More

    ಪಿಯು ವಿದ್ಯಾರ್ಥಿಗಳಿಗೂ ಸಿಗಲಿದೆಯೇ ಉಚಿತ ಲ್ಯಾಪ್​ಟಾಪ್​…?

    ಬೆಂಗಳೂರು: ‘ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ’ ಎನ್ನುವ ಕರೊನಾ ಮಂತ್ರ ಭವಿಷ್ಯದ ಎಲ್ಲ ಸಂಕಷ್ಟದ ಸಮಯಗಳಿಗೂ ಅನ್ವಯವಾಗಲಿದೆ. ಸಾಧ್ಯವಾಗಬಹುದಾದ ಎಲ್ಲ ಕೆಲಸಗಳನ್ನು ಮನೆಯಿಂದಲೇ ಮಾಡಬೇಕಾದುದು ಅನಿವಾರ್ಯವೂ ಆಗಲಿದೆ.

    ಶಾಲೆ, ಕಾಲೇಜುಗಳ ಪುನರಾರಂಭವಾಗದ ಹಿನ್ನೆಲೆಯಲ್ಲಿ ಕಲಿಕೆಯಂತೂ ಸದ್ಯ ಆನ್​ಲೈನ್​ನಲ್ಲಿಯೇ ನಡೆಯುತ್ತಿದೆ. ಜತೆಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡ ಆನ್​ಲೈನ್​ ಕಲಿಕೆ ಪ್ರೋತ್ಸಾಹಕ್ಕೆ ಯೋಜನೆ ರೂಪಿಸುತ್ತಿವೆ. ಶಾಲೆಯಲ್ಲಿ ಕಲಿಕೆಯ ಅವಧಿಯನ್ನು ಕಡಿತಗೊಳಿಸಿ ಮಕ್ಕಳು ಮನೆಯಲ್ಲಿರುವಾಗಲೇ ಪಾಠ ಹೇಳುವಂತೆ ತಜ್ಞರ ಸಮಿತಿಯೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

    ಇದನ್ನೂ ಓದಿ; ಪಿಯು ಮಟ್ಟದಿಂದಲೇ ಆನ್​ಲೈನ್​ ತರಗತಿ ಆರಂಭಿಸಿ; ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ 

    ಇದೆಲ್ಲದರ ನಡುವೆ, ಇತ್ತೀಚೆಗೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆನ್​ಲೈನ್​ ಬೋಧನೆಗೆ ಒತ್ತು ನೀಡುವಂತೆ ತಿಳಿಸಲಾಗಿತ್ತು. ಪರೀಕ್ಷೆಗೂ ಮುನ್ನ ಬಾಕಿ ಪಠ್ಯಕ್ರಮವನ್ನು ಆನ್​ಲೈನ್​ನಲ್ಲಿ ಬೋಧಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದರು.

    ಎಲ್ಲಕ್ಕಿಂತ ಮುಖ್ಯವಾಗಿ ಪಿ.ಯು ಮಟ್ಟದಿಂದಲೇ ಆನ್​ಲೈನ್​ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ತಿಳಿಸಿದ್ದರು. ಹೀಗಾಗಿ ಪಿಯು ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್​ಟಾಪ್​ ವಿತರಣೆಗೆ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್​ಟಾಪ್​ ನೀಡಲಾಗುತ್ತಿದೆ. ಆರಂಭದಲ್ಲಿ ಎಸ್​ಎಸಿ, ಎಸ್​ಟಿ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿದ್ದ ಯೋಜನೆಯನ್ನು ನಂತರ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ವಿಸ್ತರಿಸಲಾಯಿತು. ಸದ್ಯ ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ 1.09 ಲಕ್ಷ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡಲಾಗಿದೆ.

    ಇದನ್ನೂ ಓದಿ; ಈ ಬಾರಿ ಶಿಕ್ಷಣ ಸಂಸ್ಥೆಗಳಿಗೆ ಬೇಸಿಗೆ ರಜೆ ಮೊಟಕು; ಡಿಸಿಎಂ ಅಶ್ವತ್ಥನಾರಾಯಣ್​ ಮಾಹಿತಿ 

    ಆದರೆ, ಪದವಿ ಪ್ರಥಮ ವರ್ಷದಲ್ಲಿ ನೀಡಲಾಗುವ ಲ್ಯಾಪ್​ಟಾಪ್​ಅನ್ನೇ ಪಿಯು ಮೊದಲ ವರ್ಷದಲ್ಲಿ ನೀಡಿದರೆ ಪದವಿ ಹಂತಕ್ಕೂ ಬಳಸಬಹುದು ಎಂಬ ಸಲಹೆಯನ್ನೂ ಅಧಿಕಾರಿಗಳು ನೀಡಿದ್ದಾರೆ ಎನ್ನಲಾಗಿದೆ.

    ಇದಲ್ಲದೇ, ನೆರೆಯ ತಮಿಳುನಾಡು ಸೇರಿ ಕೆಲ ರಾಜ್ಯಗಳಲ್ಲಿ 11, 12 ನೇ ತರಗತಿ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡಲಾಗುತ್ತಿದೆ. ಆನ್​ಲೈನ್​ ಶಿಕ್ಷಣದ ಮಹತ್ವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಗೆ ಸಮ್ಮತಿ ನೀಡಬಹುದು ಇಲ್ಲವೇ, ಆರ್ಥಿಕ ಸಂಕಷ್ಟದ ಕಾರಣ ಜನಪ್ರಿಯ ಯೋಜನೆಗಳ ಘೋಷಣೆಯಿಂದ ದೂರವೇ ಉಳಿಯಬಹುದು ಎಂದು ವಿಶ್ಲೇಷಿಸಲಾಗಿದೆ.

    ಬುಕ್​ ಅಲ್ಲ, ಟ್ಯಾಬ್​ ಹಿಡಿದು ಹೋಗಬೇಕಿಗ ಶಾಲೆಗೆ; ಆನ್​ಲೈನ್​ ಮೋಡ್​ಗೆ ಶಿಫ್ಟ್​ ಆದ ಶಿಕ್ಷಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts