More

    ಡಾ.ಬಾಬೂಜೀ ಚಿಂತನೆಗಳನ್ನು ಯುವಕರಿಗೆ ಪರಿಚಯಿಸಿ

    ಕೆ.ಎಂ.ದೊಡ್ಡಿ: ಹಸಿರು ಕ್ರಾಂತಿ ಹರಿಕಾರ, ಡಾ.ಬಾಬು ಜಗಜೀವನರಾಂ ಅವರ ಆದರ್ಶ, ಚಿಂತನೆಗಳನ್ನು ಯುವ ಪೀಳಿಗೆ ಅನುಸರಿಸಬೇಕು ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.

    ಸಮೀಪದ ಭುಜವಳ್ಳಿ ಹಾಗೂ ಬಿದರಹೊಸಹಳ್ಳಿಯಲ್ಲಿ ಸೋಮವಾರ ಡಾ.ಬಾಬು ಜಗಜೀವನರಾಂ ಭವನ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯ ಭವನಗಳು ಸದಾ ಚಟುವಟಿಕೆ ಕೇಂದ್ರಗಳಾಗಬೇಕು. ಕೆಲವು ಸಮಾಜದವರು ಸಮುದಾಯ ಭವನವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಕಟ್ಟಡ ನಿರ್ಮಾಣ ಮಾಡಿ ಪಾಳು ಬಿಟ್ಟಿರುವುದರಿಂದ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಪ್ರತಿಯೊಬ್ಬರೂ ಸಮುದಾಯ ಭವನಗಳಲ್ಲಿ ಮಹಿಳಾ ಸ್ವ-ಸಹಾಯ ಸಂಘಗಳ ಚಟುವಟಿಕೆಗೆ, ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕೆ, ಸಭೆ ಸಮಾರಂಭಗಳಿಗೆ, ಸರಳ ವಿವಾಹಗಳಿಗೆ ಸಮುದಾಯ ಭವನಗಳ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

    ಡಾ.ಬಾಬು ಜಗಜೀವನರಾಂ ಸಾಮಾಜಿಕ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ಮಹಾನ್ ಪುರುಷರಾಗಿದ್ದಾರೆ. ಇಂತಹ ಮಹಾತ್ಮರ ತತ್ವ-ಆದರ್ಶಗಳನ್ನು ಅಳವಡಿಸಿಕೊಂಡಾಗ ಸದೃಢ ದೇಶದ ನಿರ್ಮಾಣ ಸಾಧ್ಯವಾಗುತ್ತದೆ’ ಎಂದು ಹೇಳಿದರು.

    ಇಒ ಸಂದೀಪ್, ಸಮಾಜ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ನಾಗಲಕ್ಷ್ಮೀ, ಜಿ.ಪಂ ಮಾಜಿ ಸದಸ್ಯ ಎ.ಎಸ್.ರಾಜೀವ್, ಗ್ರಾ.ಪಂ ಅಧ್ಯಕ್ಷ ವೀರಭದ್ರ, ಭಾರತೀನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಟ್ಟನಹಳ್ಳಿ ಶಿವಲಿಂಗೇಗೌಡ, ಗ್ರಾಪಂ ಸದಸ್ಯ ಲೋಕೇಶ್, ಮಾಜಿ ಸದಸ್ಯರಾದ ಚಿಕ್ಕಚನ್ನಯ್ಯ, ದೇವರಾಜು, ಬಸವರಾಜು, ಮುಖಂಡ ಕಾಡುಕೊತ್ತನಹಳ್ಳಿ ಚಿದಂಬರ್ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts