More

    ಪ್ರಶಸ್ತಿಗಾಗಿ ಲೇಖಕಿಯರಿಂದ ಕೃತಿಗಳ ಆಹ್ವಾನ

    ಬೆಂಗಳೂರು: ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠಾನವು 2022ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿಗಾಗಿ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಿದೆ.

    ಕೃತಿಗಳು ಆತ್ಮಚರಿತ್ರೆ, ಜೀವನ ಚರಿತ್ರೆಯ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು. ಈ ಕೃತಿಗಳು 2022ರ ಜನವರಿಯಿಂದ ಡಿಸೆಂಬರ್ ಅವಧಿಯೊಳಗೆ ಪ್ರಕಟವಾಗಿರಬೇಕು. ಇದು ಲೇಖಕಿಯರಿಗೆ ಸೀಮಿತವಾದ ಪ್ರಶಸ್ತಿಯಾಗಿದ್ದು, ಪ್ರಶಸ್ತಿಯು 10,000 ರೂ. ನಗದು, ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.

    ಆಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಸೆ.30ರೊಳಗೆ ಜಿ.ಎನ್.ರಂಗನಾಥ ರಾವ್, ಕಾರ್ಯಾಧ್ಯಕ್ಷರು, ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠನ, ನಂ.276, 3ನೇ ಮುಖ್ಯರಸ್ತೆ, 8ನೇ ಬ್ಲಾಕ್, ಕೋರಮಂಗಲ, ಬೆಂಗಳೂರು-560095 ಈ ವಿಳಾಸಕ್ಕೆ ತಲುಪಿಸಬೇಕು ಎಂದು ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಎಚ್.ಎಸ್.ವೆಂಕಟೇಶಮೂರ್ತಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts