More

    ಆಮಿಷಕ್ಕೊಳಗಾಗದೆ ಮತದಾನ ಮಾಡುವುದು ಅಗತ್ಯ

    ಹೊಳೆನರಸೀಪುರ: ಯಾವುದೇ ರೀತಿಯ ಆಮಿಷಕ್ಕೊಳಗಾಗಿ ಮತದಾನ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶವಾಗುತ್ತದೆ. ಆದ್ದರಿಂದ ಉತ್ತಮರಿಗೆ ಮತದಾನ ಮಾಡಿ ಪ್ರಜಾಪ್ರಭುತ್ವದ ಪಾವಿತ್ರೃತೆ ಕಾಪಾಡಿಕೊಳ್ಳುವ ಕೆಲಸವಾಗಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ವಿ.ಎಲ್. ಅಮರ್ ಸಲಹೆ ನೀಡಿದರು.

    ಇಲ್ಲಿನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ತಾಲೂಕು ಆಡಳಿತ ಹಾಗೂ ಕಾನೂನು ಸೇವಾ ಸಮಿತಿ ವತಿಯಿಂದ ಆಯೋಜಿಸಿದ್ದ 14 ನೇ ಮತದಾರರ ಜಾಗೃತಿ ದಿನಾಚರಣೆಯಲ್ಲಿ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿದರು.

    ಒಳ್ಳೆಯವರು ಸುಮ್ಮನಿದ್ದರೆ ಕೆಟ್ಟವರು ವಿಜೃಂಭಿಸುತ್ತಾರೆ. ಆದ್ದರಿಂದ ಒಳ್ಳೆಯವರು ಕೆಟ್ಟದನ್ನು ಖಂಡಿಸಿ ತಪ್ಪದೆ ಮತದಾನ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಿಸಬೇಕು. ಯೋಗ್ಯರು ಚುನಾವಣೆಗೆ ನಿಲ್ಲದಿದ್ದರೆ ಅಯೋಗ್ಯರು ಆರಿಸಿ ಬರುತ್ತಾರೆ. ಇಂದಿನ ದಿನದಲ್ಲಿ ಚುನಾವಣೆ ವ್ಯಾಪಾರವಾಗಿದೆ. ಚುನಾವಣೆಗೆ ಹಣತೊಡಗಿಸಿ ಗೆದ್ದ ನಂತರ ಲಾಭಮಾಡಿಕೊಳ್ಳುತ್ತಾರೆ. ಆದ್ದರಿಂದ ಮತದಾನ ಪವಿತ್ರವಾಗಿರಲಿ ಎಂದರು.

    ಕಿರಿಯ ಶ್ರೇಣಿ ನ್ಯಾಯಾಧೀಶರಾದ ಎಸ್.ಸಿದ್ದರಾಮ ಮಾತನಾಡಿ, ಹಿಂದೆ ನಿರಂಕುಶ ಪ್ರಭುತ್ವ ಇತ್ತು. ಇಂದು ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅರ್ಹರನ್ನು ಆರಿಸಬೇಕಿದೆ ಎಂದರು.

    ಮತದಾನದ ಮಹತ್ವ, ಮತದಾನ ಮಾಡುವ ವಿಧಾನಗಳ ಬಗ್ಗೆ ಚುನಾವಣೆಯ ಮಾಸ್ಟರ್ ಟ್ರೈನರ್ ಉಪನ್ಯಾಸಕ ಗಿರೀಶ್ ವಿವರಿಸಿದರು. ತಹಸೀಲ್ದಾರ್ ಕೆ.ಕೆ.ಕೃಷ್ಣಮೂರ್ತಿ, ತಾಪಂ ಇಒ ಗೋಪಾಲ್, ನ್ಯಾಯಾಧೀಶರಾದ ಆರ್.ಜೆ.ಎಸ್.ಪ್ರವೀಣ್, ಜಿಲ್ಲಾ ಪಂಚಾಯಿತಿ ಎಇಇ ಪ್ರಶಾಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಸತೀಶ್, ಸಮಾಜ ಕಲ್ಯಾಣ ಇಲಾಖೆಯ ಕೌಸರ್ ಅಹಮದ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್‌ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts