More

    ವಿಕ್ರಮ್​ ಲ್ಯಾಂಡರ್​, ಪ್ರಗ್ಯಾನ್​ ರೋವರ್ ಚಂದ್ರನಲ್ಲಿ​ ಸ್ಫೋಟವಾಗುತ್ತಾ? ಚಂದ್ರಯಾನ 3ಗೆ ಎದುರಾಯ್ತು ಹೊಸ ಆಪತ್ತು

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಮಿಷನ್​ ಯಶಸ್ವಿಯಾಗಿರುವುದು ಪ್ರತಿಯೊಬ್ಬರಿಗೂ ತಿಳಿದೇ ಇದೆ. ಚಂದ್ರನ ದಕ್ಷಿಣ ಧ್ರವದಲ್ಲಿ ಲ್ಯಾಂಡ್​ ಆದ ಮೊದಲ ದೇಶ ಮತ್ತು ಚಂದ್ರನಲ್ಲಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

    ಚಂದ್ರನ ಒಂದು ದಿನ ಭೂಮಿಯ 14 ದಿನಗಳಿಗೆ ಸಮ. 14 ದಿನಗಳ ಕಾಲ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾರ್ಯಾಚರಣೆ ನಡೆಸಿದ ಪ್ರಗ್ಯಾನ್​ ರೋವರ್​ ಮತ್ತು ಅದನ್ನು ಚಂದ್ರನ ಮೇಲ್ಮೈಗೆ ಇಳಿಸಿದ ವಿಕ್ರಮ್​ ಲ್ಯಾಂಡರ್​ ಸದ್ಯ ವಿಶ್ರಾಂತಿಗೆ ಜಾರಿವೆ. ಆ. 23ರಂದು ಸಂಜೆ 6 ಗಂಟೆಗೆ ಸರಿಯಾಗಿ ವಿಕ್ರಮ್​ ಲ್ಯಾಂಡರ್​ ಚಂದ್ರನ ಮೇಲೆ ಲ್ಯಾಂಡ್​ ಆಯಿತು. ಇದಾದ ಮಾರನೇ ದಿನವೇ ಲ್ಯಾಂಡರ್​ ಒಳಗಿದ್ದ ಪ್ರಗ್ಯಾನ್​ ರೋವರ್​ ಚಂದ್ರನ ಮೇಲ್ಮೈಗೆ ಬಂದು ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಇದೀಗ ಎರಡೂ ಕೂಡ ನಿದ್ರೆಗೆ ಜಾರಿವೆ. ಎರಡನ್ನೂ ಮತ್ತೆ ಆರಂಭಿಸಲು ಇಸ್ರೋ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಆದರೂ ಇಸ್ರೋ ಇನ್ನೂ ಭರವಸೆ ಕಳೆದುಕೊಂಡಿಲ್ಲ.

    ಇದೀಗ ಇಂಡಿಯಾ ಟುಡೆ ಮಾಡಿರುವ ವರದಿಯ ಪ್ರಕಾರ ಚಂದ್ರಯಾನ 3ಗೆ ಹೊಸ ಬೆದರಿಕೆಗಳು ಬಂದಿದೆ. ವಿಕ್ರಮ್​ ಮತ್ತು ಪ್ರಗ್ಯಾನ್​ ಮೇಲೆ ಅಪಾಯಕಾರಿ ಮೈಕ್ರೊಮೀಟರಾಯ್ಡ್ ಪರಿಣಾಮ ಬೀರುವ ಸಾಧ್ಯತೆ. ಇಸ್ರೋದ ಹಿರಿಯ ಅಧಿಕಾರಿಯೊಬ್ಬರು ಇದನ್ನು ವಿವರಿಸಿದ್ದು, ಮೈಕ್ರೊಮೀಟರಾಯ್ಡ್ ಸಣ್ಣ ಕಣಗಳು ನಿರಂತರವಾಗಿ ಚಂದ್ರನ ಮೇಲ್ಮೈ ಮೇಲೆ ದಾಳಿ ಮಾಡಲಿದ್ದು, ವಿಕ್ರಮ್​ ಮತ್ತು ಪ್ರಗ್ಯಾನ್​ಗೆ ಅಪಾಯ ತಂದೊಡ್ಡಲಿವೆ. ಚಂದ್ರನ ವಾತಾವರಣ ಮತ್ತು ಆಮ್ಲಜನಕದ ಕೊರತೆಯು ಸವೆತವನ್ನು ತಡೆಯುತ್ತದೆ, ಈ ಸಣ್ಣ ಕಣಗಳಿಂದ ಸಂಭವನೀಯ ಹಾನಿ ಮತ್ತು ಚಂದ್ರನ ರಾತ್ರಿಯ ಸಮಯದಲ್ಲಿನ ವಿಪರೀತ ಚಳಿಯು ತುಂಬಾ ಕಳವಳಕಾರಿಯಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

    ಹೆಚ್ಚುವರಿಯಾಗಿ ಚಂದ್ರನ ಮೇಲೆ ಯಾವುದೇ ವಾತಾವರಣ ಇಲ್ಲ. ಹೀಗಾಗಿ ಚಂದ್ರನ ಮೇಲ್ಮೈ ಮೇಲೆ ಅನೇಕ ಅಗ್ನಿಶಿಲೆಗಳು ಬೀಳುತ್ತವೆ. ಅಲ್ಲದೆ, ನೌಕೆಯ ಮೇಲೆ ನಿರಂತರ ಸೂರ್ಯನ ವಿಕಿರಣಗಳ ಬೀಳುವುದರಿಂದ ಲ್ಯಾಂಡರ್​ ಮತ್ತು ರೋವರ್​ ಸ್ಫೋಟ ಸಂಭವಿಸುವ ಸಾದ್ಯತೆಯೂ ಇದೆ.

    ಈ ಬೆದರಿಕೆಗಳ ಹೊರತಾಗಿಯೂ ಇಸ್ರೋ ವಿಜ್ಞಾನಿಗಳು ಮಿಷನ್‌ನ ಕಾರ್ಯಕ್ಷಮತೆಯಿಂದ ಸಂತೋಷಪಟ್ಟಿದ್ದಾರೆ. ಚಂದ್ರಯಾನ-3 ರ ಉದ್ದೇಶಗಳು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವುದಾಗಿತ್ತು. ಚಂದ್ರನಲ್ಲಿ ನೀರಿನ ಕಣಗಳಿರುವುದನ್ನು ಪ್ರಗ್ಯಾನ್​ ರೋವರ್​ ಪತ್ತೆಹಚ್ಚಿದೆ. ಅಲ್ಲದೆ, ಸಲ್ಫರ್​ ಇರುವುದನ್ನು ಕಂಡುಹಿಡಿದಿದೆ.

    ಇನ್ನೂ ಮಿಷನ್‌ನ ಭೂಕಂಪನ ಚಟುವಟಿಕೆಯ ಮಾಪನಗಳು ಮತ್ತು ಸಲ್ಫರ್ ಅನ್ವೇಷಣೆಯು ಚಂದ್ರನ ಭೂವೈಜ್ಞಾನಿಕ ಪ್ರಕ್ರಿಯೆಗಳ ಬಗ್ಗೆ ಅಮೂಲ್ಯವಾದ ಒಳನೋಟಗಳನ್ನು ನೀಡಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್‌ನ ಹಾಪ್ ಪ್ರಯೋಗವು ನಡೆದಿದೆ. ಅಂದರೆ ಮತ್ತೆ ಮೇಲಕ್ಕೆ ಜಿಗಿದು, ಲ್ಯಾಂಡರ್​ ಸುರಕ್ಷಿತವಾಗಿ ಲ್ಯಾಂಡ್​ ಆಯಿತು. ಚಂದ್ರನ ಮಾದರಿಗಳನ್ನು ಹಿಂದಿರುಗಿಸುವ ಭವಿಷ್ಯದ ಕಾರ್ಯಾಚರಣೆಗಳ ಸಾಮರ್ಥ್ಯವನ್ನು ಇದು ಪ್ರದರ್ಶಿಸಿತು. ಚಂದ್ರಯಾನ-3ರ ದತ್ತಾಂಶ ಸಂಗ್ರಹವು ಚಂದ್ರನ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಿರುವುದಲ್ಲದೆ, ಮುಂಬರುವ ದಿನಗಳಲ್ಲಿ ಚಂದ್ರನ ಮತ್ತು ಅಂತರಗ್ರಹ ಯಾತ್ರೆಗಳಿಗೆ ದಾರಿ ಮಾಡಿಕೊಟ್ಟಿದೆ. (ಏಜೆನ್ಸೀಸ್​)

    ಉಚಿತ ಆಪರೇಷನ್​ ಮಾಡಿ ಮಂಡಿ ನೋವಿಂದ ಬಳಲುತ್ತಿದ್ದ ಕ್ರೀಡಾಪಟು ಬಾಳಿಗೆ ಬೆಳಕಾದ ಕುಣಿಗಲ್​ ಶಾಸಕ!

    ಚೆಂದದ ನರ್ಸ್‌ಗಳು ನಂಗೆ ಅಜ್ಜಾ ಎನ್ನುವುದು ತ್ರಾಸ್​ ಆಗೇತಿ ಎಂದ ಕಾಂಗ್ರೆಸ್​ ಶಾಸಕ ರಾಜು ಕಾಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts