More

    ‘ಪಾಕಿಸ್ತಾನ್ ಆರ್ಮಿ ಎಪಿಸೆಂಟರ್ ಆಫ್ ಇಂಟರ್​ನ್ಯಾ​ಷನಲ್​ ಟೆರರಿಸಂ’: ಹೀಗೊಂದು ಬ್ಯಾನರ್​ ಜಿನೇವಾದಲ್ಲಿ ರಾರಾಜಿಸುತ್ತಿದೆ!

    ಜಿನೇವಾ: ಸ್ವಿಜರ್​ಲ್ಯಾಂಡ್​ನ ಜಿನೇವಾದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ 43ನೇ ಸಭೆ ನಡೆಯುತ್ತಿದ್ದು, ಅಲ್ಲೇ ಹೊರಗೆ ಕಪ್ಪುಬಣ್ಣದ ಬ್ಯಾನರ್ ಒಂದು ರಾರಾಜಿಸುತ್ತಿದೆ. ಅದರಲ್ಲಿ, ” ಪಾಕ್ ಆರ್ಮಿ ಎಪಿಸೆಂಟರ್ ಆಫ್​ ಇಂಟರ್​ನ್ಯಾಷನಲ್ ಟೆರರಿಸಂ” ಎಂಬ ಸಂದೇಶವೂ ಇದೆ.

    ಬ್ರೋಕನ್ ಚೇರ್ ಸ್ಮಾರಕದ ಸಮೀಪವೇ ಇರುವ ಈ ಬ್ಯಾನರ್​ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದ್ದು, ಪಾಕ್​ಗೆ ತಲೆನೋವಾಗಿ ಪರಿಣಮಿಸಿದೆ. ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಧನಾತ್ಮಕ ಬೆಳವಣಿಗೆ ತಡೆಯುವುದಕ್ಕಾಗಿ ಪಾಕ್​ ನಡೆಸುತ್ತಿರುವ ಎಲ್ಲ ಪ್ರಯತ್ನಗಳೂ ವಿಫಲವಾಗತೊಡಗಿವೆ. ಭಯೋತ್ಪಾದಕ ಸಂಘಟನೆಗಳನ್ನು ಸಾಕಿ, ಸಲಹಿ ಛೂಬಿಡುವ ಪ್ರಯತ್ನವನ್ನು ಕೈಬಿಡಬೇಕು ಎಂದು ಪಾಕಿಸ್ತಾನಕ್ಕೆ ಭಾರತ ಸಲಹೆ ನೀಡಿದ ಮಾರನೇ ದಿನ ಜಿನೇವಾದಲ್ಲಿ ಈ ಬ್ಯಾನರ್ ಕಂಡುಬಂದಿದೆ.

    ಅಷ್ಟೇ ಅಲ್ಲ, ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್​(ಎಫ್​ಎಟಿಎಫ್) ಕಳೆದ ವಾರವಷ್ಟೇ ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿ ಉಳಿಸಿ, ಉಗ್ರರು, ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಎಚ್ಚರಿಸಿದ್ದನ್ನೂ ಇಲ್ಲಿ ಸ್ಮರಿಸಬಹುದು.

    ಮುಂಬೈ ಮತ್ತು ಪಠಾಣ್ ಕೋಟ್​ ದಾಳಿಯ ಸಂಚುಕೋರರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅಮೆರಿಕವೂ ಪಾಕಿಸ್ತಾನಕ್ಕೆ ಒತ್ತಡ ಹೇರಿತ್ತು. ಅಲ್ಲದೆ, ಅಲ್​ಕೈದಾ, ಐಎಸ್​ಐಎಸ್​, ಲಷ್ಕರ್-ಏ-ತೊಯ್ಬಾ, ಜೈಷ್​-ಏ-ಮೊಹಮ್ಮದ್​, ಹಕ್ಕಾನಿ ನೆಟ್​ವರ್ಕ್​, ಹಿಜ್ಬುಲ್​ ಮುಜಾಹಿದ್ದೀನ್​, ತಾರೀಕ್ ಏ ತಾಲೀಬಾನ್ ಮತ್ತು ಇತರೆ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆಯೂ ಸೂಚಿಸಿತ್ತು. ಈಗ ಈ ಎಲ್ಲ ಬೆಳವಣಿಗೆಗಳಿಗೆ ಪೂರಕವಾಗಿ ಈ ಬ್ಯಾನರ್ ಕಾಣಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ತಲೆಬಾಗುವಂತೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts