More

    ನೀರಾವರಿ ಕಾಮಗಾರಿ ಆಮೆಗತಿ

    ಮಲ್ಲು ಕಳಸಾಪುರ ಲಕ್ಷೆ್ಮೕಶ್ವರ

    ಕರ್ನಾಟಕ ನೀರಾವರಿ ನಿಗಮದಿಂದ ಶಿರಹಟ್ಟಿ/ಲಕ್ಷ್ಮೇಶ್ವರ ತಾಲೂಕಿನ 20 ಕೆರೆ ಮತ್ತು ಮಾರ್ಗದ ಬಾಂದಾರಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ 140 ಕೋಟಿ ರೂ. ವೆಚ್ಚದ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಹೀಗಾಗಿ, ಬರುವ ಮಳೆಗಾಲದೊಳಗೆ ಪೂರ್ಣಗೊಂಡು ಯೋಜನೆ ಪೂರ್ಣಗೊಳ್ಳುವುದೇ ಎಂಬ ಪ್ರಶ್ನೆ ಉದ್ಭವಿಸಿದೆ.

    ಏನಿದು ಯೋಜನೆ?: ಜಲಸಂಪನ್ಮೂಲ ಇಲಾಖೆಯಿಂದ ತಾಲೂಕಿನ ತುಂಗಭದ್ರಾ ನದಿ ಪಾತ್ರದ ಇಟಗಿ ಹತ್ತಿರ ಜಾಕ್​ವೆಲ್ ನಿರ್ವಿುಸಿ ಅಲ್ಲಿಂದ ದೇವಿಹಾಳ ಗುಡ್ಡದಲ್ಲಿ ನಿರ್ವಿುಸುವ ನೀರು ಸಂಗ್ರಹಣಾ ಘಟಕದವರೆಗೆ ಒಟ್ಟು 24 ಕಿ.ಮೀ. ಉದ್ದದ ಮುಖ್ಯ ಪೈಪ್​ಲೈನ್ ಅಳವಡಿಸಿ ಅಲ್ಲಿಂದ ತಾಲೂಕಿನ 20 ಪ್ರಮುಖ ಕೆರೆ ಮತ್ತು ಬಾಂದಾರಗಳಿಗೆ ನೀರು ಹರಿಸುವ ಮಹತ್ವಾಕಾಂಕ್ಷೆ ಯೋಜನೆ ಇದಾಗಿದೆ. ಈ ಯೋಜನೆಯಲ್ಲಿ ತುಂಗಭದ್ರಾ ನದಿಯ ಸಮೀಪವೇ ಬೃಹತ್ ಜಾಕ್​ವೆಲ್ ನಿರ್ವಿುಸಿ ಅಲ್ಲಿಂದ 835 ಎಚ್​ಪಿಯ 5 ಪಂಪ್​ಗಳ ಮೂಲಕ ದೇವಿಹಾಳದ ಗುಡ್ಡದ ಮೇಲೆ ನಿರ್ವಿುಸುವ ನೀರು ಸಂಗ್ರಹಣಾ ಘಟಕಕ್ಕೆ ನೀರು ಲಿಫ್ಟ್ ಮಾಡಲಾಗುವುದು. ಅಲ್ಲಿಂದ ತಾಲೂಕಿನ 20 ಪ್ರಮುಖ ಕೆರೆಗಳನ್ನು ಭರ್ತಿ ಮಾಡುವ ಯೋಜನೆ ಇದಾಗಿದೆ.

    20 ಕೆರೆಗಳು: ಶಿರಹಟ್ಟಿ ತಾಲೂಕಿನ ತಂಗೋಡ, ಕೆರೆಕೊಪ್ಪ, ವಡವಿ, ಬೆಳಗಟ್ಟಿ, ತಾರಿಕೊಪ್ಪದಲ್ಲಿ 2, ಬೆಳ್ಳಟ್ಟಿಯಲ್ಲಿ 3, ರಣತೂರು, ದೇವಿಹಾಳ, ಛಬ್ಬಿ, ಮಜ್ಜೂರು ಹಾಗೂ ಲಕ್ಷ್ಮೇಶ್ವರ ತಾಲ್ಲೂಕಿನ ಕುಂದ್ರಳ್ಳಿ, ಶೆಟ್ಟಿಕೇರಿ, ಅಡರಕಟ್ಟಿ, ಮಂಜಲಾಪುರ, ಇಟ್ಟಿಗೆರೆ ಕೆರೆ, ಕೆಂಪಿಗೆರೆ ಕೆರೆ, ಮುಯ್ಯಿಕೆರೆಗಳಿಗೆ ನೀರು ತುಂಬಿದ ಬಳಿಕ ಮಾರ್ಗದ ಚೆಕ್ ಡ್ಯಾಮ್ಳಿಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

    ಕಾಮಗಾರಿಯನ್ನು ಮಂಗಳೂರಿನ ಓಷಿಯನ್ ಕನ್​ಸ್ಟ್ರಕ್ಷನ್ ಕಂಪನಿಯವರು ಗುತ್ತಿಗೆ ಪಡೆದಿದ್ದು , 24 ತಿಂಗಳಲ್ಲಿ ಅಂದರೆ 2020ರ ಜನವರಿ ಒಳಗಾಗಿ ಈ ಯೋಜನೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಇದೀಗ ನಿಗದಿತ ಅವಧಿ ಮುಗಿದಿದ್ದರೂ ಇನ್ನೂ ಜಾಕ್​ವೆಲ್ ಕಾಮಗಾರಿ, ಕೆರೆಗಳಿಗೆ ನೀರು ಪೂರೈಸಲು ಅಳವಡಿಸಬೇಕಾದ ಪೈಪ್​ಲೈನ್ ಕಾಮಗಾರಿ, ಶ್ರೀಮಂತಗಡದಲ್ಲಿ ನೀರು ಸಂಗ್ರಹಣಾ ಘಟಕದ ಕಾಮಗಾರಿ ಸೇರಿ ಬಹಳಷ್ಟು ಕಾಮಗಾರಿಗಳು ಬಾಕಿ ಇವೆ. ಅಂದುಕೊಂಡಂತೆ ಕಾಲಮಿತಿಯೊಳಗೆ ಕಾಮಗಾರಿ ಮುಗಿದಿದ್ದರೆ ಯೋಜನೆಯ ವ್ಯಾಪ್ತಿಯ ಕೆರೆಗಳು ತುಂಬುತ್ತಿದ್ದವು. ಇದರಿಂದ ಬೇಸಿಗೆಯಲ್ಲಿ ಆಗುವ ನೀರಿನ ಸಮಸ್ಯೆ ನೀಗಿ ಅಂತರ್ಜಲಮಟ್ಟ ಹೆಚ್ಚಾಗುತ್ತಿತ್ತು. ಆದರೆ, ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಕೆರೆಗಳು ತುಂಬುವ ಲಕ್ಷಣ ಕಾಣುತ್ತಿಲ್ಲ.

    ಯೋಜನೆಯ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಉಂಟಾಗಿರುವ ಅಡಚಣೆಗಳನ್ನು ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ರ್ಚಚಿಸಿ ಇತ್ಯರ್ಥಪಡಿಸಲಾಗಿದೆ. ಸ್ಥಳೀಯ ಸಮಸ್ಯೆಗಳನ್ನು ಖುದ್ದಾಗಿ ಪರಿಹರಿಸುವ ಮೂಲಕ ಯೋಜನೆಯ ಸಾಫಲ್ಯಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಬರುವ ಮಳೆಗಾಲದೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಂಜಿನಿಯರ್ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

    | ರಾಮಣ್ಣ ಲಮಾಣಿ ಶಾಸಕ

    ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜನಪ್ರತಿನಿಧಿಗಳು ಯೋಜನೆಯ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಸಾಗುವಂತೆ ಮಾಡಬೇಕು. ಅಂದಾಗ ಮಾತ್ರ ಬರುವ ಮಳೆಗಾಲದೊಳಗಾದರೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಸಾಕಾರಗೊಳ್ಳಬಹುದು.

    | ರಾಮಕೃಷ್ಣ ದೊಡ್ಡಮನಿ ಮಾಜಿ ಶಾಸಕ

    ಯೋಜನೆಯ ಕಾಮಗಾರಿ ಸಕಾಲದಲ್ಲಿ ಪ್ರಾರಂಭಗೊಳ್ಳದೆ ವಿಳಂಬವಾಗಿದೆ. ಅಲ್ಲದೆ, ಜಾಕ್​ವೆಲ್ ನಿರ್ವಣದ ಸಂದರ್ಭದಲ್ಲಿ ನದಿಯಲ್ಲಿ ಪ್ರವಾಹ ಉಂಟಾಯಿತು. ಮಾರ್ಗ ಮಧ್ಯದಲ್ಲಿ ಅರಣ್ಯ, ವಿದ್ಯುತ್, ಸಾರಿಗೆ ಸೇರಿ ವಿವಿಧ ಇಲಾಖೆಗಳ ಅನುಮೋದನೆ, ಸಹಕಾರ ಪಡೆಯುವಲ್ಲಿ ಕೊಂಚ ವಿಳಂಬವಾಗಿದೆ. ಈಗಾಗಲೇ ಬಹುತೇಕ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಬರುವ ಮಳೆಗಾಲದೊಳಗಾಗಿ ಪೂರ್ಣಗೊಳಿಸಲಾಗುವುದು.

    | ಎಸ್.ಬಿ. ಮಲ್ಲಿಗವಾಡ ಕರ್ನಾಟಕ ನೀರಾವರಿ ನಿಗಮದ ಕಾರ್ಯ ನಿರ್ವಾಹಕ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts