀಯರಂಗಕ್ಕೆ ಬಂದು 24 ಗಂಟೆಯೊಳಗೆ ಪಲ್ಟಿ ಹೊಡೆದ ಫುಟ್​ಬಾಲ್​ನ ಮಾಜಿ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts