More

    ಐಪಿಎಲ್​ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದ ಪಾಕ್​ ಆಟಗಾರನ್ಯಾರು?!

    ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಮ್ ಅವರು​ ಬಣ್ಣಿಸಿದ್ದಾರೆ.

    ಐಪಿಎಲ್​ ಜಗತ್ತಿನ ಅತಿದೊಡ್ಡ ಕ್ರಿಕೆಟ್​ ಟೂರ್ನಮೆಂಟ್​ ಎಂದ ಪಾಕ್​ ಆಟಗಾರನ್ಯಾರು?!ಪಾಕ್​ ಮಾಜಿ ಕ್ರಿಕೆಟರ್​ ತನ್ವೀರ್​ ಅಹ್ಮದ್​ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಅಕ್ರಮ್​, ಪಾಕಿಸ್ತಾನ ಪ್ರೀಮಿಯರ್​ ಲೀಗ್​ (ಪಿಎಸ್​ಎಲ್​) ಹಾಗೂ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ನಡುವೆ ವ್ಯತ್ಯಾಸ ಇದೆ. ಅದರಲ್ಲೂ ಕಳೆದ ಐದಾರು ವರ್ಷಗಳಲ್ಲಿ ತುಂಬಾನೇ ವ್ಯಾತ್ಯಾಸವಿದೆ. ಅಂತಾರಾಷ್ಟ್ರೀಯ ಟಿ20 ಟೂರ್ನಮೆಂಟ್​ಗಳಿಗೆ ಹೋಲಿಸಿದರೆ, ಐಪಿಎಲ್​ನಲ್ಲಿ ಹೆಚ್ಚು ಹಣವನ್ನು ಹೂಡಲಾಗುತ್ತಿದೆ. ವಿಶ್ವದಲ್ಲೇ ಅತಿದೊಡ್ಡ ಟೂರ್ನಮೆಂಟ್​ ಆಗಿರುವುದಲ್ಲದೆ, ಉತ್ತಮ ಟೂರ್ನಿಯು ಸಹ ಆಗಿದೆ ಎಂದು ಪ್ರಶಂಸಿಸಿದ್ದಾರೆ.

    ಇದನ್ನೂ ಓದಿ: ಲವರ್​ ತಲೆ ಕತ್ತರಿಸಿದ ಮಹಿಳೆ: ಪ್ರೇಮ ವೈಫಲ್ಯವಲ್ಲ, ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!

    ಇನ್ನು ಐಪಿಎಲ್‌ನಿಂದ ಬರುವ ಹಣವನ್ನು ಪ್ರಥಮ ದರ್ಜೆ ಕ್ರಿಕೆಟ್‌ಗೆ ಮರುಹೂಡಿಕೆ ಮಾಡಿತ್ತಿರುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಅಕ್ರಮ್​ ಶ್ಲಾಘಿಸಿದರು. ಇದರಿಂದಲೇ ಒಳ್ಳೆಯ ದೇಶಿ ಪ್ರತಿಭೆಗಳು ಬೆಳಕಿಗೆ ಬರಲು ಸಹಾಯವಾಗುತ್ತಿದೆ ಎಂದರು.

    ಜಸ್ಪ್ರಿತ್​ ಬೂಮ್ರಾ, ಹಾರ್ದಿಕ್​ ಪಾಂಡ್ಯ, ದೀಪಕ್​ ಚಾಹರ್​, ರಿಷಬ್​ ಪಂಥ್​ನಂತ ದೇಶಿ ಆಟಗಾರರು ಐಪಿಎಲ್​ನಲ್ಲಿ ತಮ್ಮ ಕ್ರಿಕೆಟ್​ ಪ್ರಯಾಣ ಆರಂಭಿಸಿ, ಇದೀಗ ರಾಷ್ಟ್ರೀಯ ತಂಡದಲ್ಲೂ ತಮ್ಮ ಛಾಪೂ ಮೂಡಿಸುತ್ತಿರುವುದನ್ನು ಗಮನಿಸಬಹುದಾಗಿದೆ ಎಂದು ತಿಳಿಸಿದರು. ಅಲ್ಲದೆ, ಮಾಜಿ ಕ್ರಿಕೆಟರ್​ಗಳನ್ನು ಕೋಚ್​ಗಳಾಗಿ ನೇಮಕ ಮಾಡಿಕೊಳ್ಳುತ್ತಿರುವುದು ಸಹ ಭಾರತಕ್ಕೆ ವರದಾನವಾಗಿದ್ದು, ಐಪಿಎಲ್​ನಲ್ಲಿ ಒಳ್ಳೆಯ ಪ್ರತಿಭೆಗಳನ್ನು ಹುಟ್ಟುಹಾಕಲು ಸಹಾಯವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಇದನ್ನೂ ಓದಿ: ಕಾರಿನ ಆಸೆಗೆ ಬಿದ್ದು 59 ಸಾವಿರ ರೂ. ಹಣದ ಜತೆಗೆ ಆರೋಗ್ಯವನ್ನು ಕಳೆದುಕೊಂಡ ವ್ಯಕ್ತಿ…!

    ಅಂದಹಾಗೆ ಅಕ್ರಮ್​ ಅವರು ಕೋಲ್ಕತ ನೈಟ್​ ರೈಡರ್ಸ್​ ತಂಡದ ಬೌಲಿಂಗ್​ ಕೋಚ್​ ಆಗಿ ಕೆಲಸ ಮಾಡಿರುವುದರಿಂದ ಐಪಿಎಲ್​ ಮತ್ತು ಪಿಎಸ್​ಎಲ್​ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದಾರೆ. (ಏಜೆನ್ಸೀಸ್​)

    ತಂದೆಯಾದ ಬೆನ್ನಲ್ಲೇ ಭಾರಿ ಟ್ರೋಲ್​ ಆದ ಹಾರ್ದಿಕ್​ ಪಾಂಡ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts