More

    ಕೋಳಿ ಪ್ರಾಣಿಯೋ ಅಥವಾ ಪಕ್ಷಿಯೋ? ಹೈಕೋರ್ಟ್​ ಪ್ರಶ್ನೆಗೆ ಗುಜರಾತ್​ ಸರ್ಕಾರ ಕೊಟ್ಟ ಉತ್ತರವಿದು…

    ಅಹಮದಾಬಾದ್​: ಕೋಳಿಯು ಪ್ರಾಣಿಯೋ? ಅಥವಾ ಪಕ್ಷಿಯೋ? ಎಂಬ ಗುಜರಾತ್​ ಹೈಕೋರ್ಟ್​ ಪ್ರಶ್ನೆಗೆ ಗುಜರಾತ್​ ಸರ್ಕಾರ ಉತ್ತರ ನೀಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಅಡಿಯಲ್ಲಿ ಕೋಳಿಯನ್ನು ಒಂದು ಪ್ರಾಣಿಯನ್ನಾಗಿ ಪರಿಗಣಿಸುತ್ತೇವೆ ಎಂದು ಸರ್ಕಾರ ಹೇಳಿದೆ.

    ಪ್ರಾಣಿ ದಯಾ ಸಂಘ ಮತ್ತು ಅಹಿಂಸಾ ಮಹಾಸಂಘವು, ಅಂಗಡಿಗಳಲ್ಲಿ ಕೋಳಿಗಳನ್ನು ಕಡಿಯುವುದನ್ನು ನಿಷೇಧಿಸಬೇಕೆಂದು ಹೈಕೋರ್ಟ್ ಮೆಟ್ಟಿಲೇರಿತ್ತು. ಅಲ್ಲದೆ, ಕಸಾಯಿಖಾನೆಗಳಲ್ಲಿ ಮಾತ್ರ ಕೋಳಿಗಳನ್ನು ಕಡಿಯಬೇಕು ಎಂದು ಮನವಿ ಮಾಡಿತ್ತು.

    ಕಾನೂನು ಉಲ್ಲಂಘನೆ ಕಾರಣ ನೀಡಿದ ಇತ್ತೀಚೆಗಷ್ಟೇ ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳು ಮಾಂಸದ ಅಂಗಡಿಗಳ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ್ದವು. ಸರ್ಕಾರದ ಈ ನಿಲುವಿನ ವಿರುದ್ಧ ಕೋಳಿ ವರ್ತಕರ ಸಂಘ ಕೂಡ ಕೋರ್ಟ್​ ಮೆಟ್ಟಿಲೇರಿದ್ದು, ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ನೀರಲ್ ಮೆಹ್ತಾ ಅವರನ್ನೊಳಗೊಂಡ ಹೈಕೋರ್ಟ್​ ವಿಭಾಗೀಯ ಪೀಠವು ವಿಚಾರಣೆ ನಡೆಸುತ್ತಿದೆ.

    ಇದನ್ನೂ ಓದಿ: ಧೂಮಪಾನ ಮಾಡಿ 8 ಲಕ್ಷ ರೂ. ಕಳ್ಕೊಂಡ ಉದ್ಯೋಗಿ; 355 ಗಂಟೆ 19 ನಿಮಿಷಗಳ ಸ್ಮೋಕಿಂಗ್!

    ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ಮನೀಶ ಲವಕುಮಾರ್​ ಮಾತನಾಡಿ, ಕೋಳಿಯು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಪ್ರಕಾರ ಪ್ರಾಣಿಗಳ ವರ್ಗಕ್ಕೆ ಸೇರುತ್ತದೆ. ಆದರೆ, ಮೀನನ್ನು ಈ ವರ್ಗಕ್ಕೆ ಸೇರಿಸಿಲ್ಲ ಎಂದರು. ಲವಕುಮಾರ್​ ಅವರ ಪ್ರಕಾರ ಕೋಳಿಯನ್ನು ಪ್ರಾಣಿ ಎಂದು ಪರಿಗಣಿಸುವಂತೆ ಹೈಕೋರ್ಟ್ ಆದೇಶ ನೀಡಿದರೆ ಕಸಾಯಿಖಾನೆಗಳಲ್ಲಿ ಮಾತ್ರ ಕೋಳಿಯನ್ನು ಕಡಿಯಬೇಕಾಗುತ್ತದೆ. ಇದು ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಅಂಗಡಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

    ಕೋಳಿ ಅಂಗಡಿಗಳ ಪರ ವಕೀಲರಾದ ಕವಿನಾ ಅವರು ಮಾತನಾಡಿ, ಕಸಾಯಿಖಾನೆಗಳಲ್ಲಿ ಕೋಳಿಗಳನ್ನು ವಧೆ ಮಾಡುವುದು ಪ್ರಾಯೋಗಿಕವಲ್ಲ ಎಂದು ಹೇಳಿದ್ದಾರೆ. ಪ್ರಾಣಿಗಳನ್ನು ವಧೆ ಮಾಡುವ ಮುನ್ನ ಪಶುವೈದ್ಯರ ಪ್ರಮಾಣಪತ್ರದ ಅಗತ್ಯವಿದೆ. ಕೋಳಿಗಳ ವಿಚಾರದಲ್ಲಿ ಇದು ಹೇಗೆ ಸಾಧ್ಯ? ಎಂದು ಕವಿನಾ ಪ್ರಶ್ನೆ ಮಾಡಿದರು. (ಏಜೆನ್ಸೀಸ್​)

    ಸಾಧ್ಯವಾದ್ರೆ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರೋ ಬೀಜರಹಿತ ಕಲ್ಲಂಗಡಿ ಹಣ್ಣಿನ ತುಂಡನ್ನು ಪತ್ತೆ ಹಚ್ಚಿ!

    ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಜೆಡಿಎಸ್ ಅಭ್ಯರ್ಥಿಗಳಿಗೆ ಎಚ್ಚರಿಕೆ ಕೊಟ್ಟ ಎಚ್​.ಡಿ.ಕುಮಾರಸ್ವಾಮಿ

    ಮಾಡಾಳ್ ವಿರೂಪಾಕ್ಷಪ್ಪಗೆ 14 ದಿನ ನ್ಯಾಯಾಂಗ ಬಂಧನ; ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts