More

    ಕದನ ವಿರಾಮ ಅಂತ್ಯಗೊಂಡ ಬೆನ್ನಲ್ಲೇ ಗಾಜಾ ಪಟ್ಟಿಯಲ್ಲಿ ದಾಳಿ ಪುನರಾರಂಭಿಸಿದ ಇಸ್ರೇಲ್​​​​​ ಪಡೆ

    ಇಸ್ರೇಲ್​​​: ಇಸ್ರೇಲ್​​​ ಮತ್ತು ಹಮಾಸ್ ನಡುವಿನ ತಾತ್ಕಾಲಿಕ ಕದನ ವಿರಾಮ ಶುಕ್ರವಾರ ಬೆಳಗ್ಗೆ ಮುಕ್ತಾಯಗೊಂಡ ನಂತರ ಇಸ್ರೇಲ್ ಗಾಜಾದಲ್ಲಿ ತನ್ನ ನೆಲದ ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಕದನ ವಿರಾಮ ಅಂತ್ಯಗೊಳ್ಳುವ ಕೆಲವೇ ಗಂಟೆಗಳ ಮೊದಲು, ಗಾಜಾದಿಂದ ಹಾರಿಸಲಾದ ರಾಕೆಟ್ ಅನ್ನು ತಡೆದಿರುವುದಾಗಿ ಇಸ್ರೇಲ್ ಹೇಳಿದೆ. ಆದರೆ ಹಮಾಸ್ ಸಂಯೋಜಿತ ಮಾಧ್ಯಮವು ಗಾಜಾದ ಉತ್ತರ ಭಾಗಗಳಲ್ಲಿ ಸ್ಫೋಟಗಳು ಮತ್ತು ಗುಂಡಿನ ದಾಳಿಯ ಬಗ್ಗೆ ವರದಿ ಮಾಡಿವೆ.

    ನವೆಂಬರ್ 24 ರಂದು ಪ್ರಾರಂಭವಾದ ಏಳು ದಿನಗಳ ಕದನ ವಿರಾಮವನ್ನು ಇದುವರೆಗೆ ಎರಡು ಬಾರಿ ವಿಸ್ತರಿಸಲಾಯಿತು. ಈ ಸಂದರ್ಭದಲ್ಲಿ ಗಾಜಾದಲ್ಲಿ 105 ಒತ್ತೆಯಾಳುಗಳನ್ನು ಮತ್ತು ಇಸ್ರೇಲಿ ಜೈಲುಗಳಲ್ಲಿ ಇರಿಸಲಾಗಿರುವ 240 ಪ್ಯಾಲೇಸ್ಟಿನಿಯನ್ ಕೈದಿಗಳನ್ನು ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಲಾಯಿತು. ಜತೆಗೆ ಗಾಜಾಕ್ಕೆ ಮಾನವೀಯ ನೆರವಿಗೆ ಸಹ ಅವಕಾಶ ಕಲ್ಪಿಸಲಾಯಿತು.

    ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ, ಕತಾರ್ ಮತ್ತು ಈಜಿಪ್ಟ್ ಕದನ ವಿರಾಮವನ್ನು ವಿಸ್ತರಿಸಲು ತೀವ್ರ ಪ್ರಯತ್ನಗಳನ್ನು ಮಾಡುತ್ತಿವೆ. ಇದಕ್ಕೂ ಮುನ್ನ ಗುರುವಾರ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಸಲಹೆಗಾರ ಮಾರ್ಕ್ ರೆಗೆವ್ ಅವರು “ನಾವು ಎಲ್ಲಾ ಸಾಧ್ಯತೆಗಳಿಗೂ ಸಿದ್ಧರಿದ್ದೇವೆ …ಇಲ್ಲವಾದಲ್ಲಿ ನಾವು ಯುದ್ಧಕ್ಕೆ ಹಿಂತಿರುಗುತ್ತೇವೆ” ಎಂದು ಹೇಳಿದ್ದರು.

    ಇಸ್ರೇಲ್ ಹಮಾಸ್ ಯುದ್ಧ
    ಪ್ಯಾಲೇಸ್ಟಿನಿಯನ್ ಭಯೋತ್ಪಾದಕ ಗುಂಪು ಹಮಾಸ್ ಅಕ್ಟೋಬರ್ 7, 2023 ರಂದು ದಕ್ಷಿಣ ಇಸ್ರೇಲ್‌ನಲ್ಲಿ ರಾಕೆಟ್ ದಾಳಿಯನ್ನು ಪ್ರಾರಂಭಿಸಿತು. ಆಗ 1,200 ಕ್ಕೂ ಹೆಚ್ಚು ಜನರನ್ನು ಕೊಂದು, 240 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತು. ನಂತರ, ಇಸ್ರೇಲ್ ತೀವ್ರವಾದ ಬಾಂಬ್ ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತು. ಇದು 15,000 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು.

    ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ: ಮಕ್ಕಳ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವಂತಿಲ್ಲ, ಘಟನೆಗಳು ಮರುಕಳಿಸದಂತೆ ನಿರ್ದಾಕ್ಷಿಣ್ಯ ಕ್ರಮ: ಸಚಿವ ಪರಮೇಶ್ವರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts