More

    ಪರೀಕ್ಷಾ ಭಯ ಬಿಟ್ಟು ಸಿದ್ಧತೆ ನಡೆಸುವುದು ಉತ್ತಮ, ವಿದ್ಯಾರ್ಥಿಗಳಿಗೆ ಸಲಹೆ

    ಧಾರವಾಡ: ವಿದ್ಯಾರ್ಥಿಗಳಿಗೆ ಪರೀಕ್ಷೆ ಅನಿವಾರ್ಯ. ನೂರಾರು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೂ ಕೆಲವರು ಮಾತ್ರ ಉತ್ತಮ ಅಂಕ ಪಡೆಯುತ್ತಾರೆ ಎಂಬುದು ಸತ್ಯ ಸಂಗತಿ. ಈ ಯಶಸ್ಸಿನ ಹಿಂದೆ ಅಡಗಿರುವ ಗುಟ್ಟು ಅರಿಯಬೇಕು. ಹೀಗಾಗಿ ಪರೀಕ್ಷಾ ಸಿದ್ಧತೆ ಹಾಗೂ ಪರೀಕ್ಷೆಗಳನ್ನು ಎದುರಿಸುವ ಮಾಹಿತಿ ನೀಡಲು ಕಾರ್ಯಾಗಾರ ಏರ್ಪಡಿಸಲಾಗಿದೆ ಎಂದು ಜೆಎಸ್​ಎಸ್ ಕಾರ್ಯದರ್ಶಿ ಡಾ. ಅಜಿತಪ್ರಸಾದ ಹೇಳಿದರು.

    ನಗರದ ಜನತಾ ಶಿಕ್ಷಣ ಸಮಿತಿ, ಶಾಲಾ ಇಲಾಖೆ ಉಪನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸುಭೋಧ ಶಿಕ್ಷಣ ಸಮಿತಿ ಆಶ್ರಯದಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜೆಎಸ್​ಎಸ್ ಕಾಲೇಜಿನಲ್ಲಿ ಏರ್ಪಡಿಸಿರುವ ಫಲಿತಾಂಶ ಸುಧಾರಣಾ ಶಿಬಿರಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.

    ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಭವಿಷ್ಯ ನಿರ್ಧರಿಸಬಲ್ಲ ಪರೀಕ್ಷೆ ಎಂಬುದನ್ನು ಮರೆಯಬಾರದು. ಭಯವಿದ್ದಲ್ಲಿ ಪರೀಕ್ಷಾ ಸಿದ್ಧತೆ ಚೆನ್ನಾಗಿ ನಡೆಯುತ್ತವೆ. ಆದರೆ, ಭಯ ಅತಿಯಾದರೂ ಒಳ್ಳೆಯದಲ್ಲ. ಪರೀಕ್ಷಾ ಸಿದ್ಧತೆಗೆ ಮನಸ್ಸಿನ ಏಕಾಗ್ರತೆ ಮುಖ್ಯ. ಪರೀಕ್ಷೆ ಸಿದ್ಧತೆ ಸಾಕಷ್ಟು ಮುಂಚಿತವಾಗಿ ನಡೆದಿರಬೇಕು. ಪರೀಕ್ಷಾ ಸಮಯದಲ್ಲಿ ಆರೋಗ್ಯದ ಬಗ್ಗೆ ಗಮನವಿರಲಿ ಎಂದರು.

    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ಪ್ರಾಮಾಣಿಕತೆ ಮುಖ್ಯ. ಪರೀಕ್ಷಾ ತಯಾರಿಯಲ್ಲಿ ಪಾಠಗಳನ್ನು ಬಾಯಿಪಾಠ ಮಾಡುವುದು ಅಪಾಯಕಾರಿ. ಪರೀಕ್ಷಾ ಸಿದ್ಧತೆಯಲ್ಲಿ ಕೊರತೆ ಇದ್ದಾಗ ಮಾತ್ರ ವಿದ್ಯಾರ್ಥಿ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಅದನ್ನು ಸರಿಪಡಿಸಿಕೊಳ್ಳಬೇಕು ಎಂದರು.

    ಸಂಪನ್ಮೂಲ ವ್ಯಕ್ತಿ ಬ್ರೇನ್​ತಾನ್​ನ ಪ್ರದೀಪ ಆಚಾರ್ಯ ಮಾತನಾಡಿ, ಓದಿದ ವಿಷಯ ನೆನಪಿಟ್ಟುಕೊಳ್ಳುವುದು, ಅತೀ ಕಡಿಮೆ ಸಮಯದಲ್ಲಿ ಪರೀಕ್ಷಾ ಸಿದ್ಧತೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಸಿಂದಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಕೃಷ್ಣ ಸದಲಗಿ, ಮಂಜುನಾಥ ಅಡವೇರ, ವಿನಾಯಕ ಜೋಶಿ, ಮಹಾವೀರ ಉಪಾಧ್ಯೆ, ಕಾಲೇಜು ಉಪನ್ಯಾಸಕರು, 1400 ವಿದ್ಯಾರ್ಥಿಗಳು, ಇತರರು ಇದ್ದರು.

    ಜಯಲಕ್ಷಿ್ಮೕ ಎಚ್. ನಿರೂಪಿಸಿದರು. ಕಲ್ಲಪ್ಪ ಜಾವೂರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts