More

    ಲಖನೌ ಸೂಪರ್‌ಜೈಂಟ್ಸ್ ಮಣಿಸಿ 2ನೇ ಕ್ವಾಲಿಫೈಯರ್ ಪ್ರವೇಶಿಸಿದ ಆರ್‌ಸಿಬಿ

    ಕೋಲ್ಕತ: ಲಖನೌ ಸೂಪರ್‌ಜೈಂಟ್ಸ್ ತಂಡದ ಪ್ರತಿಹೋರಾಟದ ನಡುವೆಯೂ ಬಿಗಿ ಹಿಡಿತ ಸಾಧಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ಎಲಿಮಿನೇಟರ್ ಹಣಾಹಣಿಯಲ್ಲಿ 14 ರನ್‌ಗಳಿಂದ ಗೆಲುವು ದಾಖಲಿಸಿ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು. ಇದರೊಂದಿಗೆ 2016ರ ಬಳಿಕ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಆರಂಭಿಕ ಆಘಾತದ ನಡುವೆಯೂ ರಜತ್ ಪಾಟಿದಾರ್ (112*ರನ್, 54 ಎಸೆತ, 12 ಬೌಂಡರಿ, 7 ಸಿಕ್ಸರ್) ಅಜೇಯ ಶತಕದಾಟ ಹಾಗೂ ಅನುಭವಿ ದಿನೇಶ್ ಕಾರ್ತಿಕ್ (37*ರನ್, 23 ಎಸೆತ, 5 ಬೌಂಡರಿ, 1 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಫಲವಾಗಿ 4 ವಿಕೆಟ್‌ಗೆ 207 ರನ್ ಕಲೆಹಾಕಿತು. ಈ ಜೋಡಿ ಕಡೇ 5 ಓವರ್‌ಗಳಲ್ಲಿ 84 ರನ್ ದೋಚಿತು. ಪ್ರತಿಯಾಗಿ ಕನ್ನಡಿಗ ಕೆಎಲ್ ರಾಹುಲ್ (79 ರನ್, 58 ಎಸೆತ, 3 ಬೌಂಡರಿ, 5 ಸಿಕ್ಸರ್) ಹಾಗೂ ದೀಪಕ್ ಹೂಡಾ (45ರನ್, 26 ಎಸೆತ, 1 ಬೌಂಡರಿ, 4 ಸಿಕ್ಸರ್) ಪ್ರತಿಹೋರಾಟದ ನಡುವೆಯೂ 6 ವಿಕೆಟ್‌ಗೆ 193 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

    *ರಾಹುಲ್-ದೀಪಕ್ ಹೋರಾಟ ವ್ಯರ್ಥ
    ಕ್ವಿಂಟನ್ ಡಿಕಾಕ್ ಸಿಕ್ಸರ್ ಸಿಡಿಸಿ ಬಿರುಸಿನ ಆರಂಭ ಪಡೆಯಲು ಯತ್ನಿಸಿದರೂ ಮೊದಲ ಓವರ್‌ನಲ್ಲೇ ವಿಕೆಟ್ ವಿಕೆಟ್ ಒಪ್ಪಿಸಿದರು. ಮನನ್ ವೊಹ್ರಾ (19) ಕೆಲಕಾಲ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ನಿರ್ಗಮಿಸಿದರು. ಇದರಿಂದ 41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಲಖನೌ ಆರಂಭಿಕ ಆಘಾತ ಕಂಡಿತು. ಬಳಿಕ ನಾಯಕ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಜೋಡಿ ಆರ್‌ಸಿಬಿ ಬೌಲರ್‌ಗಳಿಗೆ ತಿರುಗೇಟು ನೀಡಿತು. ಗೆಲುವಿಗಾಗಿ ಮೈಂಡ್‌ಗೇಮ್ ಆಟ ಆಡಿದ ಈ ಜೋಡಿ ಇನಿಂಗ್ಸ್ ಸಾಗುತ್ತಿದ್ದಂತೆ ರನ್ ಹಿಗ್ಗಿಸುತ್ತಾ ಸಾಗಿತು. ಆರ್‌ಸಿಬಿ ಬೌಲರ್‌ಗಳಿಗೆ ತಲೆನೋವಾಗಿದ್ದ ಈ ಜೋಡಿಗೆ ಹಸರಂಗ ಬ್ರೇಕ್ ಹಾಕಿದರು. ರಾಹುಲ್-ದೀಪಕ್ ಎದುರಿಸಿದ 61 ಎಸೆತಗಳಲ್ಲಿ 96 ರನ್ ಕಲೆಹಾಕಿತು. ಮಾರ್ಕಸ್ ಸ್ಟೋಯಿನಿಸ್ (9) ವಿಫಲರಾದರು. ಇದರ ಬೆನ್ನಲ್ಲೇ ರಾಹುಲ್ ಹಾಗೂ ಕೃನಾಲ್ ಪಾಂಡ್ಯ (0) ನಿರ್ಗಮಿಸಿದರು. ರಾಹುಲ್ ಔಟಾಗುವ ಮೂಲಕ ಆರ್‌ಸಿಬಿಗೆ ಗೆಲುವು ಖಾತ್ರಿಗೊಂಡಿತು.

    ಲಖನೌ ಸೂಪರ್‌ಜೈಂಟ್ಸ್ ಮಣಿಸಿ 2ನೇ ಕ್ವಾಲಿಫೈಯರ್ ಪ್ರವೇಶಿಸಿದ ಆರ್‌ಸಿಬಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts