More

    ‘ಅಪ್ಪ ಪ್ರಶಸ್ತಿ’ಗೆ ಸಾಹಿತ್ಯಾತ್ಮಕ ಪುಸ್ತಕಗಳ ಆಹ್ವಾನ

    ಮೈಸೂರು: ಸಾಹಿತ್ಯ ಕ್ಷೇತ್ರದ ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ತುಮಕೂರಿನ ಗೆಳೆಯರ ಬಳಗ, ಅಪೂರ್ವ ಪ್ರಕಾಶನದಿಂದ ಕೊಡಮಾಡುವ 2024ನೇ ಸಾಲಿನ ಮೊದಲ ವರ್ಷದ ರಾಜ್ಯ ಮಟ್ಟದ ‘ಅಪ್ಪ ಪ್ರಶಸ್ತಿ’ಗೆ ಸಾಹಿತ್ಯಾತ್ಮಕ ಪುಸ್ತಕಗಳನ್ನು ಆಹ್ವಾನಿಸಲಾಗಿದೆ.
    2021 ಜನವರಿಯಿಂದ 2023ರವರೆಗಿನ ಡಿಸೆಂಬರ್ ಅವಧಿಯಲ್ಲಿ ಪ್ರಕಟವಾಗಿರುವ ಕಥೆ, ಕಾದಂಬರಿ, ನಾಟಕ, ವಿಮರ್ಶೆ, ವೈಚಾರಿಕ, ಲಲಿತ ಪ್ರಬಂಧ, ಸಂಶೋಧನೆ ಸೇರಿದಂತೆ ಕಾವ್ಯ ಪ್ರಕಾರದ ಕವನ ಸಂಕಲನಗಳನ್ನು ಹೊರತುಪಡಿಸಿ ಸಾಹಿತ್ಯದ ಎಲ್ಲ ಪ್ರಕಾರದ ಕೃತಿಗಳನ್ನು ಸ್ಪರ್ಧೆಗೆ ಪುಸ್ತಕದ ಮೂರು ಪ್ರತಿಗಳನ್ನು ಕಳುಹಿಸಬಹುದು. ತೀರ್ಪುಗಾರರು ಆಯ್ಕೆ ಮಾಡಿದ ಎರಡು ಅತ್ಯುತ್ತಮ ಪುಸ್ತಕಗಳಿಗೆ ತಲಾ 5 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕ ನೀಡಲಾಗುವುದು. ಜೂನ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ವಿಜೇತರನ್ನು ಗೌರವಿಸಲಾಗುವುದು.
    ಆಸಕ್ತ ಲೇಖಕರು ಸ್ವ-ಪರಿಚಯ ಪತ್ರದ ಜತೆಗೆ ಸಂಪೂರ್ಣ ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಏ.31ರೊಳಗೆ ತಲುಪುವಂತೆ ಹಡವನಹಳ್ಳಿ ವೀರಣ್ಣಗೌಡ, ಲೇಖಕ ಮತ್ತು ಪ್ರಕಾಶಕರು, ಹೊಸ ಬಡಾವಣೆ, ವಕ್ಕೋಡಿ ರಸ್ತೆ, ಹೆಗ್ಗರೆ, ಸಿದ್ದಾರ್ಥ ಮೆಡಿಕಲ್ ಕಾಲೇಜು ಅಂಚೆ, ತುಮಕೂರು – 572707. ಈ ವಿಳಾಸಕ್ಕೆ ಕಳುಹಿಸಬಹುದು ಎಂದು ಗೆಳೆಯರ ಬಳಗದ ಪರವಾಗಿ ಸಾಹಿತಿ ಟಿ.ಸತೀಶ್‌ಜವರೇಗೌಡ ತಿಳಿಸಿದ್ದಾರೆ. ಮಾಹಿತಿಗಾಗಿ ದಂಡಿನಶಿವರ ಮಂಜುನಾಥ್ – 9590438329 ಅಥವಾ ಹಡವನಹಳ್ಳಿ ವೀರಣ್ಣಗೌಡ – 9845381834 ಅವರನ್ನು ಸಂಪರ್ಕಿಸಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts