More

    ಸಿಡಿದ ದಿನೇಶ್ ಕಾರ್ತಿಕ್, ಮ್ಯಾಕ್ಸ್‌ವೆಲ್; ಡೆಲ್ಲಿ ಎದುರು ಆರ್‌ಸಿಬಿಗೆ 16 ರನ್ ಜಯ

    ಮುಂಬೈ: ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರಲ್ಲಿ ಮತ್ತೆ ಗೆಲುವಿನ ಹಾದಿ ಹಿಡಿಯಿತು. ಆರಂಭಿಕ ವೈಲ್ಯದ ನಡುವೆಯೂ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ (66*ರನ್, 34 ಎಸೆತ, 5 ಬೌಂಡರಿ, 5 ಸಿಕ್ಸರ್) ಹಾಗೂ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (55ರನ್, 34 ಎಸೆತ, 7 ಬೌಂಡರಿ, 2 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ಹಾಗೂ ಜೋಶ್ ಹ್ಯಾಸಲ್‌ವುಡ್ (28ಕ್ಕೆ 3) ಮಾರಕ ದಾಳಿ ನೆರವಿನಿಂದ ಪ್ಲೆಸಿಸ್ ಬಳಗ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 16 ರನ್‌ಗಳಿಂದ ಮಣಿಸಿತು.

    ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, 5 ವಿಕೆಟ್‌ಗೆ 189 ರನ್ ಪೇರಿಸಿತು. ಪ್ರತಿಯಾಗಿ ಡೆಲ್ಲಿ ತಂಡ ಡೇವಿಡ್ ವಾರ್ನರ್ (66 ರನ್, 38 ಎಸೆತ, 4 ಬೌಂಡರಿ, 5 ಸಿಕ್ಸರ್) ಒದಗಿಸಿದ ಬಿರುಸಿನ ಆರಂಭದ ನಡುವೆಯೂ 7 ವಿಕೆಟ್‌ಗೆ 173 ರನ್‌ಗಳಿಸಲಷ್ಟೇ ಶಕ್ತವಾಯಿತು.

    ಆರ್‌ಸಿಬಿ: 5 ವಿಕೆಟ್‌ಗೆ 189 (ಮ್ಯಾಕ್ಸ್‌ವೆಲ್ 55, ದಿನೇಶ್ ಕಾರ್ತಿ 66*, ಶಾಬಾಜ್ ಅಹಮದ್ 32*, ಶಾರ್ದೂಲ್ ಠಾಕೂರ್ 27ಕ್ಕೆ 1, ಅಕ್ಷರ್ ಪಟೇಲ್ 29ಕ್ಕೆ 1), ಡೆಲ್ಲಿ ಕ್ಯಾಪಿಟಲ್ಸ್: 7 ವಿಕೆಟ್‌ಗೆ 173 (ಡೇವಿಡ್ ವಾರ್ನರ್ 66, ರಿಷಭ್ ಪಂತ್ 34, ಜೋಸ್ ಹ್ಯಾಸಲ್‌ವುಡ್ 28ಕ್ಕೆ 3, ಮೊಹಮದ್ ಸಿರಾಜ್ 31ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts