More

    ಶತ್ರುಗಳಿದ್ದರೆ ಒಳ್ಳೆಯದೇ…; ಬಿ.ಕೆ. ಹರಿಪ್ರಸಾದ್

    ಬೆಂಗಳೂರು: ಚಿತ್ರದುರ್ಗದಲ್ಲಿ ನಡೆಯುವ ಅಹಿಂದ ಸಮಾವೇಶಕ್ಕೆ ಸಿದ್ಧತೆ ನಡೆಯುತ್ತಿರುವ ವಿಚಾರವಾಗಿ ಕಾಂಗ್ರೆಸ್ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಪ್ರತಿಕ್ರಿಯೆ ನೀಡಿದ್ದು, ನಾನು ಅಂತಹದಕ್ಕೆಲ್ಲ ಹೋಗೋದಿಲ್ಲ. ಜನವರಿಯಲ್ಲಿ ಅಖಿಲ ಭಾರತಮಟ್ಟದಲ್ಲಿ ಸಮಾವೇಶ ನಡೆಯುತ್ತದೆ, ಗುರುನಾರಾಯಣ ಪೀಠದಿಂದ ಅದನ್ನು ಮಾಡುತ್ತಿದ್ದು, ನನ್ನ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.
    ಕೆಲವು ವಿಚಾರದಲ್ಲಿ ನಾನು ಸೈಲೆಂಟ್ ಆಗಿಲ್ಲ. ಹೇಳಿಕೆಗಳನ್ನ ಕೊಡುವುದು ಏನು ಕಡಿಮೆ ಮಾಡಿಲ್ಲ. ಶತ್ರುಗಳಿದ್ದರೆ ಒಳ್ಳೆಯದೇ ಎಂದು ಸ್ವಪಕ್ಷದವರ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದರು.
    ಲೋಕಸಭೆ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಸಂಸತ್‌ನಲ್ಲಿ ನಡೆದಿರುವ ಘಟನೆ ತಲೆ ತಗ್ಗಿಸುವ ವಿಚಾರ. ಇಷ್ಟು ಸಂಖ್ಯೆಯ ವಿಪಕ್ಷ ಸದಸ್ಯರನ್ನು ಅಮಾನತು ಮಾಡಿರುವುದು ಇದೇ ಮೊದಲು. ಬಿಜೆಪಿಯ ತತ್ವ, ಸಿದ್ಧಾಂತ ಯಾರಿಗೂ ಗೊತ್ತಾಗದಂತೆ ಜಾರಿಗೆ ತರುತ್ತಿದ್ದಾರೆ ಎಂದರು.
    ರೋಡ್‌ನಿಂದ ರಫೆಲ್ವರೆಗೆ ಸಂಸದ ಪ್ರತಾಪ್ ಮಾತನಾಡುವುದಷ್ಟೇ ಅಲ್ಲ. ಈಗ ಪ್ರತಾಪ್ ಸಿಂಹ ಅಪರಾಧಿ ಸ್ಥಾನದಲ್ಲಿದ್ದಾರೆ. ಅವರ ತನಿಖೆ ಆಗಲೇ ಬೇಕು. ದಾಳಿಕೋರರಿಗೆ ಅವಕಾಶ ಕೊಟ್ಟವರನ್ನು ಅಮಾನತು ಮಾಡಬೇಕಿತ್ತು. ಆದರೂ ಅವರನ್ನ ಅಮಾನತು ಮಾಡಿಲ್ಲ ಎಂದ ಅವರು ರಷ್ಯಾದ ಯುದ್ಧ ನಿಲ್ಲಿಸುವುದಾಗಿ ವಿಶ್ವಗುರು ಹೇಳಿಕೊಳ್ಳುತ್ತಾರೆ, ಅದೇ ವಿಶ್ವಗುರು ವಿಶ್ವದ ಮುಂದೆ ಭಾರತದ ಮರ್ಯಾದೆ ಹರಾಜು ಹಾಕುತ್ತಿದ್ದಾರೆಂದು ಟೀಕಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts