More

    ಆರ್ಥಿಕ ಬಿಕ್ಕಟ್ಟಿನ ಬಿಸಿ: ಪಾಕಿಸ್ತಾನ ಸೇನೆ ಪರದಾಟ, ಸೈನಿಕರ ಆಹಾರಕ್ಕೂ ಹಣದ ಕೊರತೆ

    ಇಸ್ಲಾಮಾಬಾದ್: ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಪಾಕಿಸ್ತಾನದಲ್ಲಿ ಸೇನೆಗೂ ಅದರ ಬಿಸಿ ತಟ್ಟಿದೆ. ಸೇನೆ ತನ್ನ ಯೋಧರನ್ನು ಸರಿಯಾಗಿ ಪೋಷಿಸಲು ಸಾಧ್ಯವಾಗದೆ ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರಕ್ಕೆ ಮೊರೆಯಿಟ್ಟಿದೆ.

    ಪಾಕ್ ಸೇನೆ ಮತ್ತು ಅರೆಸೇನಾ ಪಡೆಗಳು, ಆಫ್ಘಾನಿಸ್ತಾನ ಗಡಿಯುದ್ದಕ್ಕೂ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಡೆಸುವ ಆಕ್ರಮಣಗಳ ನಡುವೆ ದೇಶದಾದ್ಯಂತ ನಾನಾ ಕಾರ್ಯಾಚರಣೆಗಳಲ್ಲಿ ನಿರತವಾಗಿವೆ. ಈ ಹಿನ್ನೆಲೆಯಲ್ಲಿ, ಸಾರಿಗೆ ಮತ್ತು ಸರಬರಾಜು ವೆಚ್ಚದಲ್ಲಿ ಕಡಿತ ಮಾಡುವ ಸ್ಥಿತಿಯಲ್ಲಿ ಸೇನೆಯಿಲ್ಲ. ಹಾಗೆ ಮಾಡಿದರೆ ಕಾರ್ಯಾಚರಣೆಗಳಿಗೆ ಅಡ್ಡಿಯುಂಟಾಗುವ ಆತಂಕವಿದೆ. ಯೋಧರಿಗೆ ಹೆಚ್ಚು ಆಹಾರ ಮತ್ತು ವಿಶೇಷ ನಿಧಿ ಬೇಕಾಗಿದೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕರು ಹೇಳಿದ್ದಾರೆ.

    ಸೇನೆಗೆ ಆಹಾರ ಸರಬರಾಜು ಮತ್ತು ನಿಧಿಯ ಬೇಡಿಕೆಗಳನ್ನು ರಕ್ಷಣಾ ಸಚಿವಾಲಯ ತುರ್ತು ಆಧಾರದಲ್ಲಿ ಪೂರೈಸುವುದನ್ನು ಖಾತರಿಪಡಿಸುವಂತೆ ಸೇನಾ ಮುಖ್ಯಸ್ಥ ಸೈಯದ್ ಅಸೀಂ ಮುನೀರ್ ಸಂಬಂಧಪಟ್ಟ ಎಲ್ಲ ಸೇನಾ ವಿಭಾಗಗಳಿಗೆ ನಿರ್ದೇಶಿಸಿ ದ್ದಾರೆ. 2022-23ನೇ ಸಾಲಿನ ಪಾಕ್ ಬಜೆಟ್​ನಲ್ಲಿ ಸುಮಾರು 7.5 ಶತಕೋಟಿ ಡಾಲರ್ (1.52 ಟ್ರಿಲಿಯ ರೂಪಾಯಿ) ಹಣವನ್ನು ರಕ್ಷಣಾ ವಲಯಕ್ಕೆ ಹಂಚಿಕೆ ಮಾಡಲಾಗಿದೆ. ಇದು ಕಳೆದ ವಿತ್ತ ವರ್ಷಕ್ಕಿಂತ ಶೇ. 11.6 ಹೆಚ್ಚಳವಾಗಿದೆ. ಪಾಕ್ ಪ್ರತಿ ಸೈನಿಕನಿಗೆ ವಾರ್ಷಿಕ ಸರಾಸರಿ 1,34,000 ಡಾಲರ್ ವ್ಯಯಿಸುತ್ತದೆ.

    ಇದನ್ನೂ ಓದಿ: ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    ರಷ್ಯಾ ಮಿಲಿಟರಿಯಲ್ಲಿ ಬಿರುಕು?
    ರಷ್ಯಾದ ಮಿಲಿಟರಿ ಮತ್ತು ಸೇನಾ ಪಡೆಗಳ ಮುಖ್ಯಸ್ಥರು ದೇಶದ್ರೋಹ ಎಸಗುತ್ತಿದ್ದಾರೆ ಎಂದು ದೇಶದ ಖಾಸಗಿ ಮಿಲಿಟರಿ ಕಂಪನಿ ವ್ಯಾಗ್ನರ್ ಗ್ರೂಪ್​ನ ಮಾಲೀಕ ಯೆವ್ಗೆನಿ ಪ್ರಿಗೋಜಿನ್ ಆಪಾದಿಸಿದ್ದಾರೆ. ಯೂಕ್ರೇನ್​ನ ರಣಾಂಗಣದಲ್ಲಿರುವ ಯೋಧರಿಗೆ ಅವರು ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಸರಬ ರಾಜು ಮಾಡುತ್ತಿಲ್ಲ ಎಂದು ಪ್ರಿಗೋಜಿನ್ ಹೇಳಿದ್ದಾರೆ. ಇದು, ಯೂಕ್ರೇನ್​ನೊಂದಿಗೆ ಯುದ್ಧ ನಿರತವಾಗಿರುವ ರಷ್ಯಾದ ಮಿಲಿಟರಿಯಲ್ಲಿ ಬಿರುಕು ಮೂಡಿರುವ ಸಾಧ್ಯತೆಯತ್ತ ಬೊಟ್ಟು ಮಾಡುತ್ತದೆ ಎಂದು ವಿಶ್ಲೇಷಿಸಲಾಗಿದೆ.

    ಟಿವಿ ಚಾನೆಲ್​ಗಳಿಗೆ ನಿರ್ಬಂಧ
    ದೇಶದೊಳಗೆ ನಡೆಯುವ ಭಯೋತ್ಪಾದಕ ದಾಳಿಗಳನ್ನು ಪ್ರಸಾರ ಮಾಡದಂತೆ ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್​ಎ) ದೇಶದ ಸುದ್ದಿ ವಾಹಿನಿಗಳಿಗೆ ತಾಕೀತು ಮಾಡಿದೆ. 2015ರ ಎಲೆಕ್ಟ್ರಾನಿಕ್ ಮಾಧ್ಯಮ ನೀತಿ ಸಂಹಿತೆಗೆ ಬದ್ಧವಾಗಿರುವಂತೆ ಕೆಲವು ದಿನಗಳ ಹಿಂದೆ ಹೊರಡಿಸಿದ ಆದೇಶದ ಬೆನ್ನಲ್ಲೇ ಈ ನಿರ್ದೇಶನ ನೀಡಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಟಿವಿ ಸುದ್ದಿ ವಾಹಿನಿಗಳು ಪತ್ರಿಕೋದ್ಯಮದ ಮೂಲಭೂತ ನಿಯಮಗಳು ಮತ್ತು ನೈತಿಕತೆಯನ್ನು ಕಡೆಗಣಿಸಿ ಭಯೋತ್ಪಾದಕ ದಾಳಿ ಮತ್ತಿತರ ಚಟುವಟಿಕೆಗಳ ಕುರಿತು ಗಂಟೆಗಟ್ಟಲೆ ಪ್ರಸಾರ ಮಾಡುತ್ತವೆ ಎಂದಿರುವ ಪ್ರಾಧಿಕಾರ, ತನ್ನ ಕ್ರಮವನ್ನು ಸಮರ್ಥಿಸಿ ಕೊಂಡಿದೆ.

    ಪಾಕ್​ಗೆ ಚೀನಾದಿಂದ ಸಾಲ ಮಂಜೂರು
    ಇಸ್ಲಾಮಾಬಾದ್: ನಗದು ಕೊರತೆಯಿಂದ ಬಳಲುತ್ತಿರುವುದರ ಜೊತೆಗೆ ಸಾಲ ಮಂಜೂರಿಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಹಲವಾರು ಷರತ್ತುಗಳನ್ನು ವಿಧಿಸಿರುವುದರಿಂದ ಇಕ್ಕಟ್ಟಿಗೆ ಸಿಲುಕಿರುವ ಪಾಕಿಸ್ತಾನಕ್ಕೆ ಅದರ ಆಪ್ತ ಮಿತ್ರ ಚೀನಾ 700 ದಶಲಕ್ಷ ಡಾಲರ್ ಸಾಲ ನೀಡಲು ಒಪ್ಪಿದೆ. ಇದರಿಂದ ಪಾಕ್ ಸಾಲದ ಹೊರೆ ಇನ್ನಷ್ಟು ಹೆಚ್ಚಲಿದ್ದು ಸಮಸ್ಯೆ ಬಿಗಡಾಯಿಸುವುದು ನಿಶ್ಚಿತವಾಗಿದೆ. ಚೀನಾ ಅಭಿವೃದ್ಧಿ ಬ್ಯಾಂಕ್​ನ (ಸಿಡಿಬಿ) ಮಂಡಳಿ ಸಾಲ ಮಂಜೂರು ಮಾಡಿದ ವಿಚಾರವನ್ನು ಪಾಕ್ ಹಣಕಾಸು ಸಚಿವ ಇಷಾಕ್ ದರ್ ಬುಧವಾರ ಪ್ರಕಟಿಸಿದರು. ಐಎಂಎಫ್ ವಿಧಿಸಿದ ಷರತ್ತನ್ನು ಪೂರೈಸುವ ಸಲುವಾಗಿ ತೆರಿಗೆ ಹೆಚ್ಚಳ ಮಾಡುವ ಸಂಬಂಧದ ಹಣಕಾಸು ವಿಧೇಯಕವನ್ನು (ಮನಿ ಬಿಲ್) ರಾಷ್ಟ್ರೀಯ ಸಂಸತ್ತು ಅಂಗೀಕರಿಸಿದ ಮರು ದಿನವೇ ದರ್ ಚೀನಾ ಸಾಲದ ವಿಚಾರವನ್ನು ಪ್ರಕಟಿಸಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು 1.1 ಶತಕೋಟಿ ಡಾಲರ್ ಸಾಲ ಮಂಜೂರಿಗೆ ಐಎಂಎಫ್ ಶೆಹಬಾಜ್ ಷರೀಫ್ ಸರ್ಕಾರಕ್ಕೆ ಷರತ್ತುಗಳನ್ನು ವಿಧಿಸಿದೆ. ಎಲ್ಲ ಪ್ರಕ್ರಿಯೆಗಳು ಮುಗಿದಿದ್ದು ಸಿಡಿಬಿ ಮಂಡಳಿ ಪಾಕ್​ಗೆ 700 ದಶಲಕ್ಷ ಡಾಲರ್ ಸಾಲಕ್ಕೆ ಸಮ್ಮತಿಸಿದೆ. ಈ ವಾರವೇ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್​ಗೆ ಈ ಹಣ ಬರಲಿದ್ದು ಇದರಿಂದ ದೇಶದ ವಿದೇಶಿ ವಿನಿಮಯ ಮೀಸಲು (ಫೊರೆಕ್ಸ್) ಸ್ಥಿತಿ ಸುಧಾರಿಸಲಿದೆ ಎಂದು ದರ್ ಟ್ವೀಟ್ ಮಾಡಿದ್ದಾರೆ. ಫೆಬ್ರವರಿ 10ರ ವರದಿಯಂತೆ ಪಾಕ್​ನ ಕೇಂದ್ರೀಯ ಬ್ಯಾಂಕ್​ನಲ್ಲಿ ಕೇವಲ 3.2 ಶತಕೋಟಿ ಡಾಲರ್ ಫೊರೆಕ್ಸ್ ಇದೆ.

    ಇದನ್ನೂ ಓದಿ: ಐಪಿಎಸ್​ ರೂಪಾ-ಐಎಎಸ್​ ರೋಹಿಣಿ ಜಟಾಪಟಿ ಮತ್ತೊಂದು ಹಂತಕ್ಕೆ: ಇಲ್ಲಿದೆ ಇಂದಿನ ಲೇಟೆಸ್ಟ್ ಬೆಳವಣಿಗೆ

    ವೆಚ್ಚ ಕಡಿತಕ್ಕೆ ಖಡಕ್ ಸೂಚನೆ
    ಆರ್ಥಿಕ ಬಿಕ್ಕಟ್ಟಿನ ಕಾರಣ ಮಿತವ್ಯಯಕ್ಕೆ ಮುಂದಾಗಿರುವ ಪಾಕ್ ಸರ್ಕಾರ, ವಿದೇಶಗಳಲ್ಲಿ ರುವ ರಾಜತಾಂತ್ರಿಕ ಕಚೇರಿಗಳ ವೆಚ್ಚಗಳನ್ನು ಕಡಿತ ಮಾಡುವಂತೆ ಖಡಕ್ ನಿರ್ದೇಶನ ನೀಡಿದೆ. ಈ ಸಂಬಂಧ ಅದು ವಿದೇಶಾಂಗ ಕಚೇರಿಗೆ ಆದೇಶ ಹೊರಡಿಸಿದೆ. ವಿದೇಶಗಳಲ್ಲಿರುವ ಕೆಲವು ಮಿಷನ್ ಮತ್ತು ಕಚೇರಿಗಳ ಸಂಖ್ಯೆಯನ್ನು ಕಡಿತ ಮಾಡುವಂತೆಯೂ ಸೂಚಿಸಿದೆ. ಮಿತವ್ಯಯ ಸಾಧಿಸಲು ಸಿಬ್ಬಂದಿ ಕಡಿತ ಮತ್ತು ಇತರ ಕ್ರಮಗಳನ್ನು ಕೈಗೊಳ್ಳುವಂತೆ ಪಿಎಂಒ ಕಚೇರಿಯ ಆದೇಶದಲ್ಲಿ ನಿರ್ದೇಶಿಸಲಾಗಿದೆ ಎಂದು ಮಾಧ್ಯಮ ವರದಿಯೊಂದು ಬುಧವಾರ ತಿಳಿಸಿದೆ. ಈ ವಿಚಾರ ದಲ್ಲಿ ಸೂಕ್ತ ಪ್ರಸ್ತಾವನೆಗಳನ್ನು 2 ವಾರದೊಳಗೆ ಸಲ್ಲಿಸು ವಂತೆ ಪ್ರಧಾನಿ ಶೆಹಬಾಜ್ ಷರೀಫ್ ಸೂಚಿಸಿದ್ದಾರೆ. ವಿದೇಶಿ ಮಿಷನ್​ಗಳ ವೆಚ್ಚದಲ್ಲಿ ಶೇ. 15ರಷ್ಟು ಕಡಿತ ಮಾಡಲು ಪ್ರಧಾನಿ ನೇಮಿಸಿದ್ದ ರಾಷ್ಟ್ರೀಯ ಮಿತ ವ್ಯಯ ಸಮಿತಿ (ಎನ್​ಎಸಿ) ಶಿಫಾರಸು ಮಾಡಿದೆ.

    12 ದಿನಗಳಲ್ಲಿ 16 ಜನರನ್ನು ಕೊಂದ ಆನೆ: 144 ಸೆಕ್ಷನ್ ಜಾರಿ

    30 ವರ್ಷ ದಾಟಿದ್ರೂ ಮದ್ವೆಯಾಗದ ಹಿನ್ನೆಲೆ ದೇವರ ಮೊರೆ: ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ಹೊರಟ ಬ್ರಹ್ಮಚಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts