More

    ಭರ್ಜರಿ ಸಿಕ್ಸರ್: ಸ್ಟೇಡಿಯಂ ಆಚೆಯಿದ್ದ ತನ್ನದೇ ಕಾರಿನ ಗಾಜು ಪುಡಿ ಮಾಡಿದ ಕೆವಿನ್​ ಒಬ್ರೆಯನ್​!

    ನವದೆಹಲಿ: ಐರ್ಲೆಂಡ್​ ತಂಡದ ಕೆವಿನ್​ ಒಬ್ರೆಯನ್​ ಓರ್ವ ಅದ್ಭುತ ಬ್ಯಾಟ್ಸ್​ಮನ್​ ಎನ್ನುವುದರಲ್ಲಿ ಸಂಶಯವೇ ಇಲ್ಲ. ಇದೀಗ ತಮ್ಮ ಸ್ಫೋಟಕ ಆಟದಿಂದಲೇ ಕೆವಿನ್,​ ಕ್ರಿಕೆಟ್​ನಲ್ಲಿ ವಿಶೇಷತೆಯೊಂದನ್ನು ಮೆರೆದಿದ್ದಾರೆ. ಭರ್ಜರಿ ಸಿಕ್ಸರ್​ ಮೂಲಕ ತಮ್ಮದೇ ಕಾರಿನ ಕಿಟಕಿ ಗಾಜನ್ನು ಪುಡಿಪುಡಿ ಮಾಡಿದ್ದಾರೆ.

    ಇದನ್ನೂ ಓದಿ: ಚಳ್ಳಕೆರೆಯಲ್ಲಿ ಚಂದ್ರನ ಕುಳಿಗಳನ್ನು ಸೃಷ್ಟಿಸಲು ಇಸ್ರೋ ಪ್ಲ್ಯಾನ್​: ಚಂದ್ರಯಾನ-3ಗೆ ಭರ್ಜರಿ ಸಿದ್ಧತೆ!

    ಕೆವಿನ್​ ಎಂತಹ ಆಟಗಾರನ ಎನ್ನುವುದಕ್ಕೆ 2011ರಲ್ಲಿ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯೇ ಸಾಕ್ಷಿ.​ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವೇಗದ ಶತಕ ಬಾರಿಸುವುದರೊಂದಿಗೆ ಇಂಗ್ಲೆಂಡ್​ ನೀಡಿದ್ದ 327 ರನ್​ ಗುರಿಯನ್ನು ತಲುಪಿ ತಂಡದ ಗೆಲವಿಗೆ ಕೆವಿನ್​ ಪ್ರಮುಖ ಕಾರಣವಾಗಿದ್ದರು. ಇದೀಗ ಇಂಟರ್​-ಪ್ರಾವಿನ್ಶಿಯಲ್​ ಟಿ20 ಟ್ರೋಫಿಯಲ್ಲಿ ಲೈನ್​ಸ್ಟರ್​ ಲೈಟನಿಂಗ್​ ತಂಡದ ಪರ ಕೇವಲ 37 ಎಸೆತಗಳಲ್ಲೇ 82 ರನ್​ ಗಳಿಸಿದ್ದಾರೆ.

    ಪಂದ್ಯದಲ್ಲಿ ಕೆವಿನ್​ ಅವರು ಬರೋಬ್ಬರಿ 8 ಸಿಕ್ಸರ್​ ಸಿಡಿಸಿದ್ದಾರೆ. ಅದರಲ್ಲೊಂದು ಸಿಕ್ಸರ್ ಡಬ್ಲಿನ್​ನ ಪೆಂಬ್ರೋಕ್​ ಕ್ರಿಕೆಟ್​ ಕ್ಲಬ್​ ಕ್ರೀಡಾಂಗಣದಿಂದ ಹೊರಗೆ ಪಾರ್ಕ್​ ಮಾಡಿದ್ದ ಕೆವಿನ್​ ಅವರ ಕಾರಿನ ಕಿಟಕಿ ಗಾಜನ್ನೇ ಪುಡಿಪುಡಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

    ಇದನ್ನೂ ಓದಿ: ನಿಶ್ಚಿತಾರ್ಥವಾಗಿದ್ರೂ ಬೇರೊಬ್ಬಳ ಜತೆ ತಿರುಗಾಟ: ಭಾವಿ ಪತಿಗೆ ತನ್ನ ಉಗ್ರರೂಪ ತೋರಿದ ಯುವತಿ!

    ಪಂದ್ಯ ಮುಗಿದ ಬಳಿಕ ಕಾರು ಚಲಾಯಿಸಿಕೊಂಡು ನೇರವಾಗಿ ಗ್ಯಾರೇಜ್​ಗೆ ಹೋದ ಕೆವಿನ್​ ಕಾರಿನ ಕಿಟಕಿ ಗಾಜನ್ನು ಬದಲಾಯಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಯುವತಿಯ ಸಜೀವ ದಹನಕ್ಕೆ ಕಾರಣವಾಗಿದ್ದು ಬಾಯ್​ಫ್ರೆಂಡ್​, ಮೊಬೈಲ್​ ಮತ್ತು ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts