More

    ನೀರವ್ ರಕ್ಷಣೆಗೆ ಕಾಂಗ್ರೆಸ್​ ಯತ್ನ?

    ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್​ಬಿ) ವಂಚನೆ ಪ್ರಕರಣದಲ್ಲಿ ಲಂಡನ್​ನಲ್ಲಿ ಬಂಧಿತರಾಗಿರುವ ವಜ್ರೋದ್ಯಮಿ ನೀರವ್ ಮೋದಿಯನ್ನು ರಕ್ಷಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಆರೋಪಿಸಿದ್ದಾರೆ. ಹೈಕೋರ್ಟ್ ಒಂದರ ಮಾಜಿ ನ್ಯಾಯಮೂರ್ತಿಯೂ ಆಗಿದ್ದ ಕಾಂಗ್ರೆಸ್ ಸದಸ್ಯರೊಬ್ಬರು ನೀರವ್ ಮೋದಿ ವಿರುದ್ಧದ ಗಡಿಪಾರು ಮೊಕದ್ದಮೆ ವಿಚಾರಣೆ ವೇಳೆ ಆರೋಪಿಪರ ಸಾಕ್ಷಿಯಾಗಿ ಹಾಜರಾಗಿದ್ದರು ಎನ್ನುವುದು ಪ್ರಸಾದ್ ಆರೋಪವಾಗಿದೆ.

    ಇದನ್ನೂ ಓದಿ: ಹಣ್ಣು, ತರಕಾರಿ ಬೆಳೆಗಾರರಿಗೆ ತಲಾ 15 ಸಾವಿರ ರೂ.; ಮತ್ತೆ 162 ಕೋಟಿ ಪ್ಯಾಕೇಜ್ ನೀಡಿದ ಬಿಎಸ್‌ವೈ

    ನೀರವ್ ರಕ್ಷಿಸಲು ಕಾಂಗ್ರೆಸ್ ಗರಿಷ್ಠ ಪ್ರಯತ್ನಿಸುತ್ತಿದೆ ಎನ್ನುವುದಕ್ಕೆ ಕೆಲವು ಪ್ರಬಲವಾದ ಸನ್ನಿವೇಶಗಳು ನಮ್ಮ ಮುಂದಿವೆ. ಬ್ರಿಟನ್​ನ ಕಾನೂನು ಪ್ರಕ್ರಿಯೆ ಮೇಲೆ ಪ್ರಭಾವ ಬೀರಲು ಮಾಜಿ ನ್ಯಾಯಮೂರ್ತಿಯೊಬ್ಬರು ಕಾಂಗ್ರೆಸ್ ಕುಮ್ಮಕ್ಕಿನಿಂದ ಕೆಲಸ ಮಾಡುತ್ತಿದ್ದಾರೆ. ನಮ್ಮ ತನಿಖಾ ಸಂಸ್ಥೆಗಳು ಅದನ್ನು ಪರಿಣಾಮಕಾರಿಯಾಗಿ ಎದುರಿಸುತ್ತವೆ ಎಂದಿದ್ದಾರೆ. ನೀರವ್ ರಕ್ಷಣೆಗೆ ನಿಂತಿರುವ ಮಾಜಿ ಜಡ್ಜ್ ಯಾರೆಂದು ಪ್ರಸಾದ್ ಹೇಳಿಲ್ಲ. ಆದರೆ, ಮುಂಬೈ ಹೈಕೋರ್ಟ್​ನ ಮಾಜಿ ನ್ಯಾಯಮೂರ್ತಿ ಅಭಯ್ ತಿಪ್ಸೆ ಮೋದಿ ಕೇಸ್​ನಲ್ಲಿ ಸಾಕ್ಷಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸಂಬಿತ್ ಪಾತ್ರಾ ಆಪಾದಿಸಿದ್ದಾರೆ.

    ಇದನ್ನೂ ಓದಿ: ಕ್ವಾರಂಟೈನ್ ಕೇಂದ್ರವನ್ನು ಹೊರವಲಯದಲ್ಲಿ ತೆರೆಯಿರಿ

    ಕೊಲೆ ಬೆದರಿಕೆ?: ಕಂಪನಿಯ ನಿರ್ದೇಶಕರನ್ನು ಕಳ್ಳತನದ ಪ್ರಕರಣದಲ್ಲಿ ಸಿಲುಕಿಸುವುದಾಗಿ ಹಾಗೂ ಕೊಲೆ ಮಾಡುವುದಾಗಿ ನೀರವ್ ಬೆದರಿಕೆ ಹಾಕಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಕೇಂದ್ರ ತನಿಖಾ ದಳ (ಸಿಬಿಐ) ಈ ವಾರ ಲಂಡನ್ ನ್ಯಾಯಾಲಯದಲ್ಲಿ ಹಾಜರುಪಡಿಸಿದೆ. ಕೆಲವು ದಾಖಲೆಗಳಿಗೆ ಸಹಿ ಹಾಕುವಂತೆ ನೀರವ್ ಸೋದರ ನೇಹಲ್ ಬಲವಂತಪಡಿಸಿದ್ದ ಎಂದು ಆರು ಮಂದಿ ಆಪಾದಿಸಿದ್ದಾರೆ.

    ರೈಲು ಹತ್ತುವಾಗ ಸುಮ್ಮನಿದ್ರು, ಇಳಿದ ಮೇಲೆ ‘ಹೈಡ್ರಾಮ’ ಶುರು ಮಾಡಿದ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts