More

    ಐಪಿಎಲ್‌ಗೆ ಇಲ್ಲವೇ ಆತ್ಮನಿರ್ಭರ್?

    ಬೆಂಗಳೂರು: ಕರೊನಾ ಹಾವಳಿಯಿಂದಾಗಿ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಎದುರಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವದೇಶಿ ಉತ್ಪನ್ನಗಳ ಹೆಚ್ಚಿನ ಬಳಕೆಗಾಗಿ ‘ಆತ್ಮನಿರ್ಭರ್’ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ, ಐಪಿಎಲ್ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸುವ ಬಿಸಿಸಿಐ ಯೋಜನೆಗೆ ಸಮ್ಮತಿಸುವುದೇ ಎಂಬ ಬಗ್ಗೆ ಅನುಮಾನಗಳಿವೆ. ಟೂರ್ನಿ ವಿದೇಶದಲ್ಲಿ ಆಯೋಜನೆಗೊಂಡರೆ ದೇಶದ ವರ್ಚಸ್ಸಿಗೂ ಹೊಡೆತ ಬೀಳಲಿರುವುದು ಗಮನಾರ್ಹ.

    2009 ಮತ್ತು 2014ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆಯ ವೇಳೆ ಐಪಿಎಲ್‌ಗೆ ಭದ್ರತೆ ಒದಗಿಸಲು ನಿರಾಕರಿಸಲಾಗಿತ್ತು. ಇದರಿಂದ ಟೂರ್ನಿ ಸಂಪೂರ್ಣ ಮತ್ತು ಭಾಗಶಃ ವಿದೇಶಕ್ಕೆ ಸ್ಥಳಾಂತರಗೊಂಡಿತ್ತು. ಆದರೆ 2019ರಲ್ಲಿ ಮೋದಿ ಸರ್ಕಾರದ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ನಡುವೆಯೂ ಸಂಪೂರ್ಣ ಐಪಿಎಲ್ ಟೂರ್ನಿ ಭಾರತದಲ್ಲೇ ಯಶಸ್ವಿಯಾಗಿ ಆಯೋಜನೆಗೊಂಡಿತ್ತು. ಹೀಗಾಗಿ ಇದೀಗ ಕರೊನಾ ಹಾವಳಿಯ ಕಾರಣವಿದ್ದರೂ, ಐಪಿಎಲ್ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸಲು ಸರ್ಕಾರ ಅನುಮತಿ ನೀಡುವ ಬಗ್ಗೆ ಅನುಮಾನಗಳು ಸಹಜವಾಗಿವೆ.

    ಇದನ್ನೂ ಓದಿ: ದೀಪಾವಳಿವರೆಗೆ ನಡೆಯುತ್ತಾ ಐಪಿಎಲ್ ಹಬ್ಬ?

    ಈ ವರ್ಷ ಐಪಿಎಲ್ ಟೂರ್ನಿ ನಡೆಯದಿದ್ದರೆ ಬಿಸಿಸಿಐಗೆ 4 ಸಾವಿರ ಕೋಟಿ ರೂ. ನಷ್ಟವಾಗಲಿದೆ. ಅದೇ ರೀತಿ ಟೂರ್ನಿ ವಿದೇಶಕ್ಕೆ ಸ್ಥಳಾಂತರಗೊಂಡರೆ ರಾಜ್ಯ-ಕೇಂದ್ರ ಸರ್ಕಾರಕ್ಕೂ ನಷ್ಟ ಉಂಟಾಗಲಿದೆ. ಐಪಿಎಲ್ ಪಂದ್ಯಗಳಿಂದ ಪ್ರತಿ ವರ್ಷ ಆತಿಥೇಯ ರಾಜ್ಯ ಸರ್ಕಾರ, 70-80 ಕೋಟಿ ರೂ.ಗಳನ್ನು ತೆರಿಗೆ ಮತ್ತಿತರ ರೂಪದ ಆದಾಯ ಗಳಿಸುತ್ತದೆ.

    2015ರ ಐಪಿಎಲ್ ಟೂರ್ನಿಯಿಂದ ದೇಶದ ಜಿಡಿಪಿಗೆ 1,150 ಕೋಟಿ ರೂ. ಕೊಡುಗೆ ಬಂದಿತ್ತು ಎಂದು ವರದಿಯೊಂದು ತಿಳಿಸಿತ್ತು. ಹೀಗಾಗಿ ಐಪಿಎಲ್ ಭಾರತದಲ್ಲೇ ನಡೆದರೆ ದೇಶದ ಆರ್ಥಿಕ ಸ್ಥಿತಿಗೂ ಬಲ ತುಂಬುವುದು ಖಚಿತ. ವಿದೇಶಕ್ಕೆ ಸ್ಥಳಾಂತರಗೊಂಡರೆ, ಟೂರ್ನಿಯ ವೆಚ್ಚವೂ ಹೆಚ್ಚಲಿದ್ದು, ಬಿಸಿಸಿಐ ಮತ್ತು ಫ್ರಾಂಚೈಸಿಗಳ ಆದಾಯವೂ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ. ಇನ್ನು ಈ ಬಾರಿ ಪ್ರೇಕ್ಷಕರಿಗೆ ಅವಕಾಶ ನೀಡದಿರುವ ಕಾರಣ, ಒಂದು ವೇಳೆ ಭಾರತದಲ್ಲೇ ಟೂರ್ನಿ ನಡೆದರೂ, ಟಿಕೆಟ್‌ಗಳ ಜಿಎಸ್‌ಟಿಯಿಂದ ಬರುವ ಆದಾಯ ಸರ್ಕಾರಕ್ಕೆ ನಷ್ಟವಾಗಲಿದೆ.

    ಐಪಿಎಲ್ ವೀಕ್ಷಕವಿವರಣೆಕಾರರಿಗೆ ವರ್ಕ್ ಫ್ರಂ ಹೋಮ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts