More

    ಐಪಿಎಲ್​​​​-2022: ಗೆದ್ದ ತಂಡಕ್ಕೆ ಸಿಗಲಿದೆ ಭಾರೀ ಮೊತ್ತದ ಬಹುಮಾನ, ​ಸೋತರೂ ಸಿಗುತ್ತಾ ಇಷ್ಟು ಹಣ! ಇಲ್ಲಿದೆ ಮಾಹಿತಿ

    ನವದೆಹಲಿ: ಐಪಿಎಲ್​​​ ಹೆಸರು ಕೇಳಿದರೆ ಸಾಕು ​​​ ಕ್ರೀಡಾಭಿಮಾನಿಗಳಲ್ಲಿ ಸಂಚಲನವನ್ನೇ ಮೂಡಿಸುತ್ತದೆ. ಸದ್ಯ ಐಪಿಎಲ್​​​ -2022ರ ಫೈನಲ್​ ಪಂದ್ಯ ಭಾನುವಾರ ನಡೆಯಲಿದ್ದು, ಕೊನೆ ಪಂದ್ಯ ವೀಕ್ಷಿಸಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.

    ಶ್ರೀಮಂತ ಕ್ರಿಕೆಟ್​ ಎಂದೇ ಕರೆಸಿಕೊಳ್ಳುವ ಐಪಿಎಲ್​​ ಪಂದ್ಯಗಳಲ್ಲಿ ಗೆದ್ದವರು ಹಾಗೂ ಸೋತವರಿಗೂ ಹಣದ ಸುರಿಮಳೆಯೇ ಹರಿಸಲಾಗುತ್ತದೆ. ಇಲ್ಲಿ ಗೆಲುವು ದಾಖಲಿಸಿದ ತಂಡ ಮಾತ್ರ ಹಣ ಪಡೆಯುವುದಿಲ್ಲ, ಸೋತ ತಂಡಕ್ಕೂ ಭರ್ಜರಿ ಬಹುಮಾನವಿದ್ದು, ಸೋತ ತಂಡದ ಆಟಗಾರರಿಗೂ ಕೋಟ್ಯಾಂತರ ರೂ. ಸಿಗಲಿದೆ.

    ಬನ್ನಿ ನೋಡೋಣ ಐಪಿಎಲ್​ ಪಂದ್ಯದಲ್ಲಿ ಗೆಲುವು ಸಾಧಿಸುವ ಹಾಗೂ ಸೋಲನುಭವಿಸುವ ಪಂದ್ಯಗಳಿಗೆ ಎಷ್ಟು ಹಣ ಸಿಗುತ್ತೆ ಎಂಬ ವಿವರ ಇಲ್ಲಿದೆ. ಅಷ್ಟೇ ಅಲ್ಲದೇ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿರುವ ತಂಡಗಳಿಗೆ ಬಿಸಿಸಿಐ ಭಾರೀ ಮೊತ್ತದ ಬಹುಮಾನವನ್ನು ನೀಡುತ್ತದೆ.

    ಐಪಿಎಲ್​ ಪಂದ್ಯಾವಳಿಯಲ್ಲಿ ವಿಜೇತಗೊಳ್ಳುವ ತಂಡಕ್ಕೆ ಬಿಸಿಸಿಐ 20 ಕೋಟಿ ರೂ. ಬಹುಮಾನ ನೀಡಲಿದೆ. ಇದಲ್ಲದೇ ಪಂದ್ಯ ಗೆಲುವು ಕಂಡ ಕ್ಷಣವೇ 7 ಕೋಟಿ ರೂ. ಸಿಗಲಿದೆ.

    ರನ್ನರ್​​ ಅಪ್​ ತಂಡಕ್ಕೆ ಬಿಸಿಸಿಐ 13 ಕೋಟಿ ನೀಡಲಿದೆ. ಮೂರನೇ ಸ್ಥಾನಕ್ಕೆ 7 ಕೋಟಿ ರೂ. ಸಿಗಲಿದೆ. ಸದ್ಯ ಮೂರನೇ ಸ್ಥಾನದಲ್ಲಿ ಆರ್​ಸಿಬಿ ತಂಡವಿದೆ.

    4ನೇ ಸ್ಥಾನಕ್ಕೆ 6.5 ಕೋಟಿ ರೂ. ಆರೆಂಜ್​ ಕಪ್​​ 15 ಲಕ್ಷ ರೂ. ಪರ್ಪಲ್​ ಕಪ್​​ ಪಡೆದಿರುವ ಬೌಲರ್​​ಗೆ 15 ಲಕ್ಷ ರೂ. ಹಣವನ್ನು ಬಿಸಿಸಿಐ ನೀಡಲಿದೆಯಂತೆ.

    ಅತೀ ಹೆಚ್ಚು ಸಿಕ್ಸ್​​ ಪಡೆದವರಿಗೆ 12 ಲಕ್ಷ ರೂ. ಗೇಮ್​ ಚೇಂಜರ್​ಗೆ 12 ಲಕ್ಷ ರೂ. ಇಡೀ ಪಂದ್ಯಾವಳಿಯಲ್ಲಿ ಉತ್ತಮ ಆಟಗಾರ ಎನಿಸಿಕೊಂಡಿರುವರಿಗೆ 12 ಲಕ್ಷ ರೂ.ಹಣವನ್ನು ನೀಡಲಾಗುತ್ತದೆ. ಒಟ್ಟಾರೆ ಇಲ್ಲಿ ಸೋತವರಿಗೂ ಹಾಗೂ ಗೆದ್ದವರಿಗೂ ಹಣ ಸಿಗುವುದಂತೂ ಸತ್ಯ.

    ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಗುಜರಾತ್​ ಟೈಟಾನ್ಸ್​ ಮತ್ತು ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​ ತಂಡದ ನಡುವೆ ಗುಜರಾತಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್​ ಹಣಾಹಣಿ ನಡೆಯಲಿದೆ. (ಏಜೆನ್ಸೀಸ್​)

    ಇಂದು ಗುಜರಾತ್ ಟೈಟಾನ್ಸ್ -ರಾಜಸ್ಥಾನ ರಾಯಲ್ಸ್ ಪ್ರಶಸ್ತಿ ಕದನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts