More

    ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆದವರು ಯಾರು ಗೊತ್ತೇ? ಇಲ್ಲಿದೆ ಹರಾಜಿನ ಇತಿಹಾಸ…

    ಚೆನ್ನೈ: ಐಪಿಎಲ್​ 2021ಕ್ಕೆ ದಿನಗಣನೆ ಆರಂಭವಾಗಿದೆ. ತಂಡಗಳ ಹರಾಜು ಪ್ರಕ್ರಿಯೆ ಇಂದು ಚೆನ್ನೈನಲ್ಲಿ ನಡೆಯಲಿದೆ. 2008ರಿಂದ ಐಪಿಎಲ್​ ಕ್ರಿಕೆಟ್​ನ ಹರಾಜು ಹೇಗಿತ್ತು? ಪ್ರತಿ ವರ್ಷ ಯಾರು ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆಗಿದ್ದರು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.

    2008ರಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಎಂಎಸ್​ ಧೋನಿ ಅತಿ ಹೆಚ್ಚು ಮೌಲ್ಯಕ್ಕೆ ಬಿಡ್​ ಆಗಿದ್ದರು. ಅವರಿಗೆ 9.5 ಕೋಟಿ ರೂಪಾಯಿ ಬಿಡ್​ ಮಾಡಲಾಗಿತ್ತು. ನಂತರ 2009ರಲ್ಲಿ ಆರ್​ಸಿಬಿಯ ಕೆವಿನ್ ಪೀಟರ್ಸನ್ ಮತ್ತು ಸಿಎಸ್​ಕೆಯ ಆಂಡ್ರ್ಯೂ ಫ್ಲಿಂಟಾಫ್ ತಲಾ 9.8 ಕೋಟಿ ರೂಪಾಯಿಗೆ ಬಿಡ್​ ಆಗಿದ್ದರು. 2010ರಲ್ಲಿ ಕೆಕೆಆರ್​ನ ಶೇನ್ ಬಾಂಡ್ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ಕೀರನ್ ಪೊಲಾರ್ಡ್ ತಲಾ 4.8 ಕೋಟಿ ರೂಪಾಯಿಗೆ ಬಿಡ್​ ಆಗಿದ್ದರು. 2011ರಲ್ಲಿ ಕೆಕೆಆರ್​ನ ಗೌತಮ್ ಗಂಭೀರ್ 14.9 ಕೋಟಿ ರೂಪಾಯಿಗೆ, 2012ರಲ್ಲಿ ಸಿಎಸ್‌ಕೆಯ ರವೀಂದ್ರ ಜಡೇಜಾ 12.8 ಕೋಟಿ ರೂಪಾಯಿಗೆ, 2013ರಲ್ಲಿ ಎಂಐನ ಗ್ಲೆನ್ ಮ್ಯಾಕ್ಸ್‌ವೆಲ್ 6.3 ಕೋಟಿ ರೂಪಾಯಿಗೆ, 2014ರಲ್ಲಿ ಆರ್‌ಸಿಬಿಯ ಯುವರಾಜ್ ಸಿಂಗ್ 14 ಕೋಟಿ ರೂಪಾಯಿಗೆ, 2015ರಲ್ಲಿ ಡಿಡಿಯ ಯುವರಾಜ್ ಸಿಂಗ್ 16 ಕೋಟಿ ರೂಪಾಯಿಗೆ, 2016ರಲ್ಲಿ ಆರ್‌ಸಿಬಿಯ ಶೇನ್ ವ್ಯಾಟ್ಸನ್ 9.5 ಕೋಟಿ ರೂಪಾಯಿಗೆ, 2017ರಲ್ಲಿ ಆರ್‌ಪಿಎಸ್​ನ ಬೆನ್ ಸ್ಟೋಕ್ಸ್ 14.5 ಕೋಟಿ ರೂಪಾಯಿಗೆ, 2018ರಲ್ಲಿ ಆರ್​ಆರ್​ನ ಬೆನ್ ಸ್ಟೋಕ್ಸ್ 12.5 ಕೋಟಿ ರೂಪಾಯಿಗೆ ಬಿಡ್​ ಹಾಗಿದ್ದರು.

    2019 ಆರ್​ಆರ್​ ತಂಡಕ್ಕೆ ಜಯದೇವ್ ಉನಾದ್ಕಟ್​ರನ್ನು ಮತ್ತು ಕೆಎಕ್ಸ್‌ಐಪಿ ತಂಡಕ್ಕೆ ವರುಣ್ ಚಕ್ರವರ್ತಿಯನ್ನು ತಲಾ 8.4 ಕೋಟಿ ರೂಪಾಯಿಗೆ ಬಿಡ್​ ಮಾಡಲಾಗಿತ್ತು. ಕಳೆದ ವರ್ಷ ಅಂದರೆ 2020ರಲ್ಲಿ ಕೆಕೆಆರ್​ ತಂಡಕ್ಕೆ ಪ್ಯಾಟ್ ಕಮ್ಮಿನ್ಸ್ 15.5 ಕೋಟಿ ರೂಪಾಯಿಗೆ ಬಿಡ್​ ಆಗಿದ್ದರು. 2015ರಲ್ಲಿ ಡಿಡಿ ತಂಡದಿಂದ ಯುವರಾಜ್​ಗೆ ಮಾಡಲಾದ 16 ಕೋಟಿ ರೂಪಾಯಿಯ ಬಿಡ್​ ಈವರೆಗಿನ ಅತಿ ಹೆಚ್ಚು ಮೌಲ್ಯದ ಬಿಡ್​ ಆಗಿದೆ. ಈ ವರ್ಷ ಈ ದಾಖಲೆ ಮುರಿದುಬೀಳಲಿದೆಯೇ ಎನ್ನುವುದು ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ. (ಏಜೆನ್ಸೀಸ್​)

    ಪ್ರಮಾಣ ವಚನ ಸ್ವೀಕರಿಸಲು ಹೆಲಿಕಾಪ್ಟರ್​ನಲ್ಲಿ ಆಗಮಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ!

    ಬಿಜೆಪಿ ಸೇರಲು ಸಜ್ಜಾದ ‘ಮೆಟ್ರೊ ಮ್ಯಾನ್’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts