More

    ಇಂದಿನಿಂದ ಐಪಿಎಲ್ ಪಂದ್ಯಗಳ ಟಿಕೆಟ್ ಮಾರಾಟ

    ಮುಂಬೈ: ಐಪಿಎಲ್ 15ನೇ ಆವೃತ್ತಿಗೆ ಕೇವಲ 3 ದಿನಗಳ ಬಾಕಿ ಇರುವಾಗ ಟಿಕೆಟ್ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ. ಶನಿವಾರ ನಡೆಯಲಿರುವ ಚೆನ್ನೈ ಸೂಪರ್‌ಕಿಂಗ್ಸ್ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ನಡುವಿನ ಉದ್ಘಾಟನಾ ಪಂದ್ಯದ ಸಹಿತ ಎಲ್ಲ ಪಂದ್ಯಗಳ ಆನ್‌ಲೈನ್ ಟಿಕೆಟ್‌ಗಳ ಮಾರಾಟ ಪ್ರಕ್ರಿಯೆ ಬುಧವಾರ ಆರಂಭಗೊಳ್ಳಲಿದೆ.

    ಐಪಿಎಲ್‌ಗೆ ಶೇ.25ಕ್ಕಿಂತ ಅಧಿಕ ಪ್ರೇಕ್ಷಕರು?
    ಐಪಿಎಲ್ 15ನೇ ಆವೃತ್ತಿಯ ಪಂದ್ಯಗಳನ್ನು ವೀಕ್ಷಿಸಲು ಶೇ. 25ಕ್ಕಿಂತ ಹೆಚ್ಚಿನ ಪ್ರೇಕ್ಷಕರಿಗೆ ಮಹಾರಾಷ್ಟ್ರ ಸರ್ಕಾರ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ. ಆರಂಭಿಕ ಪಂದ್ಯಗಳಿಗೆ ಕ್ರೀಡಾಂಗಣದ ಪ್ರೇಕ್ಷಕ ಸಾಮರ್ಥ್ಯದ ನಾಲ್ಕನೇ ಒಂದು ಭಾಗದಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದರೂ, ಟೂರ್ನಿ ಮುಂದುವರಿದಂತೆ ಈ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.

    ಐಪಿಎಲ್ ಆರಂಭಿಕ ಹಂತದಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 10 ಸಾವಿರ (ಸಾಮರ್ಥ್ಯ 33 ಸಾವಿರ), ಬ್ರಬೋರ್ನ್ ಕ್ರೀಡಾಂಗಣದಲ್ಲಿ 8 ಸಾವಿರ (ಸಾಮರ್ಥ್ಯ 28 ಸಾವಿರ), ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 12 ಸಾವಿರ (ಸಾಮರ್ಥ್ಯ 55 ಸಾವಿರ) ಮತ್ತು ಪುಣೆಯ ಎಂಸಿಎ ಕ್ರೀಡಾಂಗಣದಲ್ಲೂ 12 ಸಾವಿರ (ಸಾಮರ್ಥ್ಯ 37 ಸಾವಿರ) ಪ್ರೇಕ್ಷಕರಿಗೆ ಪ್ರವೇಶ ನೀಡಲಾಗುತ್ತಿದೆ.

    ಇತ್ತೀಚೆಗೆ ಕೋಲ್ಕತ, ಧರ್ಮಶಾಲಾ, ಮೊಹಾಲಿ ಮತ್ತು ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ಕಲ್ಪಿಸಲಾಗಿತ್ತು. ಇದರ ಯಶಸ್ಸನ್ನು ಕಂಡು ಬಿಸಿಸಿಐ, ಕರೊನಾ ಭೀತಿಯ ನಡುವೆ ಐಪಿಎಲ್‌ಗೂ ಹೆಚ್ಚಿನ ಪ್ರೇಕ್ಷಕರ ನಿರೀಕ್ಷೆಯಲ್ಲಿದೆ.

    ಗ್ಲಾಮರ್ ಪ್ರಿಯರಿಗೆ ಈ ಸಲವೂ ನಿರಾಸೆ ತರಲಿದೆ ಐಪಿಎಲ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts