More

    ರೈಲಿನಲ್ಲಿಯೂ Zomato ಆಹಾರ ವಿತರಣೆ; ಮೊದಲು ಐದು ರೈಲು ನಿಲ್ದಾಣಗಳಲ್ಲಿ ಮಾತ್ರ ಈ ಸೌಲಭ್ಯ ಜಾರಿ!

    ನವದೆಹಲಿ: ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ ( ಐಆರ್‌ಸಿಟಿಸಿ ) ತನ್ನ ಇ-ಕ್ಯಾಟರಿಂಗ್ ವಿಭಾಗದ ಮೂಲಕ ರೈಲು ಪ್ರಯಾಣಿಕರಿಗೆ  ಆಹಾರ ಆಯ್ಕೆಗಳನ್ನು ನೀಡಲು Zomato ಜತೆ ಪಾಲುದಾರಿಕೆ ಹೊಂದಿದೆ.

    ರೈಲ್ವೇ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಆಹಾರವನ್ನು ಒದಗಿಸಲು IRCTC ಜೊಮ್ಯಾಟೋ ಜತೆ ಒಪ್ಪಂದ ಮಾಡಿಕೊಂಡಿದೆ. ಇದು ರೈಲು ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಆಹಾರ ಪೂರೈಕೆಯ ವಿಷಯದಲ್ಲಿ ಹೆಚ್ಚಿನ ಆಯ್ಕೆಗಳನ್ನು ಲಭ್ಯವಾಗುವಂತೆ ಮಾಡಿದೆ.

    ಈ ಕ್ಯಾಟರಿಂಗ್ ವಿಭಾಗದಲ್ಲಿ, ಮುಂಗಡ ಆರ್ಡರ್ ಮಾಡಿದ ಆಹಾರ ಪದಾರ್ಥಗಳನ್ನು ಪ್ರಯಾಣಿಕರಿಗೆ ತಲುಪಿಸಲು ಆಹಾರ ವಿತರಣಾ ಅಪ್ಲಿಕೇಶನ್ ಆಗಿರುವ ಜೊಮ್ಯಾಟೋ ಜತೆ ಪಾಲುದಾರಿಕೆ ಹೊಂದಿದೆ. ಈ ಒಪ್ಪಂದದ ಭಾಗವಾಗಿ, Zomato ಆರಂಭದಲ್ಲಿ ತನ್ನ ಸೇವೆಗಳನ್ನು ಮೊದಲ ಐದು ರೈಲು ನಿಲ್ದಾಣಗಳಿಗೆ ಸೀಮಿತಗೊಳಿಸಿತು.

    ಪ್ರಸ್ತುತ, ನವದೆಹಲಿ, ಪ್ರಯಾಗರಾಜ್, ಕಾನ್ಪುರ, ಲಕ್ನೋ, ವಾರಣಾಸಿಯಲ್ಲಿ Zomato ತನ್ನ ಸೇವೆಗಳನ್ನು ಈ ಐದು ರೈಲು ನಿಲ್ದಾಣಗಳಲ್ಲಿ ಮಾತ್ರ ಬಳಸುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನಿಲ್ದಾಣಗಳಿಗೆ ಜೊಮ್ಯಾಟೋ ಸೇವೆಗಳನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಭಾರತೀಯ ರೈಲ್ವೇ ಪ್ರಕಟಿಸಿದೆ.

    IRCTC ಯ ಇ-ಕೇಟರಿಂಗ್ ಸೇವೆಗಳ ಅಡಿಯಲ್ಲಿ, ರೈಲ್ವೆ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ತಮ್ಮ ಆಯ್ಕೆಯ ಆಹಾರವನ್ನು ಆರ್ಡರ್ ಮಾಡಲು ಮತ್ತು ಆನಂದಿಸಲು ಸೌಲಭ್ಯವನ್ನು ಒದಗಿಸಲಾಗಿದೆ. ಪ್ರಯಾಣವನ್ನು ಹೆಚ್ಚು ಆರಾಮದಾಯಕವಾಗಿಸಲು ಈ ನೀತಿಯನ್ನು ಪರಿಚಯಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

    ಮುಂಗಡ ಆರ್ಡರ್ ಮಾಡಿದ ಆಹಾರ ಪದಾರ್ಥಗಳನ್ನು ಪ್ರಯಾಣಿಕರಿಗೆ, ಜೊಮ್ಯಾಟೋ ಸಹಾಯದಿಂದ ಅವುಗಳನ್ನು ಆಯಾ ನಿಲ್ದಾಣಗಳಲ್ಲಿ ಅವರಿಗೆ ನೀಡಲಾಗುವುದು. ಈ ಸೌಲಭ್ಯವನ್ನು IRCTC ಇ-ಕೇಟರಿಂಗ್ ಪೋರ್ಟಲ್ ಮೂಲಕ ಒದಗಿಸಲಾಗಿದೆ. Zomato ಜೊತೆಗಿನ ಒಪ್ಪಂದವು ಆಹಾರದ ವಿಷಯದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ ಭಾಗವಾಗಿದೆ ಎಂದು IRCTC ಹೇಳಿದೆ.

    ಹಬ್ಬದ ಸೀಸನ್ ಆಗಿರುವುದರಿಂದ ರೈಲ್ವೇ ಕೇಟರಿಂಗ್ ಸರ್ವಿಸ್ ವಿಶೇಷ ಸೇವೆ ಹಾಗೂ ಆಫರ್ ಗಳನ್ನು ನೀಡುತ್ತಿರುವುದು ಗೊತ್ತೇ ಇದೆ. ಭಾರತೀಯ ರೈಲ್ವೇ ನವರಾತ್ರಿಯ ಸಂದರ್ಭದಲ್ಲಿ ಉಪವಾಸ ಮಾಡುವವರಿಗೆ ವಿಶೇಷವಾದ ‘ಥಾಲಿ’ಯನ್ನು ನೀಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts