More

    ಇರಾಕ್ ಬಾಲಕಿಗೆ ಪುನರ್ಜನ್ಮ ನೀಡಿದ ಅರಿಹಂತ ಆಸ್ಪತ್ರೆ

    ಬೆಳಗಾವಿ: ಮಕ್ಕಳಲ್ಲಿ ಕಂಡು ಬರುವ ಹೃದಯದ ಕಾಯಿಲೆ ಸಬ್ ಅಯೋಟಿಕ್ ಮೆಂಬರೆನ್ಸ್(ಸ್ಯಾಮ್)ನಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಇರಾಕ್ ದೇಶದ ಅಝಲ (6) ಬಾಲಕಿಗೆ ನಗರದ ಅರಿಹಂತ ಆಸ್ಪತ್ರೆಯ ತಜ್ಞವೈದ್ಯರು ಅತ್ಯಂತ ಕ್ಲಿಷ್ಟಕರ ಶಸಚಿಕಿತ್ಸೆ ಮಾಡಿ ಯಶಸ್ವಿಯಾಗಿದ್ದಾರೆ.

    ಕಾಯಿಲೆಯಿಂದ ಬಳಲುತ್ತಿದ್ದ ಬಾಲಕಿಯನ್ನು ಇರಾಕ್‌ನ ಸ್ಥಳೀಯ ವೈದ್ಯರು ಪರೀಕ್ಷಿಸಿದಾಗ ಹೃದಯದಲ್ಲಿ ಪೊರೆಯಾಗಿತ್ತು. ಸಾಮಾನ್ಯವಾಗಿ ಮಹಾಪಧಮನಿಯ ಅಡಿಯಲ್ಲಿ ಸ್ನಾಯು (ದ್ರವ್ಯರಾಶಿ) ಬೆಳೆದು ಎಡಭಾಗದಲ್ಲಿ ರಕ್ತ ಸಂಚಾರಕ್ಕೆ ತೊಂದರೆಯನ್ನುಂಟು ಮಾಡುತ್ತಿರುವುದು ಕಂಡುಬಂದಿತು. ಅಲ್ಲಿನ ತಂತ್ರಜ್ಞಾನಕ್ಕೆ ಈ ರೋಗಕ್ಕೆ ಚಿಕಿತ್ಸೆ ಅಸಾಧ್ಯ ಎಂದು ವೈದ್ಯರು ತಿಳಿಸಿ, ಭಾರತಕ್ಕೆ ಹೋಗುವಂತೆ ತಿಳಿಸಿದ್ದರಂತೆ.

    ಅದರಂತೆ ಅರಿಹಂತ ಆಸ್ಪತ್ರೆ ಹಾಗೂ ಡಾ. ಎಂ.ಡಿ. ದೀಕ್ಷಿತ ಅವರನ್ನು ಪಾಲಕರು ಭೇಟಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದಾಗ ಹೃದಯದ ತೀವ್ರ ತೊಂದರೆ ಕಂಡು ಬಂದಿದೆ. ಬಾಲಕಿಗೆ 2018ರಲ್ಲಿ ಬೇರೆ ಆಸ್ಪತ್ರೆಯಲ್ಲಿ ಹೃದಯ ಶಸಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಮತ್ತೆ ತೊಂದರೆಯಾದಾಗ ಬೆಂಗಳೂರಿನ ವೈದ್ಯರ ಸಲಹೆ ಮೇರೆಗೆ ದೂರದ ಇರಾಕನಿಂದ ಬೆಳಗಾವಿ ಅರಿಹಂತ ಆಸ್ಪತ್ರೆಗೆ ಬಂದು ಶಸಚಿಕಿತ್ಸೆಗೊಳಗಾದರು. 1 ವರ್ಷದಲ್ಲಿ ಇರಾಕ್‌ನ 3 ರೋಗಿಗಳು ಶಸಚಿಕಿತ್ಸೆಗೆ ಒಳಗಾಗಿದ್ದಾರೆ. ಯಶಸ್ವಿ ಶಸಚಿಕಿತ್ಸೆ ನೆರವೇರಿಸಿದ ಡಾ. ಎಂ.ಡಿ. ದೀಕ್ಷಿತ ಅವರ ತಂಡ, ಆಸ್ಪತ್ರೆ ಆಡಳಿತ ಮಂಡಳಿ ಕಾರ್ಯ ವೈಖರಿಗೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಅಧ್ಯಕ್ಷ ರಾವಸಾಹೆಬ ಪಾಟೀಲ, ನಿರ್ದೇಶಕ ಅಭಿನಂದನ ಪಾಟೀಲ, ಯುವ ಮುಖಂಡ ಉತ್ತಮ ಪಾಟೀಲ ಅವರು ಅಝಲ ಆರೋಗ್ಯ ವಿಚಾರಿಸಿ ಶುಭ ಆರೈಸಿದ್ದಾರೆ.

    ನಮಗೂ ಹೊಸ ಬದುಕು ಸಿಕ್ಕಿತು: ಕೆಲವು ದಿನಗಳಿಂದ ಅಝಲ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ನಾವು ಅವಳನ್ನು ಇರಾಕ್‌ನಲ್ಲಿ ವೈದ್ಯರಿಂದ ಪರೀಕ್ಷಿಸಿದೆವು. ಆ ವೇಳೆ ಸ್ಥಳೀಯ ವೈದ್ಯರು ಅಝಲಗೆ ಮತ್ತೊಮ್ಮೆ ಶಸಚಿಕಿತ್ಸೆ ಮಾಡಬೇಕಿದೆ ಎಂದು ಹೇಳಿದಾಗ ಆಘಾತವಾಯಿತು. ಸ್ನೇಹಿತರೊಂದಿಗೆ ಚರ್ಚಿಸಿದ ಬಳಿಕ, ಡಾ. ಎಂ.ಡಿ. ದೀಕ್ಷಿತ ಅವರಿಂದ ಶಸಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿ ಭಾರತಕ್ಕೆ ಬಂದೆವು. ಅಝಲನ ಶಸಚಿಕಿತ್ಸೆ ಯಶಸ್ವಿಯಾಯಿತು.

    ಡಾ. ಎಂ.ಡಿ. ದೀಕ್ಷಿತ ಅವರು ಅಝಲಗೆ ಹೊಸ ಜೀವನ ನೀಡಿದ್ದಾರೆಂದು ಅಝಲ ತಂದೆ ಸಾಬಿಅಲಿ ಸುಭಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts