More

    ಮಕ್ಕಳ ಮೇಳದಿಂದ ಸಂಸ್ಕೃತಿ ಪರಿಚಯ

    ಕಟೀಲು: ದುರ್ಗಾ ಮಕ್ಕಳ ಮೇಳದ ಮೂಲಕ ಮಕ್ಕಳಿಗೆ ಸಂಸ್ಕೃತಿ ಪರಿಚಯ ಕಾರ್ಯ ನಡೆಯುತ್ತಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಹೇಳಿದರು.
    ಕಟೀಲು ದುರ್ಗಾ ಮಕ್ಕಳ ಮೇಳದ 12ನೇ ವರ್ಷದ ವಾರ್ಷಿಕ ಕಲಾಪರ್ವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಯಕ್ಷಗಾನ ತುಳುನಾಡಿನ ಸಂಸ್ಕೃತಿ ಮಾತ್ರವಲ್ಲದೆ ಆರಾಧನೆ ರೂಪ ಪಡೆದಿದೆ. ಅದನ್ನು ಉಳಿಸಿ ಬೆಳೆಸುವಲ್ಲಿ ದುರ್ಗಾ ಮಕ್ಕಳ ಮೇಳ ವಿಶೇಷ ಪಾತ್ರ ವಹಿಸುತ್ತಿದೆ ಎಂದರು.

    ಕಟೀಲು ದೇವಳ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಶುಭ ಹಾರೈಸಿದರು. ವೇದವ್ಯಾಸ ತಂತ್ರಿ ಅಧ್ಯಕ್ಷತೆ ವಹಿಸಿದ್ದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಿರಿಯ ಶಂಕರನಾರಾಯಣ ದೇವಸ್ಥಾನ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ, ಮುಂಬೈ ಉದ್ಯಮಿ ಪ್ರವೀಣ್ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಲೀಲಾಕ್ಷ ಕರ್ಕೇರ, ಎಕ್ಕಾರು ಬಜ್ಪೆ ಸೇವಾ ವ್ಯವಸಾಯ ಸಹಕಾರಿ ಬ್ಯಾಂಕ್‌ನ ರತ್ನಾಕರ ಶೆಟ್ಟಿ, ಸುದೇಶ್ ರೈ, ಉದ್ಯಮಿಗಳಾದ ನರೇಶ್ ಶೆಣೈ, ಗಿರಿಧರ ಶೆಟ್ಟಿ, ಬಿಪಿನ್ ಪ್ರಸಾದ್ ಶೆಟ್ಟಿ ಕೊಡೆತ್ತೂರುಗುತ್ತು, ಸೌಂದರ್ಯ ರಮೇಶ್ ಕಟೀಲು, ಕಟೀಲು ಗಿರೀಶ್ ಶೆಟ್ಟಿ, ಸಾಂತಬೈಲು ಪಡುಪೆರಾರ ರಾಮಚಂದ್ರ ಕಾವ, ಕೇಶವ ಸನಿಲ್, ಅಶೋಕ್ ಹೊಸ್ಮಾರು ಬಂಟ್ವಾಳ, ಕಟೀಲು ಮೇಳದ ಸಂಚಾಲಕ ಕಲ್ಲಾಡಿ ದೇವಿಪ್ರಸಾದ ಶೆಟ್ಟಿ, ಕೃಷ್ಣ ಪ್ರಸಾದ್ ಶೆಟ್ಟಿ, ವಿಷ್ಣು ಪ್ರಸಾದ ಶೆಟ್ಟಿ, ಡಾ.ಎಂ.ಪ್ರಭಾಕರ ಜೋಷಿ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ದಯಾನಂದ ಮಾಡ, ವಾಸುದೇವ ಶೆಣೈ, ರಾಘವೇಂದ್ರ ಆಚಾರ್ಯ ಬಜ್ಪೆ, ಸ್ಕಂದಪ್ರಸಾದ್ ಭಟ್, ರಾಜೇಶ್ ಐ., ಕೃಷ್ಣ ಕೆ., ಮಿಥುನ ಕೊಡೆತ್ತೂರು, ವಾದಿರಾಜ ಕಲ್ಲೂರಾಯ ಮತ್ತಿತರರಿದ್ದರು. ಮೇಳದ ಅಧ್ಯಕ್ಷ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ಪಶುಪತಿ ಶಾಸ್ತ್ರಿ ಕಾರ್ಯಕ್ರಮ ನಿರೂಪಿಸಿದರು.

    ಮಕ್ಕಳ ಮೇಳದ ಪ್ರಶಸ್ತಿ: ಹಿಮ್ಮೇಳ ಕಲಾವಿದ ಮೋಹನ ಶೆಟ್ಟಿಗಾರ ಅವರಿಗೆ ದುರ್ಗಾ ಮಕ್ಕಳ ಮೇಳದ ಪ್ರಶಸ್ತಿ, ವಿದ್ವಾಂಸ, ಪ್ರಸಂಗಕರ್ತ ರಾಘವ ನಂಬಿಯಾರ್ ಅವರಿಗೆ ಕಟೀಲು ಸದಾನಂದ ಆಸ್ರಣ್ಣ ಪ್ರಶಸ್ತಿ, ಹಿಮ್ಮೇಳ ಕಲಾವಿದ ಪದ್ಯಾಣ ಶಂಕರನಾರಾಯಣ ಭಟ್ಟರಿಗೆ ಕಟೀಲು ಕೃಷ್ಣ ಆಸ್ರಣ್ಣ ಪ್ರಶಸ್ತಿ ಹಾಗೂ ಹಿಮ್ಮೇಳ ಕಲಾವಿದ ಅಕ್ಷಯ ಕುಮಾರ ವಿಟ್ಲ ಅವರಿಗೆ ಶ್ರೀನಿಧಿ ಆಸ್ರಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts