More

    ಉತ್ಪನ್ನಗಳ ಮೇಲೆ ಐಎಸ್‌ಐ ಮಾರ್ಕ್ ಖಾತ್ರಿಗೆ ತಾಕೀತು

    ಚಿತ್ರದುರ್ಗ: ಐಎಸ್‌ಐ ಮಾರ್ಕ್ ಇರುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಎಲ್ಲರೂ ಮಾಹಿತಿ ಪಡೆಯುವುದು ಅತ್ಯವಶ್ಯಕವಾಗಿದೆ. ಯಾವುದೇ ವ ಸ್ತುವನ್ನು ಗುಣಮಟ್ಟವನ್ನು ನೋಡಿಯೇ ಖರೀದಿಸಿ ಬೇಕೆಂದು ಬಿಐಎಸ್ ಹುಬ್ಬಳ್ಳಿ ಶಾಖೆ ಸಹಾಯಕ ನಿರ್ದೇಶಕ ಸೌವಿಕ್ ಸಿಖ್‌ದರ್ ಹೇ ಳಿದರು.

    ಬಿಐಎಸ್(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್)ಹುಬ್ಬಳ್ಳಿ ಶಾಖೆ,ಡಿಸಿ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳಿಗೆ ಏರ್ಪಡಿಸಿ ದ್ದ ತರಬೇತಿ ಮತ್ತು ಜಾಗೃತಿ ಕಾರ‌್ಯಕ್ರಮದಲ್ಲಿ ಮಾತನಾಡಿ,ಐಎಸ್‌ಐ ಗುರುತಿರುವ ಉತ್ಪನ್ನಗಳು ಮಾತ್ರ ಬಳಕೆಗೆ ಯೋಗ್ಯ. ಕಳಪೆ ಉತ್ಪನ್ನಗಳಿದ್ದರೆ ಅವುಗಳನ್ನು ತಯಾರಿಸಿರುವ ಕೈಗಾರಿಕೆ,ಸಂಸ್ಥೆಗಳ ವಿರುದ್ಧ ಬಿಐಎಸ್ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.

    ಸಾಮಗ್ರಿಗಳ ಗುಣಮಟ್ಟ ಪರೀಕ್ಷೆಗೆ ದೇಶದಲ್ಲಿ ಬಿಐಎಸ್‌ನ 8 ಹಾಗೂ ಬಿಐಎಸ್‌ನಿಂದ ಅಧಿಕೃತವಾಗಿ ಗುರುತಿಸಿರುವ 270 ಖಾಸಗಿ ಪ್ರಯೋಗಾಲಯಗಳಿವೆ. ಬಿಐಎಸ್ ಪರವಾನಗಿ ಇಲ್ಲದೇ ಉತ್ಪನ್ನಗಳ ಮೇಲೆ ಐಎಸ್‌ಐ ಮಾರ್ಕ್‌ಗೆ ಅವಕಾಶವಿಲ್ಲ. ಚಿನ್ನ,ಬೆಳ್ಳಿ,ಅಭರಣ ಗಳ ಖರೀದಿಸುವಾಗ ಬಿಐಎಸ್ ಹಾಲ್‌ಮಾರ್ಕ್‌ನ್ನು ಗ್ರಾಹಕರು ಖಚಿತಪಡಿಸಿಕೊಳ್ಳದಿದ್ದರೆ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಎಚ್ಚ ಸಿದರು.

    ಬಿಐಎಸ್ ಹುಬ್ಬಳ್ಳಿ ಶಾಖೆ ಪ್ರಚಾರ ಅಧಿಕಾರಿ ಮೊಹಮದ್ ಅಹ್ಮದ್ ಬಿಜಾಪುರ್ ಮಾತನಾಡಿ,ಕಟ್ಟಡ ಕಾಮಗಾರಿಗಳಲ್ಲಿ ಬಳಸುವ ಸಿಮೆಂಟ್,ಕಬ್ಬಿಣ,ಅಡುಗೆ ಅನಿಲ ಸಿಲಿಂಡರ್,ಪ್ಯಾಕಿಂಗ್ ಕುಡಿಯುವ ನೀರು,ರಸಗೊಬ್ಬರ,ರಾಸಾಯನಿಕಗಳು,ವೈದ್ಯಕೀಯ ಉಪ ಕರಣ ಗಳು, ಕುಡಿಯುವ ನೀರಿನ ಸಂಪರ್ಕಕ್ಕೆ ಬಳಸುವ ಪಿವಿಸಿ ಪೈಪ್‌ಗಳು,ಅಂಗನವಾಡಿಗಳಲ್ಲಿ ವಿತರಿಸುವ ಆಹಾರ,ಹಾಲಿನ ಪುಡಿ ಇತ್ಯಾದಿ ಉತ್ಪನ್ನಗಳು,ಜಾನುವಾರುಗಳ ಆಹಾರ ಪೊಟ್ಟಣಗಳ ಮೇಲೆ ಐಎಸ್‌ಐ ಮಾರ್ಕ್

    ನೋಡಿಯೇ ಸಂಬಂಧಿಸಿದ ಅಧಿಕಾರಿಗಳು ಖರೀದಿಸ ಬೇಕೆಂದು ಸಲಹೆ ನೀಡಿದರು.

    ಯಾವುದೇ ತಯಾರಿಕಾ ಸಂಸ್ಥೆ,ಕೈಗಾರಿಕೆಗಳ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಬಿಐಎಸ್ ಪರವಾನಗಿ ಪಡೆದಿರುವ ಬಗ್ಗೆ ಡಿಡಿಡಿ. ಚಿಜಿ. ಜಟ.ಜ್ಞಿ ಸಂಪರ್ಕಿಸಿ ಪರಿಶೀಲಿಸಬಹುದು. ಬಿಐಎಸ್ ಕೇರ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದೆಂದರು. ಇದೇ ವೇಳೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ ಚಟುವಟಿಕೆಗಳ ಮಾಹಿತಿ ನೀಡಲಾಯಿತು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್,ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅ ಕಾರ ರೇಖಾ,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ,ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ನಾಗೇಂದ್ರನಾಯ್ಕ,ಪಿಎಸ್‌ಐ ಸಂಜೀವ್‌ಕುಮಾರ್ ಮತ್ತಿತರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts