More

    ಮಿಲ್ಲರ್, ರಶೀದ್ ಖಾನ್ ಸಾಹಸಿಕ ಬ್ಯಾಟಿಂಗ್‌ಗೆ ಸಿಎಸ್‌ಕೆ ತತ್ತರ; ಗುಜರಾತ್ ಟೈಟಾನ್ಸ್‌ಗೆ 3 ವಿಕೆಟ್ ಜಯ

    ಪುಣೆ: ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ (94*ರನ್, 51 ಎಸೆತ, 8ಬೌಂಡರಿ, 6 ಸಿಕ್ಸರ್) ಹಾಗೂ ಹಂಗಾಮಿ ನಾಯಕ ರಶೀದ್ ಖಾನ್ (40ರನ್, 21 ಎಸೆತ, 2 ಬೌಂಡರಿ, 3 ಸಿಕ್ಸರ್) ಜೋಡಿಯ ಪ್ರತಿಹೋರಾಟದ ಫಲವಾಗಿ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಎದುರು 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಆರಂಭಿಕ ಆಘಾತದಿಂದ ತತ್ತರಿಸಿದರೂ ಮಿಲ್ಲರ್ ಏಕಾಂಗಿಯಾಗಿ ಹೋರಾಡಿದರು. ಗುಜರಾತ್ ತಂಡ ಜಯಿಸಲು ಕಡೇ 3 ಓವರ್‌ಗಳಲ್ಲಿ 42 ರನ್‌ಗಳ ಅವಶ್ಯಕತೆಯಿತು. ಕ್ರಿಸ್ ಜೋರ್ಡಾನ್ ಎಸೆತದ 18ನೇ ಓವರ್‌ನಲ್ಲಿ 3 ಸಿಕ್ಸರ್, 1 ಬೌಂಡರಿ ಒಳಗೊಂಡಂತೆ 25 ರನ್ ಕಸಿದ ರಶೀದ್ ಖಾನ್ ಪಂದ್ಯಕ್ಕೆ ತಿರುವು ನೀಡಿದರು. ಮತ್ತೊಂದೆಡೆ, ಲೀಗ್‌ನಲ್ಲಿ 5ನೇ ಸೋಲು ಹಾಲಿ ಚಾಂಪಿಯನ್ ಸಿಎಸ್‌ಕೆ ತಂಡದ ಮುಂದಿನ ಹಾದಿ ಮತ್ತಷ್ಟು ಕಠಿಣಗೊಂಡಿತು.

    ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ, ಕಳೆದ ಆವೃತ್ತಿಯ ಆರೆಂಜ್ ಕ್ಯಾಪ್ ವಿಜೇತ ಹಾಗೂ ಆರಂಭಿಕ ಋತುರಾಜ್ ಗಾಯಕ್ವಾಡ್ (73ರನ್, 48 ಎಸೆತ, 5 ಬೌಂಡರಿ, 5 ಸಿಕ್ಸರ್) ಜವಾಬ್ದಾರಿಯುತ ನಿರ್ವಹಣೆ ಮತ್ತು ಅನುಭವಿ ಅಂಬಟಿ ರಾಯುಡು (46ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್) ನೆರವಿನಿಂದ 5 ವಿಕೆಟ್‌ಗೆ 169 ರನ್ ಕಲೆಹಾಕಿತು.

    ಸಿಎಸ್‌ಕೆ: 5 ವಿಕೆಟ್‌ಗೆ 169 (ಋತುರಾಜ್ ಗಾಯಕ್ವಾಡ್ 73, ಅಂಬಟಿ ರಾಯುಡು 46, ಶಿವಂ ದುಬೆ 19, ರವೀಂದ್ರ ಜಡೇಜಾ 22*, ಅಲ್ಜಾರಿ ಜೋಸ್ೆ 34ಕ್ಕೆ 2, ಯಶ್ ದಯಾಳ್ 40ಕ್ಕೆ 1, ಮೊಹಮದ್ ಶಮಿ 20ಕ್ಕೆ 1), ಗುಜರಾತ್ ಟೈಟಾನ್ಸ್: 19.5 ಓವರ್‌ಗಳಲ್ಲಿ 7 ವಿಕೆಟ್‌ಗೆ 170 (ಡೇವಿಡ್ ಮಿಲ್ಲರ್ 94*, ರಶೀದ್ ಖಾನ್ 40, ಡ್ವೇನ್ ಬ್ರಾವೊ 23ಕ್ಕೆ 3, ಮಹೀಶ ತೀಕ್ಷಣ 24ಕ್ಕೆ 2).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts