More

    ಕುತೂಹಲ ಹೆಚ್ಚಿಸಿದೆ ಐಪಿಎಲ್, 48 ಪಂದ್ಯ ಮುಗಿದರೂ, ಯಾರಿಗೂ ಪ್ಲೇಆಫ್​ ಸ್ಥಾನ ಖಚಿತವಾಗಿಲ್ಲ!

    ಬೆಂಗಳೂರು: ಐಪಿಎಲ್ 13ನೇ ಆವೃತ್ತಿಯಲ್ಲಿ ಈಗಾಗಲೆ 48 ಪಂದ್ಯಗಳು ಮುಗಿದಿದ್ದು, ಗುರುವಾರ ರಾತ್ರಿ 49ನೇ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯದ ಫಲಿತಾಂಶದ ಬಳಿಕವೂ ಯಾವ ತಂಡಕ್ಕೂ ಪ್ಲೇಆಫ್​ ಸ್ಥಾನ ಅಧಿಕೃತವಾಗಿ ಖಚಿತವಾಗುವುದಿಲ್ಲ. ಅಲ್ಲದೆ, ಯಾವ 2 ತಂಡಗಳು ಅಗ್ರ 2 ಸ್ಥಾನಗಳನ್ನು ಸಂಪಾದಿಸಬಹುದು ಎಂಬುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ. ಹೀಗಾಗಿ ಈ ಬಾರಿಯ ಟೂರ್ನಿಯಲ್ಲಿ ಪ್ಲೇಆಫ್​ ರೇಸ್ ಅತ್ಯಂತ ಕುತೂಹಲ ಸೃಷ್ಟಿಸಿದೆ.

    ಹಾಲಿ ಲೆಕ್ಕಾಚಾರದ ಪ್ರಕಾರ ಚೆನ್ನೈ ಸೂಪರ್‌ಕಿಂಗ್ಸ್ ತಂಡ ಮಾತ್ರ ಸದ್ಯ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಉಳಿದ 7 ತಂಡಗಳಿಗೆ ಇನ್ನೂ ಪ್ಲೇಆಫ್​ ಹಂತಕ್ಕೇರುವ ಆಸೆ ಜೀವಂತವಾಗಿದ್ದು, ಯಾವ ತಂಡಕ್ಕೂ ಪ್ಲೇಆಫ್​ ಖಚಿತವಾಗಿಲ್ಲ. ಆದರೆ ಬುಧವಾರದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಆರ್‌ಸಿಬಿ ವಿರುದ್ಧ ಗೆದ್ದ ಬಳಿಕ ಪ್ಲೇಆಫ್​ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಲೆಕ್ಕಾಚಾರಗಳ ಪ್ರಕಾರ ಮುಂಬೈ ಇನ್ನು ಹೊರಬೀಳುವ ಸಾಧ್ಯತೆ ಇಲ್ಲ. ಆದರೆ ಮುಂಬೈ 16 ಅಂಕಗಳನ್ನು ಸಂಪಾದಿಸಿದ ಬಳಿಕವೂ ಪ್ಲೇಆಫ್​ ಸ್ಥಾನ ಅಧಿಕೃತವಾಗಿ ಇನ್ನೂ ಖಚಿತವಾಗಿಲ್ಲ. ಗುರುವಾರದ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ ಸಿಎಸ್​ಕೆ ಗೆದ್ದರಷ್ಟೇ ಮುಂಬೈ ತಂಡದ ಪ್ಲೇಆಫ್​ ಪ್ರವೇಶವೂ ಅಧಿಕೃತವಾಗಿ ಖಚಿತವಾಗಲಿದೆ. ಆಗ ಐಪಿಎಲ್​ ಅಂಕಪಟ್ಟಿಯಲ್ಲಿ ಮುಂಬೈ ಹೆಸರಿನ ಎದುರು ‘ಕ್ಯೂ’ (ಕ್ವಾಲಿಫೈಡ್​) ಎಂದು ಅಧಿಕೃತವಾಗಿ ದಾಖಲಾಗಲಿದೆ.

    ಹಾಲಿ ಅಂಕಪಟ್ಟಿಯನ್ನು ಗಮನಿಸಿದಾಗ 5 ತಂಡಗಳಿಗೆ ಒಟ್ಟು ಗರಿಷ್ಠ 16 ಅಂಕಗಳನ್ನು ಕಲೆಹಾಕುವ ಅವಕಾಶವಿದೆ. ಮುಂಬೈ ಈಗಾಗಲೆ 16 ಅಂಕ ಕಲೆಹಾಕಿದೆ. ಇನ್ನು ಆರ್‌ಸಿಬಿ, ಡೆಲ್ಲಿ, ಪಂಜಾಬ್ ಮತ್ತು ಕೆಕೆಆರ್ ಕೂಡ 16 ಅಂಕ ಗಳಿಸಬಹುದಾಗಿದೆ. ಇನ್ನು ಸನ್‌ರೈಸರ್ಸ್‌ ಮತ್ತು ರಾಜಸ್ಥಾನ ತಂಡಗಳು ಗರಿಷ್ಠ 14 ಅಂಕಗಳನ್ನಷ್ಟೇ ಗಳಿಸಬಹುದಾದರೂ ಪ್ಲೇಆಫ್​ ಆಸೆ ಇನ್ನೂ ಜೀವಂತವಾಗಿಯೇ ಇದೆ.

    ಟೂರ್ನಿಯಲ್ಲಿ ಇನ್ನೂ 8 ಲೀಗ್ ಪಂದ್ಯಗಳು ಬಾಕಿ ಉಳಿದಿದ್ದು, ಪ್ಲೇಆಫ್​ ಹಂತಕ್ಕೇರಲು ಅಂಕ ಗಳಿಕೆಯ ಜತೆಗೆ ರನ್‌ರೇಟ್ ನಿರ್ಣಾಯಕ ಪಾತ್ರ ನಿರ್ವಹಿಸುವ ಸಾಧ್ಯತೆ ಇದೆ. ಇದರಿಂದ ಗರಿಷ್ಠ 16 ಅಂಕ ಗಳಿಸಿದ ತಂಡವೂ ಉತ್ತಮ ರನ್‌ರೇಟ್ ಹೊಂದಿರದಿದ್ದರೆ, ಪ್ಲೇಆಫ್​ ಹಂತಕ್ಕೇರದೆ ಲೀಗ್‌ನಲ್ಲೇ ಹೊರಬೀಳುವ ಅಪಾಯವೂ ಇದೆ.

    ಪ್ಲೇಆಫ್​ ರೇಸ್​ನಲ್ಲಿರುವ 7 ತಂಡಗಳ ಬಾಕಿ ಇರುವ ಪಂದ್ಯಗಳು:
    ಮುಂಬೈ ಇಂಡಿಯನ್ಸ್: ಅ. 31: ಡೆಲ್ಲಿ (ದುಬೈ); ನ. 3: ಸನ್‌ರೈಸರ್ಸ್‌ (ಶಾರ್ಜಾ).
    ಆರ್‌ಸಿಬಿ: ಅ. 31: ಸನ್‌ರೈಸರ್ಸ್‌ (ಶಾರ್ಜಾ); ನ. 2: ಡೆಲ್ಲಿ (ಅಬುಧಾಬಿ).
    ಡೆಲ್ಲಿ ಕ್ಯಾಪಿಟಲ್ಸ್: ಅ. 31: ಮುಂಬೈ (ದುಬೈ); ನ. 2: ಆರ್‌ಸಿಬಿ (ಅಬುಧಾಬಿ).
    ಕಿಂಗ್ಸ್ ಇಲೆವೆನ್ ಪಂಜಾಬ್: ಅ. 30: ರಾಜಸ್ಥಾನ (ಅಬುಧಾಬಿ); ನ. 1: ಸಿಎಸ್‌ಕೆ (ಅಬುಧಾಬಿ).
    ಕೆಕೆಆರ್: ಅ. 29: ಸಿಎಸ್‌ಕೆ (ದುಬೈ); ನ.1: ರಾಜಸ್ಥಾನ (ದುಬೈ).
    ಸನ್‌ರೈಸರ್ಸ್‌: ಅ. 31: ಆರ್‌ಸಿಬಿ (ಶಾರ್ಜಾ); ನ. 3: ಮುಂಬೈ (ಶಾರ್ಜಾ).
    ರಾಜಸ್ಥಾನ ರಾಯಲ್ಸ್: ಅ. 30: ಕಿಂಗ್ಸ್ ಇಲೆವೆನ್ (ಅಬುಧಾಬಿ); ನ. 1: ಕೆಕೆಆರ್ (ದುಬೈ).

    ಮುಂದಿನ 8 ಲೀಗ್ ಪಂದ್ಯಗಳ ಫಲಿತಾಂಶದ ಆಧಾರದಲ್ಲಿ ಪ್ಲೇಆಫ್​ ಹಂತಕ್ಕೇರುವ ತಂಡಗಳ ಸಾಧ್ಯತೆಯ ಲೆಕ್ಕಾಚಾರಗಳು ಇಲ್ಲಿವೆ:

    ಲೆಕ್ಕಾಚಾರ-1:
    ಸಿಎಸ್‌ಕೆ ವಿರುದ್ಧ ಕೆಕೆಆರ್ ಗೆದ್ದರೆ,
    ರಾಜಸ್ಥಾನ ವಿರುದ್ಧ ಪಂಜಾಬ್ ಗೆದ್ದರೆ,
    ಮುಂಬೈ ವಿರುದ್ಧ ಡೆಲ್ಲಿ ಗೆದ್ದರೆ,
    ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್‌ ಗೆದ್ದರೆ,
    ಸಿಎಸ್‌ಕೆ ವಿರುದ್ಧ ಪಂಜಾಬ್ ಗೆದ್ದರೆ,
    ರಾಜಸ್ಥಾನ ವಿರುದ್ಧ ಕೆಕೆಆರ್ ಗೆದ್ದರೆ,
    ಡೆಲ್ಲಿ ವಿರುದ್ಧ ಆರ್‌ಸಿಬಿ ಗೆದ್ದರೆ,
    ಮುಂಬೈ ವಿರುದ್ಧ ಸನ್‌ರೈಸರ್ಸ್‌ ಗೆದ್ದರೆ,
    ಆಗ ಮುಂಬೈ, ಆರ್‌ಸಿಬಿ, ಕೆಕೆಆರ್, ಪಂಜಾಬ್ ಮತ್ತು ಡೆಲ್ಲಿ ತಲಾ 16 ಅಂಕ ಗಳಿಸುತ್ತವೆ. ಆಗ ಉತ್ತಮ ರನ್‌ರೇಟ್ ಹೊಂದಿರುವ 4 ತಂಡಗಳು ಪ್ಲೇಆಫ್​ ಹಂತಕ್ಕೇರುತ್ತವೆ.

    ಲೆಕ್ಕಾಚಾರ-2:
    ಸಿಎಸ್‌ಕೆ ವಿರುದ್ಧ ಕೆಕೆಆರ್ ಗೆದ್ದರೆ,
    ಪಂಜಾಬ್ ವಿರುದ್ಧ ರಾಜಸ್ಥಾನ ಗೆದ್ದರೆ,
    ಡೆಲ್ಲಿ ವಿರುದ್ಧ ಮುಂಬೈ ಗೆದ್ದರೆ,
    ಆರ್‌ಸಿಬಿ ವಿರುದ್ಧ ಸನ್‌ರೈಸರ್ಸ್‌ ಗೆದ್ದರೆ,
    ಸಿಎಸ್‌ಕೆ ವಿರುದ್ಧ ಪಂಜಾಬ್ ಗೆದ್ದರೆ,
    ಕೆಕೆಆರ್ ವಿರುದ್ಧ ರಾಜಸ್ಥಾನ ಗೆದ್ದರೆ,
    ಡೆಲ್ಲಿ ವಿರುದ್ಧ ಆರ್‌ಸಿಬಿ ಗೆದ್ದರೆ,
    ಮುಂಬೈ ವಿರುದ್ಧ ಸನ್‌ರೈಸರ್ಸ್‌ ಗೆದ್ದರೆ,
    ಆಗ ಮುಂಬೈ ಮತ್ತು ಆರ್‌ಸಿಬಿ ತಂಡಗಳು ಅಗ್ರ 2 ತಂಡಗಳಾಗಿ ಪ್ಲೇಆಫ್​ ಹಂತಕ್ಕೇರುತ್ತವೆ. ಕೆಕೆಆರ್, ಪಂಜಾಬ್, ಡೆಲ್ಲಿ, ರಾಜಸ್ಥಾನ ಮತ್ತು ಸನ್‌ರೈಸರ್ಸ್‌ ತಲಾ 14 ಅಂಕಗಳನ್ನು ಗಳಿಸುತ್ತವೆ ಮತ್ತು ಈ ಪೈಕಿ ಉತ್ತಮ ರನ್‌ರೇಟ್ ಹೊಂದಿರುವ 2 ತಂಡಗಳು ಪ್ಲೇಆಫ್​ ಹಂತಕ್ಕೇರುತ್ತವೆ.

    ವೈಯಕ್ತಿಕ ನೋವಿನ ನಡುವೆ ಐಪಿಎಲ್‌ನಲ್ಲಿ ಮಿಂಚುತ್ತಿದ್ದಾರೆ ಕ್ರಿಕೆಟಿಗರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts