More

    ಮಿಥಾಲಿ ರಾಜ್ ಶತಕದ ದಾಖಲೆ ಮುರಿದ ಐರ್ಲೆಂಡ್‌ನ 16 ವರ್ಷದ ಬಾಲಕಿ!

    ಹರಾರೆ: ಐರ್ಲೆಂಡ್ ಯುವ ಬ್ಯಾಟರ್ ಆಮಿ ಹಂಟರ್ ಏಕದಿನ ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ಈ ಮೂಲಕ ಭಾರತದ ಮಿಥಾಲಿ ರಾಜ್ ಹೆಸರಿನಲ್ಲಿದ್ದ ದಾಖಲೆ ಮುರಿದಿದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಮಿ ಹಂಟರ್ ಅಜೇಯ 121 ರನ್ ಬಾರಿಸುವ ಮೂಲಕ 16ನೇ ಜನ್ಮದಿನವನ್ನು ಸ್ಮರಣೀಯವಾಗಿಸಿಕೊಂಡರು.

    ಬೆಲ್‌ಪಾಸ್ಟ್‌ನ ಶಾಲಾ ಬಾಲಕಿಯಾಗಿರುವ ಆಮಿ ಹಂಟರ್ ಆಡಿದ 4ನೇ ಏಕದಿನ ಪಂದ್ಯದಲ್ಲೇ ಈ ಸಾಧನೆ ಮಾಡಿದ್ದಾರೆ. ಅವರ 127 ಎಸೆತಗಳ ಇನಿಂಗ್ಸ್ ನೆರವಿನಿಂದ ಐರ್ಲೆಂಡ್ ತಂಡ 85 ರನ್‌ಗಳಿಂದ ಜಯಿಸಿತು. ಆಮಿ ಹಂಟರ್ ಕಳೆದ ಮೇನಲ್ಲಿ 15ನೇ ವಯಸ್ಸಿನಲ್ಲೇ ಏಕದಿನ ಪದಾರ್ಪಣೆ ಮಾಡಿದ ಸಾಧನೆ ಗೈದಿದ್ದರು.

    ಮಿಥಾಲಿ ರಾಜ್ 1999ರ ಜೂನ್‌ನಲ್ಲಿ ಐರ್ಲೆಂಡ್ ವಿರುದ್ಧ 16 ವರ್ಷ ಮತ್ತು 205 ದಿನ ವಯಸ್ಸಿನಲ್ಲಿ ಶತಕ ಸಿಡಿಸುವ ಮೂಲಕ ವಿಶ್ವದ ಅತಿಕಿರಿಯ ಸಾಧಕಿ ಎನಿಸಿದ್ದರು. ಇದೀಗ 38ನೇ ವಯಸ್ಸಿನಲ್ಲೂ ಮಿಥಾಲಿ ರನ್‌ದಾಹ ಮುಂದುವರಿದಿದೆ.

    ಪುರುಷರ ಏಕದಿನ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಅತ್ಯಂತ ಕಿರಿಯ ಶತಕವೀರರಾಗಿದ್ದಾರೆ. ಅವರು 1996ರಲ್ಲಿ ಶ್ರೀಲಂಕಾ ವಿರುದ್ಧ 16 ವರ್ಷ, 217 ದಿನ ವಯಸ್ಸಿನಲ್ಲಿ 102 ರನ್ ಸಿಡಿಸಿದ್ದರು.

    ಬೌಲಿಂಗ್ ಮಾಡದಿದ್ದರೆ ಟಿ20 ವಿಶ್ವಕಪ್ ತಂಡದಿಂದ ಹೊರಬೀಳುವ ಭೀತಿಯಲ್ಲಿ ಹಾರ್ದಿಕ್ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts