More

    ಕಾಪು ಲೈಟ್‌ಹೌಸ್ ಪರಿಚಯ ಶ್ಲಾಘನೀಯ

    ಪಡುಬಿದ್ರಿ: ಕಾಪು ಲೈಟ್‌ಹೌಸ್ ನಿರ್ಮಾಣಗೊಂಡು 120 ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ ಲೈಟ್‌ಹೌಸ್‌ನ ಲಕೋಟೆಯನ್ನು ಬಿಡುಗಡೆಗೊಳಿಸುವ ಅವಕಾಶ ಅಂಚೆ ಇಲಾಖೆಗೆ ದೊರಕಿರುವುದು ಸ್ವಾಗತಾರ್ಹ ಎಂದು ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ಹೇಳಿದರು.

    ಸೆ.21ರಂದು ರಾಷ್ಟ್ರ್ರೀಯ ಲೈಟ್‌ಹೌಸ್ ದಿನ ಮತ್ತು ಕಾಪು ದೀಪಸ್ತಂಭ ಸ್ಥಾಪನೆಗೊಂಡ 120ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅಂಚೆ ಅಧೀಕ್ಷಕರ ಕಚೇರಿ ಉಡುಪಿ ವಲಯ ಸಿದ್ಧಪಡಿಸಿರುವ ದೀಪಸ್ತಂಭದ ವಿಶೇಷ ಅಂಚೆ ಲಕೋಟೆಯನ್ನು ಕಾಪು ಅಂಚೆ ಕಚೇರಿಯಲ್ಲಿ ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

    ಸ್ವಾತಂತ್ರೃ ಪೂರ್ವದಲ್ಲಿ ನಿರ್ಮಾಣಗೊಂಡಿರುವ ಲೈಟ್‌ಹೌಸ್‌ನ ಕಾರ್ಯನಿರ್ವಹಣೆ, ಅವಶ್ಯಕತೆೆ ಮತ್ತು ಇತಿಹಾಸವನ್ನು ಜನರಿಗೆ ತಿಳಿಸುವುದರೊಂದಿಗೆ, ದೇಶ-ವಿದೇಶಗಳ ಪ್ರಜೆಗಳಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಇಲಾಖೆಯು ಅಂಚೆ ಲಕೋಟೆ ಸಿದ್ಧಪಡಿಸಿದೆ ಎಂದರು.

    ಕಳತ್ತೂರು ಪದ್ಮಾವತಿ ಶೆಟ್ಟಿ ಗುರ್ಮೆ ಫೌಂಡೇಷನ್ ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ವಿಶೇಷ ಅಂಚೆ ಲಕೋಟೆ ಪ್ರಾಯೋಜಕತ್ವ ವಹಿಸಿದ್ದರು. ಅಂಚೆ ಚೀಟಿ ಸಂಗ್ರಾಹಕ ಮಂಗಳೂರಿನ ಕೆ.ಶ್ರೀಧರ್ ಅವರಿಂದ ಲೈಟ್ ಹೌಸ್‌ಗಳ ಮಾಹಿತಿಗಳುಳ್ಳ ವಿಶೇಷ ಅಂಚೆಚೀಟಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

    ಲಕೋಟೆಯ ಸಹ ಪ್ರಾಯೋಜಕ ಶೇಖರ್ ಬಿ. ಶೆಟ್ಟಿ ಕಳತ್ತೂರು, ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮಹಮದ್ ಫಾರೂಕ್ ಚಂದ್ರನಗರ, ಕಾಪು ಜನ ಸಂರ್ಪಕ ಜನ ಸೇವಾ ವೇದಿಕೆ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ ಕಳತ್ತೂರು, ಬಿಪಿಸಿ ಅಂಚೆ ಅಧೀಕ್ಷಕ ರಾಜಶೇಖರ್ ಭಟ್, ಜಯರಾಮ ಶೆಟ್ಟಿ, ಕೃಷ್ಣರಾಜ ವಿಠಲ ಭಟ್, ಮಾಧವ ಟಿ.ವಿ., ವಿಭಾಗೀಯ ಕಚೆೇರಿ ಸಹಾಯಕಿ ಲೀಲಾವತಿ ಆಚಾರ್ಯ, ಕಾಪು ಅಂಚೆ ಪಾಲಕ ಕೃಷ್ಣಪ್ಪ ಉಪಸ್ಥಿತರಿದ್ದರು. ಉಡುಪಿ ವಲಯ ಅಂಚೆ ಅಧೀಕ್ಷಕ ನವೀನ್‌ಚಂದರ್ ಸ್ವಾಗತಿಸಿದರು. ಮಾರುಕಟ್ಟೆ ಪ್ರಬಂಧಕಿ ಪೂರ್ಣಿಮಾ ಜನಾರ್ದನ್ ವಂದಿಸಿದರು. ಉಡುಪಿ ದಕ್ಷಿಣ ವಿಭಾಗದ ಉಪ ಅಂಚೆ ಅಧೀಕ್ಷಕ ನವೀನ್ ವಿ.ಎಲ್. ವಂದಿಸಿದರು.

    ಮೀನುಗಾರರು ಮತ್ತು ಸಮುದ್ರಯಾನಿಗಳನ್ನು ಸುರಕ್ಷಿತವಾಗಿ ದಡಕ್ಕೆ ಸೇರಿಸುವಲ್ಲಿ ಲೈಟ್‌ಹೌಸ್‌ಗಳ ಪಾತ್ರ ಮಹತ್ವದ್ದಾಗಿತ್ತು. ಜಿ.ಪಿ.ಎಸ್., ಗೂಗಲ್ ಮ್ಯಾಪ್, ಮೊಬೈಲ್ ಫೋನ್‌ಗಳ ಸೇವೆಗಳು ಲಭ್ಯವಿಲ್ಲದ ಕಾಲದಲ್ಲಿ ಕೇವಲ ಲೈಟ್‌ಹೌಸ್‌ನ ಬೆಳಕು ಮತ್ತು ಗಾಳಿಯ ದಿಕ್ಕನ್ನು ಅನುಸರಿಸಿ ದಡ ಸೇರುತ್ತಿದ್ದರು. ಈ ವೈಶಿಷ್ಟೃತೆಯನ್ನು ಜಗತ್ತಿಗೆ ತಿಳಿಸುವಲ್ಲಿ ಅಂಚೆ ಇಲಾಖೆ ಹೊರ ತಂದಿರುವ ಅಂಚೆ ಲಕೋಟೆ ಸಹಕಾರಿಯಾಗಲಿದ್ದು, ಕಾಪುವಿನ ಗೌರವವನ್ನೂ ಹೆಚ್ಚಿಸಿದೆ.
    – ಗುರ್ಮೆ ಸುರೇಶ್ ಶೆಟ್ಟಿ
    ಕಳತ್ತೂರು ಪದ್ಮಾವತಿ ಶೆಟ್ಟಿ ಗುರ್ಮೆ ಫೌಂಡೇಷನ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts