More

    ಇಂದು ಲಖನೌ ಸೂಪರ್‌ಜೈಂಟ್ಸ್-ಸನ್‌ರೈಸರ್ಸ್‌ ಹೈದರಾಬಾದ್ ಫೈಟ್

    ಮುಂಬೈ: ಗೆಲುವಿನ ಖಾತೆ ತೆರೆಯುವ ಹಂಬಲದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ ಹಾಗೂ ಮೊದಲ ಗೆಲುವಿನ ಸವಿ ಕಂಡಿರುವ ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್‌ಜೈಂಟ್ಸ್ ತಂಡಗಳು ಐಪಿಎಲ್-15ರ ಪಂದ್ಯದಲ್ಲಿ ಸೋಮವಾರ ಎದುರಾಗಲಿವೆ. ಮೊದಲ ಪಂದ್ಯದಲ್ಲಿ ನಿರಾಸೆ ಕಂಡ ಬಳಿಕ ಎರಡನೇ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿ ಎಲ್‌ಎಸ್‌ಜಿ ಗೆಲುವಿನ ಹಳಿಗೇರಿದೆ. ಸಿಎಸ್‌ಕೆ ನೀಡಿದ ಬೃಹತ್ ಮೊತ್ತ ಬೆನ್ನಟ್ಟಿದ ವಿಶ್ವಾಸದಲ್ಲಿರುವ ರಾಹುಲ್ ಪಡೆ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಆಲ್ರೌಂಡರ್ ಜೇಸನ್ ಹೋಲ್ಡರ್ ಆಗಮನದಿಂದಾಗಿ ತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ.

    • ಆತ್ಮವಿಶ್ವಾಸದಲ್ಲಿ ಎಲ್‌ಎಸ್‌ಜಿ
      ಆರಂಭಿಕ ಬ್ಯಾಟರ್‌ಗಳಾದ ಕ್ವಿಂಟನ್ ಡಿಕಾಕ್, ಕೆಎಲ್ ರಾಹುಲ್, ವೆಸ್ಟ್ ಇಂಡೀಸ್ ಬ್ಯಾಟರ್ ಎವಿನ್ ಲೆವಿಸ್, ಯುವ ಬ್ಯಾಟರ್ ಆಯುಷ್ ಬಡೋನಿ ಸಾಹಸದಿಂದಾಗಿ ಎಲ್‌ಎಸ್‌ಜಿ ತಂಡ ಸಿಎಸ್‌ಕೆ ಬೌಲರ್‌ಗಳನ್ನು ಬೆಂಡೆತ್ತಿತ್ತು. ಕನ್ನಡಿಗ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕದಲ್ಲಿ ಇದುವರೆಗೂ ಸ್ಫೋಟಿಸಿಲ್ಲ. ಕೃನಾಲ್ ಪಾಂಡ್ಯ ಸಿಕ್ಕ ಅವಕಾಶ ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಜೇಸನ್ ಹೋಲ್ಡರ್ ಸೇರ್ಪಡೆ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದೆ. ಬೌಲಿಂಗ್‌ನಲ್ಲಿ ಆವೇಶ್ ಖಾನ್, ಶ್ರೀಲಂಕಾದ ದುಶ್ಮಂತ ಚಮೀರಾ, ಆಂಡ್ರ್ಯೋ ಟೈ, ರವಿ ಬಿಷ್ಣೋಯಿ ಗಮನಸೆಳೆದಿದ್ದಾರೆ.
    • ಸನ್‌ರೈಸರ್ಸ್‌ಗೆ ಗೆಲುವಿನ ಜಪ
      ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್‌ ತಂಡ 61 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸಿತ್ತು. ವೇಗಿ ಭುವನೇಶ್ವರ್ ಕುಮಾರ್, ರೊಮಾರಿಯೊ ಶೆರ್ಡ್, ಉಮ್ರಾನ್ ಮಲಿಕ್, ಟಿ.ನಟರಾಜನ್, ವಾಷಿಂಗ್ಟನ್ ಸುಂದರ್ ಒಳಗೊಂಡ ಅನುಭವಿ ಬೌಲಿಂಗ್ ಪಡೆಯೇ ದುಬಾರಿಯಾಗಿತ್ತು. ಕೇನ್ ವಿಲಿಯಮ್ಸನ್, ರಾಹುಲ್ ತ್ರಿಪಾಠಿ, ನಿಕೋಲಸ್ ಪೂರನ್, ಅಬ್ದುಲ್ ಸಮದ್ ಹಾಗೂ ಅಭಿಷೇಕ್ ಶರ್ಮ ಒಳಗೊಂಡ ಬ್ಯಾಟಿಂಗ್ ಪಡೆ ಪುಟಿದೇಳುವ ವಿಶ್ವಾಸದಲ್ಲಿದೆ.

    ಟೀಮ್ ನ್ಯೂಸ್:
    ಲಖನೌ ಸೂಪರ್‌ಜೈಂಟ್ಸ್: ಆಲ್ರೌಂಡರ್ ಜೇಸನ್ ಹೋಲ್ಡರ್ ತಂಡ ಕೂಡಿಕೊಂಡಿದ್ದಾರೆ. ಇದರಿಂದ ಆರಂಭಿಕ 2 ಪಂದ್ಯಗಳಲ್ಲಿ ಕೇವಲ 3 ವಿದೇಶಿಗರೊಂದಿಗೆ ಆಡಿದ್ದ ಎಲ್‌ಎಸ್‌ಜಿ, ಇದೀಗ 4 ವಿದೇಶಿ ಕೋಟಾವನ್ನು ಭರ್ತಿ ಮಾಡಿಕೊಳ್ಳಲಿದೆ.

    ಸನ್‌ರೈಸರ್ಸ್‌: ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದರೂ ಹಿಂದಿನ ಪಂದ್ಯದಲ್ಲಿ ಆಡಿದ ತಂಡವನ್ನೇ ಮತ್ತೊಮ್ಮೆ ಕಣಕ್ಕಿಳಿಸಬಹುದು. ಕನ್ನಡಿಗರಾದ ಶ್ರೇಯಸ್ ಗೋಪಾಲ್ ಹಾಗೂ ಜೆ.ಸುಚಿತ್ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

    ಪಂದ್ಯ ಆರಂಭ: ರಾತ್ರಿ 7.30ಕ್ಕೆ
    ನೇರಪ್ರಸಾರ : ಸ್ಟಾರ್ ಸ್ಪೋರ್ಟ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts